ಇಂತಹ ಕೃತ್ಯ ಎಸಗಿದ ಸರಬರಾಜುದಾರರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು, ಇದು ಸ್ಥಳೀಯವಾಗಿ ನಡೆಯುವ ಕೃತ್ಯ ಅಲ್ಲ, ಅಕ್ಕಿಯ ಮೂಲ ಪ್ಯಾಕ್ ಮಾಡುವ ಸ್ಥಳದಲ್ಲಿ ಆಗಿರುವ ಸಂಭವ ಹೆಚ್ಚಿದೆ. ಇಂತಹ ಸರಬರಾಜುದಾರರ ಲೈಸನ್ಸ್ ತಡೆಹಿಡಿದು ಇವರ ವಿರುದ್ಧ ಕೂಡಲೇ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.