AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಶಿಕಾರಿಪುರದ ಅನಭಿಷಿಕ್ತ ದೊರೆ: ಬಿರುದು ಕೊಟ್ಟ ಕಾಂಗ್ರೆಸ್ ಶಾಸಕ ತಮ್ಮಯ್ಯ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಕಾಂಗ್ರೆಸ್ ಶಾಸಕ ತಮ್ಮಯ್ಯ ಅವರು ಬಿಜೆಪಿ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಶಿಕಾರಿಪುರದ ಅನಭಿಷಿಕ್ತ ದೊರೆ ಎಂದು ಕರೆದಿದ್ದಾರೆ. ಅಲ್ಲದೆ, ಯಡಿಯೂರಪ್ಪ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಯಡಿಯೂರಪ್ಪ ಶಿಕಾರಿಪುರದ ಅನಭಿಷಿಕ್ತ ದೊರೆ: ಬಿರುದು ಕೊಟ್ಟ ಕಾಂಗ್ರೆಸ್ ಶಾಸಕ ತಮ್ಮಯ್ಯ
ಯಡಿಯೂರಪ್ಪ ಅವರನ್ನು ಶಿಕಾರಿಪುರದ ಅನಭಿಷಿಕ್ತ ದೊರೆ ಎಂದು ಕರೆದ ಕಾಂಗ್ರೆಸ್ ಶಾಸಕ ತಮ್ಮಯ್ಯ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Rakesh Nayak Manchi|

Updated on: Mar 09, 2024 | 3:26 PM

Share

ಚಿಕ್ಕಮಗಳೂರು, ಮಾ.9: ಕಾಂಗ್ರೆಸ್ ಶಾಸಕ ತಮ್ಮಯ್ಯ (Thammaiah) ಅವರು ಬಿಜೆಪಿ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಶಿಕಾರಿಪುರದ (Shikharipura) ಅನಭಿಷಿಕ್ತ ದೊರೆ ಎಂದು ಕರೆದಿದ್ದಾರೆ. ಚಿಕ್ಕಮಗಳೂರು (Chikkamagaluru) ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಉರ್ದು (Urdu) ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಯಡಿಯೂರಪ್ಪ ಅವರು ಎಂದಿಗೂ ಯಾವ ಧರ್ಮವನ್ನ ವಿರೋಧಿಸಲಿಲ್ಲ. ದೇಶದಲ್ಲಿ ಮುಸ್ಲಿಮರು ಸಾರಾಸಗಟಾಗಿ ಬಿಜೆಪಿಗೆ ಮತ ಹಾಕುರುವುದು ಶಿಕಾರಿಪುರದಲ್ಲಿ ಮಾತ್ರ. ಅವರು ಕೆಜೆಪಿ ಕಟ್ಟಿದಾಗ ಮಸೀದಿಯಲ್ಲಿ ಟೋಪಿ ಹಾಕಿದರು. ಆ ಫೋಟೋ ಹಾಕಿ ತುಂಬಾ ಕಿಂಡಲ್ ಮಾಡಿದರು. ವ್ಯಕ್ತಿ ತನ್ನ ಧರ್ಮದ ಜೊತೆ ಎಲ್ಲಾ ಧರ್ಮವನ್ನ ಪ್ರೀತಿಸಬೇಕು. ಆತನನ್ನ ಎಲ್ಲಾ ಸಂದರರ್ಭದಲ್ಲೂ ಎಲ್ಲರೂ ಒಪ್ಪುತ್ತಾರೆ ಎಂದರು.

ಇದನ್ನೂ ಓದಿ: ಮುನಿಸು ಮರೆತು ಒಂದಾದ ಬಿ.ಎಸ್ ಯಡಿಯೂರಪ್ಪ, ವಿ.ಸೋಮಣ್ಣ

ಯಡಿಯೂರಪ್ಪ ಅವರ ಆಡಳಿತ ಮತ್ತು ನಡೆಯನ್ನು ಸ್ವಪಕ್ಷದವರು ಮಾತ್ರವಲ್ಲದೆ, ವಿರೋಧಿ ಪಕ್ಷ ಕಾಂಗ್ರೆಸ್ ನಾಯಕರು ಕೂಡ ಈ ಹಿಂದೆ ಮುಕ್ತ ಕಂಠದಿಂದ ಹೊಗಳಿದ್ದರು. ಯಡಿಯೂರಪ್ಪ ಅವರ ಸಾಮರಸ್ಯ, ಸೌಹಾರ್ದಯುತ ನಡೆಯ ಕುರಿತು ಜಮೀರ್ ಅಹ್ಮದ್ ಖಾನ್ ಹೊಗಳಿಕೆಯ ಮಾತುಗಳನ್ನಾಡಿದ್ದರು. ಶಿಕಾರಿಪುರದಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈ ಹಿಂದೆ ಕಾಂಗ್ರೆಸ್​ನ ಬಿಕೆ ಸಂಗಮೇಶ್ವರ್ ಕೂಡ ಹೊಗಳಿದ್ದರು. ಹೀಗೆ ಅನೇಕರು ಹೊಗಳಿಕೆಗೆ ಪಾತ್ರರಾಗಿರುವ ಯಡಿಯೂರಪ್ಪ ಅವರು ರೈತ ನಾಯಕ ಎಂದೂ ಕರೆಯಲ್ಪಡುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ