ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಬೆಳ್ಳಿ ವಶ; ಎಲ್ಲೆಲ್ಲಿ ಎಷ್ಟೆಷ್ಟು?
ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸುವ ಮೂಲಕ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಅದರಂತೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೆಳ್ಳಿ, ಹಣವನ್ನ ಜಪ್ತಿ ಮಾಡಲಾಗಿದೆ.
ತುಮಕೂರು:ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸುವ ಮೂಲಕ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಅದರಂತೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೆಳ್ಳಿ, ಹಣವನ್ನ ಜಪ್ತಿ ಮಾಡಲಾಗಿದ್ದು, ಇದೀಗ ಜಿಲ್ಲೆಯ ತಿಪಟೂರು ತಾಲೂಕಿನ ಬಂಡಿಹಳ್ಳಿ ಗೇಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.84 ಲಕ್ಷ ಮೌಲ್ಯದ LED ಬಲ್ಬ್ಗಳನ್ನ ಚುನಾವಣಾ ಸಂಚಾರಿ ಜಾಗೃತ ದಳದವರು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ ರೇಣುಕಯ್ಯ ಎಂಬಾತ ಕೆಎ 25ಬಿ 2160 ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಲ್ಬ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ತಾಲೂಕಿನಲ್ಲಿ ದಾಖಲೆ ಇಲ್ಲದ 14 ಲಕ್ಷಕ್ಕೂ ಅಧಿಕ ಹಣ ಜಪ್ತಿ
ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದ 14 ಲಕ್ಷಕ್ಕೂ ಅಧಿಕ ಹಣವನ್ನ ಜಪ್ತಿ ಮಾಡಲಾಗಿದೆ. ಉಡುಪಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕಾರು ತಪಾಸಣೆ ಮಾಡುವ ವೇಳೆ ಹಣ ಪತ್ತೆಯಾಗಿದೆ. ಭಟ್ಕಳ ಮೂಲದ ಯಶ್ವಂತ್ ಗೊಂಡ, ಹೊನ್ನಾವರದ ಗುಣವಂತೆಯ ಶ್ರೀನಿವಾಸ್ ಗೌಡ, ರಘು ನಾಯ್ಕ ಎಂಬುವವರನ್ನ ಬಂಧಿಸಲಾಗಿದೆ. ಭಟ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ 16 ಕೆಜಿ ಬೆಳ್ಳಿ, ಹಣ ಜಪ್ತಿ
ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ 16 ಕೆಜಿ ಬೆಳ್ಳಿ, ಹಣ ಜಪ್ತಿ ಮಾಡಿದ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 9.67 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಸೇರಿ 1.10 ಲಕ್ಷ ಹಣವನ್ನ ಜಪ್ತಿ ಮಾಡಲಾಗಿದೆ. ಉದ್ಯಮಿಗಳಾದ ಕೈಲಾಸ್ ಜೈನ್, ದೇವಿಚಂದ್ರ ಜೈನ್ ಎಂಬುವವರು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬೆಳ್ಳಿ, ಹಣ ತೆಗೆದುಕೊಂಡು ಬರುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಇಬ್ಬರನ್ನ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sat, 1 April 23