ತುಮಕೂರು: ಚುನಾವಣಾ ಅಧಿಕಾರಿಗಳಿಂದ ದಾಳಿ; ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಕುಕ್ಕರ್ ವಶಕ್ಕೆ

ಲೋಕಸಭಾ ಚುನಾವಣೆ ಹಿನ್ನಲೆ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್​ಗಳನ್ನಯ ತುಮಕೂರು ಜಿಲ್ಲೆಯ ಕುಣಿಗಲ್​ನ(Kunigal) 22ನೇ ವಾರ್ಡ್​ನಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಸಂಸದ ಡಿ.ಕೆ.ಸುರೇಶ್​ರಿಂದ ಈ ಕುಕ್ಕರ್​ಗಳನ್ನು ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಚುನಾವಣಾಧಿಕಾರಿಗಳು ಕುಕ್ಕರ್​ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ತುಮಕೂರು: ಚುನಾವಣಾ ಅಧಿಕಾರಿಗಳಿಂದ ದಾಳಿ; ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಕುಕ್ಕರ್ ವಶಕ್ಕೆ
ಕುಣಿಗಲ್​ನಲ್ಲಿ ಕುಕ್ಕರ್​ ವಶಕ್ಕೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 20, 2024 | 8:44 PM

ತುಮಕೂರು, ಮಾ.20: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 80ಕ್ಕೂ ಹೆಚ್ಚು ಕುಕ್ಕರ್​ಗಳನ್ನು ತುಮಕೂರು ಜಿಲ್ಲೆಯ ಕುಣಿಗಲ್​ನ(Kunigal) 22ನೇ ವಾರ್ಡ್​ನಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಮಲ್ಲಿಪಾಳ್ಯದ ಬೆಟ್ಟಸ್ವಾಮಿಗೆ ಸೇರಿದ ಗೋದಾಮಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕುಕ್ಕರ್​ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ರಂಗನಾಥ್ ಭಾವಚಿತ್ರವಿರುವ ಕುಕ್ಕರ್​ಗಳನ್ನು ಜಪ್ತಿ ಮಾಡಲಾಗಿದೆ.

ಡಿ.ಕೆ.ಸುರೇಶ್​ರಿಂದ ಕುಕ್ಕರ್ ಹಂಚಿಕೆ ಆರೋಪ

ಟಿಸಿ ರಿಪೇರಿ ಮಾಡುವ ಗೋದಾಮಿನಲ್ಲಿ ಕುಕ್ಕರ್​ ದಾಸ್ತಾನು ಮಾಡಿದ್ದರು. ಮಧ್ಯಾಹ್ನ ಕುಕ್ಕರ್ ಕೇಳಿದ್ದ ವೃದ್ಧೆ ಮೇಲೆ ‘ಕೈ’ ಮುಖಂಡ ಹಲ್ಲೆ ಮಾಡಿದ್ದ. ಸಂಸದ ಡಿ.ಕೆ.ಸುರೇಶ್​ರಿಂದ ಈ ಕುಕ್ಕರ್​ಗಳನ್ನು ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಚುನಾವಣಾಧಿಕಾರಿಗಳು ಕುಕ್ಕರ್​ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಬೆಳಗಾವಿಯಲ್ಲಿ 2 ಲಕ್ಷ ರೂ. ಜಪ್ತಿ: ರಾಮನಗರದಲ್ಲಿ ಕುಕ್ಕರ್, ತವಾ ಹಂಚಿಕೆ ಆರೋಪ

ರಾಮನಗರದಲ್ಲಿ ಕುಕ್ಕರ್, ತವಾ ಹಂಚಿಕೆ ಆರೋಪ

ಇನ್ನು ಇದೇ ಮಾ.16 ರಂದು ಚುನಾವಣೆ ಘೋಷಣೆ ದಿನಾಂಕ ಬೆನ್ನಲ್ಲೇ  ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ‌ ಮರಳವಾಡಿ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಕುಕ್ಕರ್, ತವಾ ಹಂಚಿಕೆ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಜೆಡಿಎಸ್ ಕಾರ್ಯಕರ್ತರು ಹಾರೋಹಳ್ಳಿ ತಹಶೀಲ್ದಾರ್​ಗೆ ದೂರು ನೀಡಿದ್ದರು. ಜೊತೆಗೆ ಕುಕ್ಕರ್​​ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಸಂಸದ‌ ಡಿ‌.ಕೆ.ಸುರೇಶ್,‌‌ ಶಾಸಕ ಇಕ್ಬಾಲ್ ಹುಸೇನ್ ಭಾವಚಿತ್ರದ ಜೊತೆಗೆ ಹೊಸ ವರ್ಷದ ಶುಭಾಶಯದ ಪೋಸ್ಟರ್‌ ಇತ್ತು. ಇದರ ಬೆನ್ನಲ್ಲೇ ಇದೀಗ ಕುಣಿಗಲ್​ನಲ್ಲೂ ಕುಕ್ಕರ್​ ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 pm, Wed, 20 March 24