ತುಮಕೂರು: ಅಭ್ಯರ್ಥಿ ಸಾವು ಹಿನ್ನೆಲೆ ನಗರಸಭೆ ಚುನಾವಣೆ ಮುಂದೂಡಿಕೆ

ಅಭ್ಯರ್ಥಿ ಚಾಂದ್ ಪಾಷಾ ಸಾವನ್ನಪ್ಪಿದ್ದಾರೆ. ನಗರಸಭೆಯ 21ನೇ ವಾರ್ಡ್​​ನ ಅಭ್ಯರ್ಥಿಯಾಗಿದ್ದ ಪಾಷಾ ಮೃತಪಟ್ಟಿರುವ ಹಿನ್ನೆಲೆ ಡಿಸೆಂಬರ್ 27ರಂದು ನಡೆಯಲಿರುವ ನಗರಸಭೆ ಚುನಾವಣೆ ಮುಂದೂಡಲಾಗಿದೆ.

ತುಮಕೂರು: ಅಭ್ಯರ್ಥಿ ಸಾವು ಹಿನ್ನೆಲೆ ನಗರಸಭೆ ಚುನಾವಣೆ ಮುಂದೂಡಿಕೆ
ಸಾಂಕೇತಿಕ ಚಿತ್ರ
Edited By:

Updated on: Dec 25, 2021 | 5:19 PM

ತುಮಕೂರು: ಅಭ್ಯರ್ಥಿ ಸಾವು ಹಿನ್ನೆಲೆ ನಗರಸಭೆ ಚುನಾವಣೆ ಮುಂದೂಡಲಾಗಿದೆ. ಶಿರಾ ನಗರಸಭೆ 21ನೇ ವಾರ್ಡ್​​ನ ಚುನಾವಣೆ ಮುಂದೂಡಿ ಆದೇಶಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಚುನಾವಣೆಯ ಅಭ್ಯರ್ಥಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅಭ್ಯರ್ಥಿ ಚಾಂದ್ ಪಾಷಾ ಸಾವನ್ನಪ್ಪಿದ್ದಾರೆ. ನಗರಸಭೆಯ 21ನೇ ವಾರ್ಡ್​​ನ ಅಭ್ಯರ್ಥಿಯಾಗಿದ್ದ ಪಾಷಾ ಮೃತಪಟ್ಟಿರುವ ಹಿನ್ನೆಲೆ ಡಿಸೆಂಬರ್ 27ರಂದು ನಡೆಯಲಿರುವ ನಗರಸಭೆ ಚುನಾವಣೆ ಮುಂದೂಡಲಾಗಿದೆ.

ಕೊಡಗು: ಹಾಕಿ ಆಡ್ತಿದ್ದಾಗ ಹೃದಯಾಘಾತದಿಂದ ಯುವಕ ಸಾವು
ಹಾಕಿ ಆಡ್ತಿದ್ದಾಗ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ ಘಟನೆ ಮೂರ್ನಾಡು ಎಂಬಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಎಂಬಲ್ಲಿ 22 ವರ್ಷದ ಸೋಮಯ್ಯ ಮೃತಪಟ್ಟಿದ್ದಾರೆ. ಕೊಡವ ಕುಟುಂಬಗಳ ಮಧ್ಯೆ ನಡೆಯುತ್ತಿದ್ದ ಹಾಕಿ ಪಂದ್ಯದ ವೇಳೆ ಕುಸಿದು ಬಿದ್ದ ಸೋಮಯ್ಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕ್ರೀಡಾಂಗಣದಲ್ಲಿ ಹಾಕಿ ಆಡುತ್ತಿದ್ದಾಗ ಕುಸಿದು ಬಿದ್ದು ಘಟನೆ ನಡೆದಿದೆ.

ಇದನ್ನೂ ಓದಿ: ತುಮಕೂರು: ಈರುಳ್ಳಿ ಬುಟ್ಟಿಯೊಳಗೆ ನಾಗರಹಾವು; ವಿಡಿಯೋ ನೋಡಿ

ಇದನ್ನೂ ಓದಿ: ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಕೊಲೆ