ಮೀಟರ್​ ಬಡ್ಡಿ ದಂಧೆ ಹಾವಳಿ, ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಎಚ್ಚೆತ್ತ ತುಮಕೂರು ಪೊಲೀಸರಿಂದ ಸಹಾಯವಾಣಿ

ಕೈಸಾಲಕ್ಕೆ ಬಡ್ಡಿ ಕಟ್ಟಲಾಗದೇ ಪರದಾಡಿದ್ದ ವ್ಯಕ್ತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಮತ್ತೊಂದೆಡೆ ತುಮಕೂರು ಎಸ್ಪಿ ಅಶೋಕ್ ಅವರು ಮೀಟರ್​ ಬಡ್ಡಿ ದಂಧೆ ಹಾವಳಿ ತಡೆಯಲು ಸಹಾಯವಾಣಿ ಬಿಡುಗಡೆ ಮಾಡಿದ್ದು ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

ಮೀಟರ್​ ಬಡ್ಡಿ ದಂಧೆ ಹಾವಳಿ, ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಎಚ್ಚೆತ್ತ ತುಮಕೂರು ಪೊಲೀಸರಿಂದ ಸಹಾಯವಾಣಿ
ಅಜಮ್ ಪಾಷಾ
Follow us
| Updated By: ಆಯೇಷಾ ಬಾನು

Updated on: Jan 23, 2024 | 12:29 PM

ತುಮಕೂರು, ಜ.23: ಜಿಲ್ಲೆಯಲ್ಲಿ ಮೀಟರ್​ ಬಡ್ಡಿ ದಂಧೆ ಹಾವಳಿ (Meter Interest) ಹೆಚ್ಚಾಗಿದೆ. ವ್ಯಕ್ತಿಯೋರ್ವ ಸೆಲ್ಪಿ ವಿಡಿಯೋ ಮಾಡಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಕೈಸಾಲಕ್ಕೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೊಂದೆಡೆ ತುಮಕೂರು ಎಸ್​ಪಿ ಅಶೋಕ್ (Tumkur SP Ashok) ಮೀಟರ್ ಬಡ್ಡಿ ದಂಧೆಕೋರರಿಗೆ ಖಡಕ್ ವಾರ್ನಿಂಗ್​ ಕೊಟ್ಟಿದ್ದಾರೆ. ಮೀಟರ್​ ಬಡ್ಡಿ ವಿಧಿಸಿದ್ರೆ ಹತ್ತಿರದ ಠಾಣೆಗೆ ಸಂಪರ್ಕಿಸಿ, ಇಲ್ಲ ಹೆಲ್ಪ್​​ಲೈನ್​ಗೆ ಕರೆ ಮಾಡಿ ದೂರು ನಂಬರ್ ನೀಡಿದ್ದಾರೆ.

ಮೀಟರ್​ ಬಡ್ಡಿ ದಂಧೆಗೆ ಇದುವರೆಗೆ ಐವರು ಬಲಿ

ಕಲ್ಪತರ ನಾಡು ತುಮಕೂರಿನಲ್ಲಿ ಮೀಟರ್​ ಬಡ್ಡಿ ದಂಧೆ ಹಾವಳಿ ಹೆಚ್ಚಾಗಿದೆ. ತುಮಕೂರು ನಗರದ ನಜರಾಬಾದ್ ಬಡವಾಣೆ ನಿವಾಸಿ ಅಜಮ್ ಪಾಷಾ ಎಂಬುವವರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೈ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಪರದಾಡುತ್ತಿದ್ದ ಅಜಮ್ ಪಾಷಾ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೀಟರ್​ ಬಡ್ಡಿ ದಂಧೆಗೆ ಇದುವರೆಗೆ ಜಿಲ್ಲೆಯಲ್ಲಿ ಐವರು ಬಲಿಯಾಗಿದ್ದಾರೆ. ತಿಲಕ್​ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಮೀಟರ್ ಬಡ್ಡಿ ದಂಧೆಕೋರರಿಗೆ ಎಸ್ಪಿ ಖಡಕ್ ವಾರ್ನಿಂಗ್

ತುಮಕೂರಿನಲ್ಲಿ ಮೀಟರ್‌ ಬಡ್ಡಿ ದಂಧೆ ಹೆಚ್ಚಳ ಹಿನ್ನೆಲೆ ಮೀಟರ್ ಬಡ್ಡಿ ದಂಧೆಕೋರರಿಗೆ ತುಮಕೂರು ಎಸ್​ಪಿ ಅಶೋಕ್ ಖಡಕ್ ವಾರ್ನಿಂಗ್​ ಕೊಟ್ಟಿದ್ದಾರೆ. The Karnataka prohibition of charging exorbitant interest act ಪ್ರಕಾರ ವರ್ಷಕ್ಕೆ 18% ಗಿಂತ ಹೆಚ್ಚು ಬಡ್ಡಿ ವಿಧಿಸಿ ವ್ಯವಹಾರ ಮಾಡುತ್ತಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಪಿಎಸ್​ಐ, ಸಿಪಿಐ ಅಥವಾ ಡಿವೈಎಸ್​ಪಿಗಳಿಗೆ ಸಂಪರ್ಕ ಮಾಡಿ ದೂರು ನೀಡಲು ಮನವಿ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯವಾಣಿ ನಂಬರ್ 9480802900 ಗೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಎಸ್​ಪಿ ಮುಂದಾಗಿದ್ದಾರೆ.

ಇದನ್ನೂ ಓದಿ: 25 ಕೋಟಿ ಆಸೆ ತೋರಿಸಿ ಪೇಪರ್ ನೋಟು ಕೊಟ್ಟು, 1.10 ಕೋಟಿ ರೂ ದೋಚಿ ಪರಾರಿಯಾದ ವ್ಯಕ್ತಿ

ಟ್ಯೂಷನ್​ಗೆ ತೆರಳಿದ್ದ 12 ವರ್ಷದ ಬಾಲಕ ನಾಪತ್ತೆ

ಟ್ಯೂಷನ್​ಗೆ ತೆರಳಿದ್ದ 12 ವರ್ಷದ ಪರಿನವ್ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಬೆಂಗಳೂರಿನ ವಿಜಯನಗರದ ಸುಖೇಶ್, ನಿವೇದಿತಾ ದಂಪತಿ ಪುತ್ರ ಪರಿನವ್, ಗುಂಜೂರಿನ ಡೆನ್ ಅಕಾಡೆಮಿ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ.. ಪರಿನವ್​ನನ್ನು ಕಳೆದ ಭಾನುವಾರ ವೈಟ್​ಫೀಲ್ಡ್​ನ ಅಲೆನ್ ಟೂಷನ್ ಸೆಂಟರ್​ಗೆ ತಂದೆ ಡ್ರಾಪ್ ಮಾಡಿದ್ದಾರೆ. ಮಧ್ಯಾಹ್ನ ಕರೆತರಲು ಹೋಗುವುದು ತಡವಾಗಿದ್ದರಿಂದ ಪರಿನವ್ ನಾಪತ್ತೆಯಾಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ