ರಸ್ತೆ ಬದಿ ಅಂಗಡಿಯಲ್ಲಿ ಚಕ್ಕುಲಿ ತಿಂದು ಚಹಾ ಕುಡಿದ ಪರಮೇಶ್ವರ್​​

ರಸ್ತೆ ಬದಿ ಅಂಗಡಿಯಲ್ಲಿ ಚಕ್ಕುಲಿ ತಿಂದು ಚಹಾ ಕುಡಿದ ಪರಮೇಶ್ವರ್​​

ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ

Updated on: Mar 27, 2024 | 11:16 AM

ಗೃಹ ಸಚಿವ ಜಿ. ಪರಮೇಶ್ವರ್​ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿಯ ರಸ್ತೆ ಬದಿಯ ಚಹಾದ ಅಂಗಡಿಯಲ್ಲಿ ಚಕ್ಕುಲಿ ತಿಂದು ಚಹಾ ಕುಡಿದರು. ಬಳಿಕ ಕ್ಷೇತ್ರದ ಜನರ ಜೊತೆ ಕೆಲ ನಿಮಿಷ ಕಾಲ ಕಳೆದರು. ಗೃಹ ಸಚಿವರ ಸರಳತೆಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸಿದರು.

ತುಮಕೂರು, ಮಾರ್ಚ್​ 27: ಲೋಕಸಭೆ ಚುನಾವಣೆಯ (Loka Sabha Election) ಹಿನ್ನೆಲೆಯಲ್ಲಿ ಪಕ್ಷದ ಸರಣಿ ಸಭೆಗಳ ಬ್ಯೂಸಿ ಶೆಡ್ಯುಲ್​ ಮಧ್ಯೆಯೇ ಗೃಹ ಸಚಿವ ಜಿ. ಪರಮೇಶ್ವರ್​ ಅವರು ರಸ್ತೆಬದಿಯ ಅಂಗಡಿಯಲ್ಲಿ ಚಕ್ಕುಲಿ ತಿಂದು ಚಹಾ (Tea) ಕುಡಿದರು. ಮಂಗಳವಾರ (ಮಾ.27) ರ ಸಂಜೆ ಕೊರಟಗೆರೆಯಿಂದ ಬೆಂಗಳೂರಿಗೆ (Bengaluru) ತೆರಳುವಾಗ ಕೊರಟಗೆರೆ (Kortgere) ತಾಲೂಕಿನ ತಣ್ಣೇನಹಳ್ಳಿಯ ರಸ್ತೆ ಬದಿಯ ಚಹಾದ ಅಂಗಡಿ ಮುಂದೆ ಕಾರು ನಿಲ್ಲಿಸಿ, ಚಕ್ಕುಲಿ ತಿಂದು ಚಹಾ ಕುಡಿದು, ಹಣ ನೀಡಿದರು. ಬಳಿಕ ಕ್ಷೇತ್ರದ ಜನರ ಜೊತೆ ಕೆಲ ನಿಮಿಷ ಕಾಲ ಕಳೆದರು. ಗೃಹ ಸಚಿವರ ಸರಳತೆಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸಿದರು.

ಪರಮೇಶ್ವರ್​ ಮನೆಯಲ್ಲಿ ಹಾಲು ಕುಡಿದಿದ್ದ ಕೋತಿ

ಕಳೆದ ತಿಂಗಳು ಫೆಬ್ರವರಿ 26 ರಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ​ಅವರ ತುಮಕೂರಿನ ಸಿದ್ದಾರ್ಥ ನಗರದಲ್ಲಿರುವ ಮನೆಯೊಳಗೆ ಕೋತಿಯೊಂದು ನುಗ್ಗಿತ್ತು. ಮನೆಯಲ್ಲಿನ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು, ಮೆಟ್ಟಿಲಿನ ಮೇಲೆ ಕುಳಿತು ಹಾಲು ಕುಡಿದಿತ್ತು. ಭದ್ರತಾ ಸಿಬ್ಬಂದಿ ಕೋತಿ ಓಡಿಸಲು ಮುಂದಾದಾಗ, ಗೃಹ ಸಚಿವರು ಓಡಿಸಬೇಡಿ ಎಂದು ತಡೆದ್ದರು.

ಮತ್ತಷ್ಟು ವಿಡಿಯೋ ಸ್ಟೋರಿ ನೋಡಲು ಇಲ್ಲಿ ಕ್ಲಿಕ್ ಮಾಡಿ