ಪದವಿ ಸ್ವೀಕರಿಸಿ ಮನೆಗೆ ಬರುತ್ತಿದ್ದಾಗ ಕಚ್ಚಿದ ಹಾವು, ಕುಸಿದುಬಿದ್ದು ದುರಂತ ಅಂತ್ಯಕಂಡ ವೈದ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Dec 01, 2023 | 2:21 PM

ರಾಜ್ಯದಲ್ಲಿ ಹಾವು ಕಡಿತಕ್ಕೆ (Snake Bite) ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತುಮಕೂರಿನಲ್ಲಿ ಹಾವು ಕಡಿತದಿಂದ ಮೆಡಕಲ್ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸಿದ್ಧಾರ್ಥ್ ವಿಶ್ವವಿದ್ಯಾಯಲದ ಘಟಿಕೋತ್ಸವದಲ್ಲಿ ಪದವಿ ಪಡೆದ ಮನೆಗೆ ಹೋಗುವಾಗ ದುರಂತ ಅಂತ್ಯಕಂಡಿದ್ದಾನೆ.

ಪದವಿ ಸ್ವೀಕರಿಸಿ ಮನೆಗೆ ಬರುತ್ತಿದ್ದಾಗ ಕಚ್ಚಿದ ಹಾವು, ಕುಸಿದುಬಿದ್ದು ದುರಂತ ಅಂತ್ಯಕಂಡ ವೈದ್ಯ
ಮೃತ ವಿದ್ಯಾರ್ಥಿ
Follow us on

ತುಮಕೂರು (ಡಿಸೆಂಬರ್ 01): ಸಿದ್ಧಾರ್ಥ್​ ವೈದ್ಯಕೀಯ ಕಾಲೇಜಿನಲ್ಲಿ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸ್ವೀಕರಿಸಿ ಮನೆ ಬರುತ್ತಿದ್ದ ವೈದ್ಯ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಕೇರಳ (Kerala) ಮೂಲದ ಆದಿತ್ ಬಾಲಕೃಷ್ಣನ್ ಮೃತ ದುರ್ವೈವಿ. ಸಿದ್ಧಾರ್ಥ ವಿಶ್ವವಿದ್ಯಾಯಲದ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿ  ಹೆಗ್ಗರೆಯಲ್ಲಿರುವ ಮನೆ ಬಳಿ ಕಾರು ನಿಲ್ಲಿಸುವ ಸಮಯದಲ್ಲಿ ಹಾವು ಕಚ್ಚಿದೆ. ಇದನ್ನು ಗಮನಿಸಿದೇ ಮನಗೆ ತೆರಳಿದ್ದು, ಸ್ವಲ್ಪ ಸಮಯದ ಬಳಿಕ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಇನ್ನು ಮೃತ ವಿದ್ಯಾರ್ಥಿ ಶವವನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದ್ದು, ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇನ್ನು ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದವಿ ಪ್ರಮಾಣ ಪತ್ರ ಸ್ವೀಕರಿಸಿ ಮನೆ ಬಂದು ಮೃತಪಟ್ಟಿರುವುದು ದುರಂತವೇ ಸರಿ. ವಿಧಿ ಯಾವ ರೀತಿ ಬಂದು ಜೀವ ಬಲಿ ಪಡೆಯುತ್ತೆ ಎನ್ನುವುದು ಊಹಿಸಲು ಅಸಾಧ್ಯ. ಇನ್ನೇನು ಓದು ಮುಗಿತು ವೈದ್ಯನಾಗಬೇಕಿದ್ದ ಆದಿತ್ ಬಾಲಕೃಷ್ಣನ್ ದುರಂತ ಅಂತ್ಯಕಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ