ಲೋಕಸಭಾ ಚುನಾವಣೆ: ಚಿತ್ರದುರ್ಗ ಜಿಲ್ಲೆಯಿಂದ ಮೂವರನ್ನು ಗಡಿಪಾರು ಮಾಡಿದ ಉಪವಿಭಾಗಾಧಿಕಾರಿ

ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಚೆಕ್​​ಪೋಸ್ಟ್​ಗಳನ್ನು ಕೂಡ ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ. ಅದರಂತೆ ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಕಾನೂನು ಕ್ರಮ ಕೈಗೊಂಡಿದ್ದು, ಚಿತ್ರದುರ್ಗ(Chitradurga) ಜಿಲ್ಲೆಯಿಂದ ಮೂವರನ್ನು ಗಡಿಪಾರು ಮಾಡಿ ಚಿತ್ರದುರ್ಗ ಉಪವಿಭಾಗಾಧಿಕಾರಿ ಕಾರ್ತಿಕ್ ಅವರು ಆದೇಶಿಸಿದ್ದಾರೆ.

ಲೋಕಸಭಾ ಚುನಾವಣೆ: ಚಿತ್ರದುರ್ಗ ಜಿಲ್ಲೆಯಿಂದ ಮೂವರನ್ನು ಗಡಿಪಾರು ಮಾಡಿದ ಉಪವಿಭಾಗಾಧಿಕಾರಿ
ಚಿತ್ರದುರ್ಗ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 28, 2024 | 5:51 PM

ಚಿತ್ರದುರ್ಗ, ಮಾ.28: ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಚೆಕ್​​ಪೋಸ್ಟ್​ಗಳನ್ನು ಕೂಡ ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ. ಅದರಂತೆ ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಕಾನೂನು ಕ್ರಮ ಕೈಗೊಂಡಿದ್ದು, ಚಿತ್ರದುರ್ಗ(Chitradurga) ಜಿಲ್ಲೆಯಿಂದ ಮೂವರನ್ನು ಗಡಿಪಾರು ಮಾಡಿ ಚಿತ್ರದುರ್ಗ ಉಪವಿಭಾಗಾಧಿಕಾರಿ ಕಾರ್ತಿಕ್ ಅವರು ಆದೇಶಿಸಿದ್ದಾರೆ. ನಗರದ ಚೇಳಗುಡ್ಡ ಬಡಾವಣೆ ನಿವಾಸಿ ಬಷೀರ್, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ವೇಣುಗೋಪಾಲ್ ಮತ್ತು ಚಿತ್ರದುರ್ಗ ತಾಲೂಕಿನ ಕೊಳಹಾಳ್ ನಿವಾಸಿ ಸಂತೋಷ್ ಎಂಬುವವರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ‌ ಆರೋಪಿಗಳಾಗಿದ್ದು. ಈ ಹಿನ್ನಲೆ ಪೊಲೀಸರು ನೀಡಿದ‌ ಪ್ರಸ್ತಾವನೆ ಪರಿಶೀಲಿಸಿ ಗಡಿಪಾರು ಗಡಿಪಾರು ಮಾಡಲಾಗಿದೆ.

ತಮ್ಮನಾಯಕನಹಳ್ಳಿಯಲ್ಲಿ ಜಿಂಕೆ ಬೇಟೆಯಾಡ್ತಿದ್ದವರ ಬಂಧನ

ಬೆಂಗಳೂರು ಗ್ರಾಮಾಂತರ: ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಬಳಿ ಜಿಂಕೆ ಬೇಟೆಯಾಡುತ್ತಿದ್ದವರನ್ನು ಅರಣ್ಯ ಸಿಬ್ಬಂದಿ ಅರೆಸ್ಟ್​ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಮರಳವಾಡಿ ಗ್ರಾಮದ ದೇವರಾಜ್ , ಇಂಡ್ಲವಾಡಿ ಗ್ರಾಮದ ಕಿಶೋರ್​ ಹಾಗೂ ಆದೂರು ಗ್ರಾಮದ ರಾಮಕೃಷ್ಣ ಬಂಧಿತ ಆರೋಪಿಗಳು. ಬಂಧಿತರ ಬಳಿ ಇದ್ದ ಜಿಂಕೆ ಮಾಂಸ, ಚರ್ಮ, ಮೂರು ಬೈಕ್, ಒಂದು ಕಾರು ಹಾಗೂ ನಾಡ ಬಂದೂಕನ್ನು ಜಪ್ತಿ ಮಾಡಲಾಗಿದೆ. ಇನ್ನು ಇವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ತಮ್ಮನಾಯಕನಹಳ್ಳಿ ಬೀಟ್ ಏರಿಯಾದಲ್ಲಿ ಜಿಂಕೆ ಭೇಟೆಯಾಡಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಆನೇಕಲ್ ವಲಯ ಅರಣ್ಯಾಧಿಕಾರಿ ರಘು ಮತ್ತು ತಂಡದಿಂದ ದಾಳಿ ಮಾಡಲಾಗಿತ್ತು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನಲೆ ಆನೇಕಲ್​ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮತ್ತೊಬ್ಬ ರೌಡಿಶೀಟರ್ ಫಜಲ್​ ಅಹ್ಮದ್​​​ ಗಡಿಪಾರು, ಇನ್ನುಳಿದವರೆಗೂ ಖಡಕ್ ಎಚ್ಚರಿಕೆ

ಅಕ್ರಮವಾಗಿ ಗಾಂಜಾ ಸೇವನೆ ಮಾಡಿ, ಮಾರಟ ಮಾಡ್ತಿದ್ದವರ ಬಂಧನ

ಬಳ್ಳಾರಿ: ನಗರದ ಮೋತಿ ಸರ್ಕಲ್ ಬಳಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಸೈಯದ್ ಗುಲಾಬ್ ಸಾಬ್ ಹಾಗೂ ಆಲಂ ಬಾಷಾ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿ ಇದ್ದ 750 ಗ್ರಾಂ ತೂಕದ 75 ಸಾವಿರಕ್ಕೂ ಹೆಚ್ಚು ಮೌಲ್ಯದ ಗಾಂಜಾವನ್ನ ಪೊಲೀಸರು ಜಪ್ತಿ ಮಾಡಿದ್ದು, ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Thu, 28 March 24