ತುಮಕೂರು: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದು ಗನ್ ತೋರಿಸಿ ಮೂರು ಲಕ್ಷ ಹಣ ದೋಚಿದ ಖದೀಮರು

| Updated By: ಆಯೇಷಾ ಬಾನು

Updated on: Mar 27, 2024 | 8:08 AM

ಬಾಯಾರಿಕೆಯಾಗಿದೆ ಕುಡಿಯಲು ನೀರು ಕೊಡಿ ಎಂದು ಮನೆಗೆ ಎಂಟ್ರಿ ಕೊಟ್ಟ ಖದೀಮರು ಮನೆಯಲ್ಲಿದ್ದ ಮೂರು ಲಕ್ಷ ರೂ ಹಣವನ್ನು ದೋಚಿದ್ದಾರೆ. ಕಳ್ಳತನವನ್ನು ತಡೆಯಲು ಕಿರುಚಾಡಿದ ಮನೆಯವರಿಗೆ ಗನ್ ತೋರಿಸಿ ಮೂರು ಬಾರಿ ಫೈರಿಂಗ್ ಮಾಡಿದ್ದಾರೆ. ಈ ಪರಿಣಾಮ ಮನೆ ಮಾಲೀಕನಿಗೆ ಗಾಯಗಳಾಗಿವೆ. ಗನ್ ಹಿಡಿದು ಕಳ್ಳತನಕ್ಕೆ ಮುಂದಾದ ಗ್ಯಾಂಗ್​ನಿಂದ ಇಡೀ ತುಮಕೂರು ಬೆಚ್ಚಿಬಿದ್ದಿದೆ.

ತುಮಕೂರು: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದು ಗನ್ ತೋರಿಸಿ ಮೂರು ಲಕ್ಷ ಹಣ ದೋಚಿದ ಖದೀಮರು
ಕಳ್ಳತನ ನಡೆದ ಮನೆಯಲ್ಲಿ ಪೊಲೀಸರ ಪರಿಶೀಲನೆ
Follow us on

ತುಮಕೂರು, ಮಾರ್ಚ್​.27: ‌ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದ ಖದೀಮರು ಗನ್ ತೋರಿಸಿ ಮೂರು ಲಕ್ಷ ಹಣ ದೋಚಿ (Robbery) ಪರಾರಿಯಾಗಿರುವ ಘಟನೆ ತುಮಕೂರು (Tumkur) ಜಿಲ್ಲೆಯ ಕುಣಿಗಲ್ ತಾಲೂಕಿನ ಊರ್ಕಿಹಳ್ಳಿ ಬಳಿ ನಡೆದಿದೆ. ಇನ್ನು ಖದೀಮರು ಮೂರು ಬಾರಿ ಗುಂಡು ಹಾರಿಸಿದ್ದು ಘಟನೆಯಲ್ಲಿ ಮನೆ ಮಾಲೀಕನಿಗೆ ಗಾಯಗಳಾಗಿವೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಸಿಲಿನ ಬೇಗೆ ಹೆಚ್ಚಾಗಿದ್ದು ಕುಡಿಯಲು ನೀರು ಕೊಡಿ ಎಂದು ಖದೀಮರು ಊರ್ಕಿಹಳ್ಳಿ ಗ್ರಾಮದ ಮಲ್ಲಿಕಾ ಗಂಗಣ್ಣ ಎಂಬುವವರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದ ಮಹಿಳೆ ನೀರು ತರಲು ಒಳಗೆ ಹೋಗುತ್ತಿದ್ದಂತೆ ಖದೀಮರು ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ಮನೆಯಲ್ಲಿ ಕಳ್ಳತನ ನಡೆಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯಲ್ಲಿದ್ದವರು ಕೂಗಾಡಿದ್ದಾರೆ. ಆಗ ಗನ್ ತೋರಿಸಿ ಕೂಗಾಡಿದ್ರೆ ಶೂಟ್ ಮಾಡುವುದಾಗಿ ಬೆದರಿಸಿ ಮನೆ ದೋಚಿದ್ದಾರೆ. ಖದೀಮರು ಮನೆಯ ಬ್ಯಾಗ್​ನಲ್ಲಿದ್ದ ಮೂರು ಲಕ್ಷ ಹಣ ದೋಚಿದ್ದಾರೆ. ಅಲ್ಲದೆ ಮೂರು ಬಾರಿ ಫೈರಿಂಗ್ ಕೂಡ ಮಾಡಿದ್ದಾರೆ. ಈ ಹಿನ್ನೆಲೆ ಮನೆಯ ಮಾಲೀಕನ ಬಲಗಾಲಿಗೆ ಗಾಯಗಳಾಗಿವೆ. ಬೈಕಿನಲ್ಲಿ‌ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕಳ್ಳತನ ನಡೆದಿದೆ. ‌

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ಐದು ಕಡೆ ಎನ್​​ಐಎ ದಾಳಿ

ಇನ್ನು ಮತ್ತೊಂದೆಡೆ ಕಲಬುರಗಿ ಜಿಲ್ಲೆ ನೆಲೋಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ರೈತರ ಹತ್ತಿಯನ್ನ ಕಳ್ಳತನ ಮಾಡ್ತಿದ್ದ ಖದೀಮರನ್ನ ಅರೆಸ್ಟ್ ಮಾಡಿದ್ದಾರೆ. ರೈತರ ಜಮೀನಿನಲ್ಲಿ ಬೆಳೆದು ಶೇಖರಿಸಿಡುತ್ತಿದ್ದ ಲಕ್ಷಾಂತ ಮೌಲ್ಯದ ಹತ್ತಿ ಕಳ್ಳತನ ಮಾಡ್ತಿದ್ದವರು ಅಂದರ್ ಆಗಿದ್ದಾರೆ.

ಕಳೆದ ತಿಂಗಳು ಜೇವರ್ಗಿ ತಾಲೂಕು ಹುಲ್ಲೂರು ಗ್ರಾಮದ ಇಬ್ಬರು ರೈತರ ಜಮೀನಿನಲ್ಲಿದ್ದ ಹತ್ತಿಯನ್ನ ಕಳ್ಳರು ಕಳ್ಳತನ ಮಾಡಿದ್ದರು. ರೈತರ ದೂರಿನ ಮೇರೆಗೆ ನೆಲೋಗಿ ಪೊಲೀಸರು ಖದೀಮರನ್ನ ಬಂಧಿಸಿದ್ದಾರೆ. ಲಕ್ಷ್ಮಣ @ ಲಕ್ಷ್ಮೀಕಾಂತ, ಲಕ್ಷ್ಮಣ ಸಿಂದಗಿ, ಹುಸೇನ್ ವಲಿ ಖಾಸೀಮ್ ಶೇಖ್ ಎಂಬ ಮೂವರು ಖದೀಮರನ್ನ ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ಒಂದು ಬುಲೆರೋ ಫಿಕಪ್ ವಾಹನ ಸೇರಿದಂತೆ 1.62 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಬುಲೆರೋ, ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ನಡೆದ ಬೇರೆ ಬೇರೆ ಹತ್ತಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನ್ನ ಖದೀಮರು ಒಪ್ಪಿಕೊಂಡಿದ್ದಾರೆ. ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೂವರನ್ನ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ