ತುಮಕೂರು, ಏ.23: ಜಿಲ್ಲೆಯ ತುರುವೇಕೆರೆ(Turuvekere) ತಾಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ವಾಟರ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹೌದು, ಹೆಚ್ಚುವರಿ ನೀರು ಬಿಟ್ಟಿಲ್ಲ ಎಂದು ಅದೇ ಗ್ರಾಮದ ನಾಲ್ವರು ಸೇರಿಕೊಂಡು ವಾಟರ್ ಮ್ಯಾನ್ ಶಬ್ಬಿರ್ ಎಂಬಾತನ ಮೇಲೆ ಹಲ್ಲೆ ಮುಂದಾಗಿದ್ದು, ಮಧ್ಯೆ ಪ್ರವೇಶಿಸಿದ ಗ್ರಾಮ ಪಂಚಾಯತಿ ಸದಸ್ಯ ನಯಾಜ್ ಮೇಲೂ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಕುರಿತು ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ಬಾವಿಯೊಳಗೆ ಉಸಿರುಗಟ್ಟಿ ರಿಂಗ್ ಕಾರ್ಮಿಕರಿಬ್ಬರ ದುರ್ಮರಣ ಹೊಂದಿದ ಧಾರುಣ ಘಟನೆ ನಡೆದಿದೆ. ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಮೃತಪಟ್ವವರು. ಕಾರ್ಮಿಕರು 30 ಫೀಟ್ ಆಳದ ಬಾವಿಗೆ ರಿಂಗ್ ಹಾಕಲು ಇಳಿದಿದ್ದರು. ಈ ವೇಳೆ ಬಾವಿಯೊಳಗೆ ಆಕ್ಸಿಜನ್ ಸಿಗದೇ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಬಳಿಕ ಬಾವಿಯೊಳಗಿದ್ದ ಇಬ್ಬರ ಮೃತದೇಹವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ. ಇನ್ನು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಮೃತ ಇಬ್ರಾಹಿಂ ಪರಿಣಿತರಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಪಿಯುಸಿ ವಿದ್ಯಾರ್ಥಿಗಳ ನಡುವೆ ಗಲಾಟೆ; ಊರಿಂದ ಬಂದವನಿಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಹಲ್ಲೆ
ಚಿಕ್ಕಮಗಳೂರು: ವಿದ್ಯುತ್ ಶಾಕ್ನಿಂದ ಲೈನ್ ಮ್ಯಾನ್ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಮಹದೇವ್ (30) ವಿದ್ಯುತ್ ಶಾಕ್ನಿಂದ ಮೃತಪಟ್ಟ ಲೈನ್ ಮ್ಯಾನ್. ಟಾನ್ಸ್ ಫಾರ್ಮ್ ರಿಪೇರಿ ಹಿನ್ನಲೆ ನಾಲ್ವರು ಲೈನ್ ಮ್ಯಾನ್ ಹಾಗೂ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಏಕಾಏಕಿ ಕರೆಂಟ್ ಬಂದಿದ್ದು, ವಿದ್ಯುತ್ ಶಾಕ್ಗೆ ಕಂಬದ ಮೇಲೆಯೇ ಮಹದೇವ್ ಅವರು ಮೃತಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ