ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ, ಬಜರಂಗದಳ ಮುಖಂಡನಿಗೆ ಗಡಿಪಾರು ನೋಟಿಸ್

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಕಾರ್ಯಕರ್ತರ ವಿರುದ್ಧ ಪೊಲೀಸರು ಗಡಿಪಾರು ಅಸ್ತ್ರ ಪ್ರಯೋಗಿಸುತ್ತಲೇ ಇದೆ. ಭಜರಂಗದಳ ಮಾಜಿ ಸಂಚಾಲಕ ತುಡುಕೂರು ಮಂಜು ಅವರನ್ನು ಗಡಿಪಾರು ಮಾಡಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಾ.14ರಂದು ಜಿಲ್ಲಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ, ಬಜರಂಗದಳ ಮುಖಂಡನಿಗೆ ಗಡಿಪಾರು ನೋಟಿಸ್
ತುಡುಕೂರು ಮಂಜುನಾಥ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on:Mar 09, 2024 | 9:13 AM

ಚಿಕ್ಕಮಗಳೂರು, ಮಾ.09: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಕಾರ್ಯಕರ್ತರ ವಿರುದ್ಧ ಪೊಲೀಸರು ಗಡಿಪಾರು ಅಸ್ತ್ರ ಪ್ರಯೋಗಿಸುತ್ತಲೇ ಇದೆ. ಕೆಲ ತಿಂಗಳ ಹಿಂದೆಯಷ್ಟೇ ಮಂಗಳೂರಿನ ಐವರು ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದ್ದ ಸರ್ಕಾರ, ಇದೀಗ ಚಿಕ್ಕಮಗಳೂರಿನ ಓರ್ವ ಹಿಂದೂ ಕಾರ್ಯಕರ್ತನಿಗೆ ಗಡಿಪಾರು ನೋಟಿಸ್​ (Deportation notice) ಜಾರಿ ನೀಡಿದೆ. ಭಜರಂಗದಳ (Bajrang Dal) ಮಾಜಿ ಸಂಚಾಲಕ ತುಡುಕೂರು ಮಂಜುನಾಥ್​​ ಅವರನ್ನು ಗಡಿಪಾರು ಮಾಡಿ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಾ.14ರಂದು ಜಿಲ್ಲಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.

“ಬಿಜೆಪಿ (BJP) ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಚಿಕ್ಕಮಗಳೂರು ಜಿಲ್ಲೆಯು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ತನ್ನ ರಾಜಕೀಯ ಲಾಭಕ್ಕೋಸ್ಕರ ಮತೀಯ ಗಲಭೆಯನ್ನುಂಟುಮಾಡುವ ಸಾಧ್ಯತೆ ಇದೆ. ಅಲ್ಲದೆ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠ” ವಿವಾದ ವಿಷಯದಲ್ಲಿ ಮಧ್ಯೆ ಪ್ರವೇಶಿಸುತ್ತಿದ್ದು, ಈ ವಿಚಾರದಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಲದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ” ಎಂಬ ಕಾರಣ ಸೇರಿದಂತೆ 17 ಕಾರಣಗಳನ್ನು ನೀಡಿ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ.

ಆದೇಶ ಪತ್ರದಲ್ಲಿ ಏನಿದೆ ?

ಚಿಕ್ಕಮಗಳೂರು ತಾಲ್ಲೂಕು, ಆಲ್ಲೂರು ಹೋಬಳಿ, ಶುಡುಕೂರು ಗ್ರಾಮದ ವಾಸಿ ತುಡುಕೂರು ಮಂಜುನಾಥ  ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸಮಾಜಘಾತುಕ ಚಟುವಟಿಕೆಯಿಂದ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಭದ್ರತೆ ಭಂಗ ಮಾಡಿ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ)(ಬಿ) ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರು: ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಗಡಿಪಾರು ನೋಟಿಸ್

ಗಡಿಪಾರಿಗೆ ಇನ್ನಿತರೆ ಕಾರಣಗಳು

ಮಂಜುನಾಥ್​ ವಿರುದ್ಧು 17 ಕ್ರಿಮಿನಲ್ ಪ್ರಕರಣಗಳು ಮತ್ತು 7 ಮುಂಜಾಗ್ರತಾ ಪ್ರಕರಣಗಳು ದಾಖಲಾಗಿವೆ. ಅಮಾಯಕ ಯುವ ಜನರನ್ನು ಪುಚೋದಿಸಿ ಅವರಲ್ಲಿ ಮತೀಯ ದ್ವೇಷವನ್ನು ತುಂಬಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದಾನೆ.

ಭಾರತದ ಈಶಾನ್ಯ ರಾಜ್ಯಗಳಿಂದ ಬಹಳಷ್ಟು ಜನ ಕಾರ್ಮಿಕರು ಚಿಕ್ಕಮಗಳೂರು, ದಿನಗೂಲಿ ಕಾರ್ಮಿಕರಾಗಿ ಕೆಲಸಮಾಡುತ್ತಿದ್ದು ಅವರನ್ನು ಬಾಂಗ್ಲಾದೇಶದಿಂದ ಆಕ್ರಮವಾಗಿ ವಲಸೆ ಬಂದವರೆಂದು ಬಿಂಬಿಸಿ ಅಪಪ್ರಚಾರ ಮಾಡಿ ಅವರ ಮೇಲೆ ಆಗಾಗ ಹಲ್ಲೆ ನಡೆಸಿದ್ದಾರೆ ಎಂದು ಕಾರಣ ನೀಡಿ ಗಡಿಪಾರು ಮಾಡಲಾಗಿದೆ.

ತುಡುಕೂರು ಮಂಜುನಾಥ ಜರಂಗದಳ ಜಿಲ್ಲಾ ಘಟಕದ ಮಾಜಿ ಸಂಚಾಲಕರಾಗಿದ್ದರು. ಸಂಘಟನೆ ಹೋರಾಟದಲ್ಲಿ ಮಂಜುನಾಥ್​ ವಿರುದ್ಧ 24 ಪ್ರಕರಣ ದಾಖಲಾಗಿದ್ದವು. 24ರ ಪೈಕಿ 22 ಪ್ರಕರಣಗಳು ಖುಲಾಸೆಯಾಗಿವೆ.

ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡುತ್ತಿದೆ. ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:51 am, Sat, 9 March 24