ಜನವರಿಯಲ್ಲಿ ವಿಧೇಯಕ ಮಂಡನೆ; ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಸವಲತ್ತು ನಿಲ್ಲಿಸುತ್ತೇವೆ- ಸಚಿವ ಮಾಧುಸ್ವಾಮಿ ಹೇಳಿಕೆ

| Updated By: sandhya thejappa

Updated on: Dec 25, 2021 | 12:56 PM

ನಾವು ಎಲ್ಲೂ ಮತಾಂತರ ನಿಷೇಧ ಎಂದು ಕರೆದೇ ಇಲ್ಲ. ಒತ್ತಾಯ, ಆಮಿಷ, ಬಲವಂತದ ಮತಾಂತರ ತಡೆಯುವುದು ಕಾಯ್ದೆಯ ಉದ್ದೇಶ. ಸ್ವಯಂಪ್ರೇರಿತರಾಗಿ ಮತಾಂತರವಾಗುವುದಕ್ಕೆ ಅಡ್ಡಿಯಿಲ್ಲ.

ಜನವರಿಯಲ್ಲಿ ವಿಧೇಯಕ ಮಂಡನೆ; ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಸವಲತ್ತು ನಿಲ್ಲಿಸುತ್ತೇವೆ- ಸಚಿವ ಮಾಧುಸ್ವಾಮಿ ಹೇಳಿಕೆ
ಸಚಿವ ಮಾಧುಸ್ವಾಮಿ
Follow us on

ತುಮಕೂರು: ಈವರೆಗೆ ಮತಾಂತರ ಆದವರ ಮಾಹಿತಿ ದಾಖಲಾಗಬೇಕು ಎಂದು ತುಮಕೂರಿನಲ್ಲಿ ಹೇಳಿಕೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ (Madhuswamy), ಸರ್ಕಾರದ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಾಗಬೇಕು. ಎಸ್​ಸಿ, ಎಸ್​ಟಿಯವರೇ ಮತಾಂತರ ಆಗಿದ್ದರೂ ದಾಖಲಾಗಬೇಕು. ಮತಾಂತರ ಮಾಹಿತಿ ಸರ್ವಿಸ್ ಹಿಸ್ಟರಿಗೆ ಎಂಟ್ರಿಯಾಗಬೇಕು. ಮಕ್ಕಳ ಬರ್ತ್ ಸರ್ಟಿಫಿಕೆಟ್, ಶಾಲಾ ದಾಖಲಾತಿಗಳಲ್ಲಿ ಮತಾಂತರವಾಗಿರುವ ಬಗ್ಗೆ ಮಾಹಿತಿ ದಾಖಲು ಮಾಡಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಈ ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಸವಲತ್ತು ನಿಲ್ಲಿಸುತ್ತೇವೆ ಅಂತ ಹೇಳಿದ್ದಾರೆ.

ಜನವರಿಯಲ್ಲಿ ವಿಧೇಯಕ ಮಂಡನೆ
ಇನ್ನು ಮುಂದುವರಿದು ಮಾತನಾಡಿದ ಸಚಿವರು, ನಾವು ಎಲ್ಲೂ ಮತಾಂತರ ನಿಷೇಧ ಎಂದು ಕರೆದೇ ಇಲ್ಲ. ಒತ್ತಾಯ, ಆಮಿಷ, ಬಲವಂತದ ಮತಾಂತರ ತಡೆಯುವುದು ಕಾಯ್ದೆಯ ಉದ್ದೇಶ. ಸ್ವಯಂಪ್ರೇರಿತರಾಗಿ ಮತಾಂತರವಾಗುವುದಕ್ಕೆ ಅಡ್ಡಿಯಿಲ್ಲ. ವಿಧಾನ ಪರಿಷತ್​ನಲ್ಲಿಯೂ ವಿಧೇಯಕ ಮಂಡಿಸುತ್ತೇವೆ. ಜನವರಿಯಲ್ಲಿ ವಿಧೇಯಕ ಮಂಡಿಸುತ್ತೇವೆ ಅಂತ ತಿಳಿಸಿದ್ದಾರೆ.

ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಪ್ರೀತಿ ಮಾಡಿ, ಮತಾಂತರ ಮಾಡುವುದು ಕೂಡ ಅಪರಾಧ. ಮತಾಂತರ ಆದವರು ಎಸ್ಸಿ (SC) ಎಸ್ಟಿ ಆಗಿದ್ದರೇ (ST) ಮತಾಂತರ ಬಳಿಕ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನ ನಿಲ್ಲಿಸಲಾಗುತ್ತದೆ. ಅನಿವಾರ್ಯವಾಗಿ ಈ ಕಾನೂನು ತರಬೇಕಾಗಿತ್ತು. ಸಿದ್ದಗಂಗಾ ಶ್ರೀಗಳು ಕೂಡ ಅರ್ಜಿ ಕೊಟ್ಟಿದ್ದರು. ಮತಾಂತರ ನಿಷೇಧ ಆಗಬೇಕು ಅಂತಾ ಸಿದ್ದಗಂಗಾ ಶ್ರೀಗಳು ಲಾ ಕಮಿಷನ್ಗೆ ಅರ್ಜಿ ಕೊಟ್ಟಿದ್ದರು. ಆರ್ಎಸ್ಎಸ್ ಅರ್ಜಿ ನೀಡಿತ್ತು. ಜೊತೆಗೆ ಪ್ರಮುಖ ಸ್ವಾಮಿಜಿಗಳದ್ದು ಅರ್ಜಿ ಕಂಡು ಸಿದ್ದರಾಮಯ್ಯನವರು ಕರಡುಗೆ ಸಹಿ ಹಾಕಿದ್ದರು. ಎಲ್ಲೂ ನಾವು ಮತಾಂತರ ನಿಷೇಧ ಮಾಡಿಲ್ಲ. ತಪ್ಪು, ಅಕ್ರಮ, ಪ್ರಲೋಬನೆ, ಪ್ರಚೋದನೆ ನೀಡಿ ಅಮಾಯಕರನ್ನ ಮತಾಂತರ ಮಾಡಲು ತಪ್ಪಿಸಲು ಬಿಲ್ ತರಲಾಗಿದೆ. ಪರಿಷತ್​ನಲ್ಲಿ ಪಾಸ್ ಮಾಡುತ್ತೇವೆ ಅಂತ ತುಮಕೂರಿನಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ನಂದಿಗಿರಿಧಾಮದಲ್ಲಿ ಕ್ರಿಸ್​ಮಸ್​ ಆಚರಣೆಗೆ ಬ್ರೇಕ್​; ವೀಕೆಂಡ್​ನಲ್ಲಿ ಗಿರಿಧಾಮ ಬಂದ್ ಮಾಡಿದ ಹಿನ್ನಲೆ ಪ್ರವಾಸಿಗರ ಪರದಾಟ

Skin Care Tips: ವಯಸ್ಸಾದಂತೆ ಕಾಣುವ ಚರ್ಮದ ಆರೈಕೆಯ ಬಗ್ಗೆ ಗಮನವಿರಲಿ: ಯಾವ ವಯಸ್ಸಿನವರು ಯಾವ ರೀತಿಯ ಕ್ರಮಗಳನ್ನು ಪಾಲಿಸಬೇಕು? ಇಲ್ಲಿದೆ ಮಾಹಿತಿ