ಕೊರಟಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಪರಮೇಶ್ವರ್ ರಸ್ತೆಬದಿಯ ಗೂಡಂಗಡಿಯಲ್ಲಿ ಚಹಾ ಸೇವಿಸಿದರು
ಹಾಗೆ ಮಾತಾಡುತ್ತಲೇ ಅಂಗಡಿ ಮುಂದಿನ ಕಲ್ಲು ಬೆಂಚಿನ ಮೇಲೆ ಕೂರುತ್ತಾರೆ. ಅವರೊಂದಿಗೆ ಮಾತಾಡುತ್ತಿದ್ದ ಇಬ್ಬರನ್ನು ಬಂದು ಪಕ್ಕದಲ್ಲಿ ಕೂರುವಂತೆ ಹೇಳಿದಾಗ ಒಬ್ಬ ವ್ಯಕ್ತಿ ಸಂಕೋಚದಿಂದಲೇ ಕೂರುತ್ತಾರೆ ಆದರೆ ಇನ್ನೊಬ್ಬರು ಹಿಂಜರಿಯುತ್ತಾರೆ. ಪರಮೇಶ್ವರ್ ಟೀ ಕುಡಿಯುತ್ತಿರುವ ಸುದ್ದಿ ಕ್ಷಣಾರ್ಧದಲ್ಲೇ ಹಬ್ಬಿ ಜನ ಅಲ್ಲಿಗೆ ಧಾವಿಸಲಾರಂಭಿಸುತ್ತಾರೆ.
ತುಮಕೂರು: ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಸರಳ ವ್ಯಕ್ತಿ ಮತ್ತು ಸೀದಾಸಾದಾ ಮನುಷ್ಯ ಅಂತ ಎಲ್ಲರೂ ಹೇಳುತ್ತಾರೆ, ಮಾತಾಡುವಾಗಲೂ ಅಷ್ಟೇ, ಅವರು ಅಳೆದು ತೂಗಿ ಮಾತಾಡುತ್ತಾರೆ. ಯಾರನ್ನೂ ವಿನಾಕಾರಣ ಟೀಕಿಸುವುದಿಲ್ಲ. ಅವರ ಸರಳ ವ್ಯಕ್ತಿತ್ವಕ್ಕೆ ಇಲ್ಲೊಂದು ನಿದರ್ಶನವಿದೆ. ಇಂದು ಬೆಳಗ್ಗೆ ಅವರು ತಮ್ಮ ಕ್ಷೇತ್ರ ಕೊರಟಗೆರೆಯಿಂದ ಬೆಂಗಳೂರಿಗೆ ಹೋಗುವಾಗ ಕೊರಟಗೆರೆಗೆ ಹತ್ತಿರದ ತಣ್ಣೇನಹಳ್ಳಿಯಲ್ಲಿ (Tannenahalli) ರಸ್ತೆ ಬದಿಯ ಒಂದು ಗೂಡಂಗಡಿಯಲ್ಲಿ (petty tea stall) ಚಹಾ ಕುಡಿಯಲು ಅವರು ನಿಲ್ಲುತ್ತಾರೆ. ಚಹಾ ಸೇವಿಸುವ ಮೊದಲು ಅವರು ಅಂಗಡಿಯಿಂದ ಚಕ್ಕುಲಿ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಾರೆ. ಚಹಾದಂಗಡಿ ಬಳಿಯಿದ್ದ ಒಂದಿಬ್ಬರು ಸ್ಥಳೀಯರ ಜೊತೆ ಉಭಯಕುಶಲೋಪರಿ ನಡೆಸುತ್ತಾರೆ. ಹಾಗೆ ಮಾತಾಡುತ್ತಲೇ ಅಂಗಡಿ ಮುಂದಿನ ಕಲ್ಲು ಬೆಂಚಿನ ಮೇಲೆ ಕೂರುತ್ತಾರೆ. ಅವರೊಂದಿಗೆ ಮಾತಾಡುತ್ತಿದ್ದ ಇಬ್ಬರನ್ನು ಬಂದು ಪಕ್ಕದಲ್ಲಿ ಕೂರುವಂತೆ ಹೇಳಿದಾಗ ಒಬ್ಬ ವ್ಯಕ್ತಿ ಸಂಕೋಚದಿಂದಲೇ ಕೂರುತ್ತಾರೆ ಆದರೆ ಇನ್ನೊಬ್ಬರು ಹಿಂಜರಿಯುತ್ತಾರೆ. ಪರಮೇಶ್ವರ್ ಟೀ ಕುಡಿಯುತ್ತಿರುವ ಸುದ್ದಿ ಕ್ಷಣಾರ್ಧದಲ್ಲೇ ಹಬ್ಬಿ ಜನ ಅಲ್ಲಿಗೆ ಧಾವಿಸಲಾರಂಭಿಸುತ್ತಾರೆ. ಎಲ್ಲರಿಗೂ ಟಿ ಕೊಡಿಸಿ ಅವರೊಂದಿಗೆ ಮಾತಾಡಿ ಗೃಹ ಸಚಿವ ಅಲ್ಲಿಂದ ಬೆಂಗಳೂರು ಕಡೆ ಹೊರಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕದಲ್ಲಿಯೂ ಜಾರಿಯಾಗುತ್ತಾ ಸಿಎಎ? ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಿಷ್ಟು