ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ; ಆತಂಕಗೊಂಡ ಸ್ಥಳೀಯರು

|

Updated on: May 17, 2023 | 9:12 AM

ಜಿಲ್ಲೆಯ ವಿದ್ಯಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ(plastic rice)ಸಿಕ್ಕಿದೆ ಎಂದು ಸ್ಥಳಿಯರು ಆರೋಪಿಸಿದ್ದು, ಇದರಿಂದ ಆತಂಕಗೊಂಡಿದ್ದಾರೆ.

ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ; ಆತಂಕಗೊಂಡ ಸ್ಥಳೀಯರು
ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ
Follow us on

ತುಮಕೂರು: ಜಿಲ್ಲೆಯ ವಿದ್ಯಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ(plastic rice)ಸಿಕ್ಕಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಮನೆಯಲ್ಲಿ ಅಕ್ಕಿ ಕ್ಲಿನ್ ಮಾಡುವಾಗ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಬಗ್ಗೆ ಮಹಿಳೆಯರು ಆರೋಪಿಸಿದ್ದು, ಇದರಿಂದ ಆತಂಕಗೊಂಡಿದ್ದಾರೆ. ನ್ಯಾಯ ಬೆಲೆ ಅಂಗಡಿಯಿಂದ ತಂದಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್ ಆಗಿದಿಯಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಇಂತಹ ಘಟನೆ ಇದೇ ಮೊದಲಲ್ಲ, ತುಂಬಾ ಸಲ ಬೆಳಕಿಗೆ ಬಂದಿದೆ. ಆದರೂ ಕೂಡ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ಆತಂಕ್ಕೀಡು ಮಾಡಿದೆ. ಪಡಿತರ ಅಕ್ಕಿ ವಿತರಣೆಗೂ ಮುನ್ನ ಒಮ್ಮೆ ಪರಿಶೀಲಿಸುವ ಅವಶ್ಯಕತೆಯಿದೆ.

ನ್ಯಾಯಬೆಲೆ ಅಂಗಡಿಗೆ ಬಂದಿರೋ ಸರ್ಕಾರ ಪಡಿತರ ಚೀಟಿಗೆ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ

ಬೆಂಗಳೂರು ಗ್ರಾಮಾಂತರ: ಇನ್ನು 2023 ಜನವರಿ 8 ರಂದು ಇದೇ ತರಹದ ಘಟನೆ ಬೆಳಕಿಗೆ ಬಂದಿತ್ತು. ಹೌದು ಬೆಂಗಳೂರು ಹೊರವಲಯ ನೆಲಮಂಗಲದ ಆನಂದನಗರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಗೆ ಬಂದಿರೋ ಸರ್ಕಾರ ಪಡಿತರ ಚೀಟಿಗೆ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿತ್ತು. ಪ್ಯಾಸ್ಟಿಕ್ ಅಕ್ಕಿಯನ್ನು ಕಂಡು ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದ್ದರು.‌ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಬಂದಂತಹ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂದು ಪಡಿತರ ಪಲಾನುಭವಿಗಳು ಆರೋಪಿಸುತ್ತಿದ್ದರು.

ಇದನ್ನೂ ಓದಿ:ಮಡಿಕೇರಿ ನಗರದ ಸರ್ಕಾರಿ ಶಾಲೆ ಬಿಸಿಯೂಟ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ; ಪೋಷಕರಲ್ಲಿ ಆತಂಕ

ಪ್ಲಾಸ್ಟಿಕ್ ಅಕ್ಕಿ ಕಂಡು ಆನಂದ ನಗರ ಜನತೆ ಆತಂಕ

ಆನಂದ ನಗರದ ನಿವಾಸಿ ಸಾವಿತ್ರಮ್ಮ ಎಂಬುವವರು ಅನ್ನ ಮಾಡಲು ಅಕ್ಕಿಯನ್ನು ಆರಿಸುತ್ತಿದ್ದಾಗ ಪ್ಲಾಸ್ಟಿಕ್ ಅಕ್ಕಿ ಕಂಡು ಬಂದಿದೆ ಎನ್ನಲಾಗಿತ್ತು. ಇದರಿಂದ ಭಯಗೊಂಡು ನೆಲಮಂಗಲ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳ ಪರಿಶೀಲನೆ ವೇಳೆ ಕೇವಲ ಒಂದು ಮನೆಯಲ್ಲಿ ಅಲ್ಲದೆ, ಮೂವರ ಪಡಿತರದಲ್ಲಿ ಈ ರೀತಿಯ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ ಎನ್ನಲಾಗಿದ್ದು, ಪರಿಶೀಲನೆ ವೇಳೆ ಒಟ್ಟು 150 ಕೆಜಿಗೂ ಹೆಚ್ಚು ಅಕ್ಕಿಯನ್ನ ಆಹಾರ ಇಲಾಖೆ ಸೀಜ್ ಮಾಡಿದ್ದರು.

ಪ್ಲಾಸ್ಟಿಕ್ ಅಕ್ಕಿ ಎಂದು ಆರೋಪ

ಇನ್ನೂ ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳನ್ನ ಕೇಳಿದಾಗ ‘ಆನಂದನಗರದಲ್ಲಿ ಮೂರು ಜನ ಫಲಾನುಭವಿಗಳು ಪಡೆದ ಪಡಿತರ ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಇದೆ ಅಂತ ಆರೋಪಿಸಿದ್ದರು. ಹೀಗಾಗಿ ಪ್ಲಾಸ್ಟಿಕ್ ಅಕ್ಕಿ ಅಂತ ಹೇಳುವ ಅಕ್ಕಿಯ ಮಾದರಿಯನ್ನ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಸಲಾಗಿದ್ದು ವರದಿ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿ ಫರಾನ್ ತಿಳಿಸಿದ್ದರು.

ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದೌಡು 

ಅದೆಷ್ಟೊ ಜನ ಇದೇ ಅಕ್ಕಿಯನ್ನ ಬೇಯಿಸಿಕೊಂಡು ತಿಂದವರು ಸದ್ಯ ಆತಂಕಕ್ಕೀಡಾಗಿದ್ದರು. ಇನ್ನೂ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಆಹಾರ ಇಲಾಖೆ ಅಧಿಕಾರಿಗಳು ಸದ್ಯ ಅಕ್ಕಿಯನ್ನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಇನ್ನಾದರೂ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆಗೂ ಮುನ್ನಾ ಒಮ್ಮೆ ಅಧಿಕಾರಿಗಳು ಪರಿಶೀಲಿಸಬೇಕಾದ ಅವಶ್ಯಕತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.