
ತುಮಕೂರು, ಏ.21: ಇದೇ ಏಪ್ರಿಲ್ 26 ರಂದು ಲೋಕಸಭಾ ಚುನಾವಣೆ(Lok sabha election) ಮತದಾನ ಇರುವ ಹಿನ್ನಲೆ ತುಮಕೂರು (Tumkur) ಜಿಲ್ಲೆಯಿಂದ ಕುಖ್ಯಾತ ರೌಡಿ ಕುಣಿಗಲ್ ಗಿರಿಯನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಜಿಲ್ಲೆಯ 825 ರೌಡಿ ಶೀಟರ್ಗಳಲ್ಲಿ 31 ಕುಖ್ಯಾತ ರೌಡಿಗಳನ್ನ ಮಾತ್ರ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಇತ್ತೀಚೆಗಷ್ಟೆ ಕುಣಿಗಲ್ ತಾಲ್ಲೂಕಿನ ಮೋದೂರು ಗ್ರಾಮದ ನಟೋರಿಯಸ್ ಕುಣಿಗಲ್ ಗಿರಿ ಜೈಲಿನಿಂದ ಬಿಡುಗಡೆಯಾಗಿದ್ದ. ಇನ್ನು ಸಾರ್ವಜನಿಕರ ವಲಯದಲ್ಲಿ ಅಶಾಂತಿ ಮೂಡಿಸುವ 1200 ಮಂದಿ ರೌಡಿಗಳ ಚಟುವಟಿಕೆ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಪೊಲೀಸ್, ನೋಡೆಲ್ ಆಫೀಸರ್ ಕಾರ್ಯನಿರ್ವಹಿಸುತ್ತಿದ್ದು, ಶಾಂತಿಯುತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ತುಮಕೂರು ಎಸ್ಪಿ ಅಶೋಕ್ ಕೆವಿ ಹೇಳಿದ್ದಾರೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ: ಚಿತ್ರದುರ್ಗ ಜಿಲ್ಲೆಯಿಂದ ಮೂವರನ್ನು ಗಡಿಪಾರು ಮಾಡಿದ ಉಪವಿಭಾಗಾಧಿಕಾರಿ
ಯಾದಗಿರಿ: ಮಳೆ ನೀರು ತೆರವು ಮಾಡುವಾಗ ಕಟ್ಟಡದಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಯಾದಗಿರಿ ನಗರದ ಆಶ್ರಯ ಲಾಡ್ಜ್ನಲ್ಲಿ ನಡೆದಿದೆ. ಲಾಡೀಸ್ ಗಲ್ಲಿ ನಿವಾಸಿ ಅಶೋಕ್ ಕಟ್ಟಿಮನಿ(40) ಮೃತ ವ್ಯಕ್ತಿ. ಮಳೆಯಿಂದ ಕಟ್ಟಡದ ಟೆರಸ್ ಮೇಲೆ ನೀರು ಸಂಗ್ರಹವಾಗಿತ್ತು. ಈ ಹಿನ್ನಲೆ ನೀರು ತೆರವು ಮಾಡುವಾಗ ಕಟ್ಟಡದ ಮೇಲಿಂದ ಕಾಲು ಜಾರಿ ಬಿದ್ದು ದುರ್ಘಟನೆ ನಡೆದಿದ್ದು, ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Sun, 21 April 24