ಮಧುಗಿರಿಯಲ್ಲಿ ವಿವಾದ ಸೃಷ್ಟಿಸಿದ ನಾಥೂರಾಮ್ ಗೋಡ್ಸೆ ಪೋಟೋ‌; ಕನ್ನಡಪರ ಸಂಘಟನೆಗಳ ವ್ಯಾಪಕ ವಿರೋಧ

ತುಮಕೂರು ಜಿಲ್ಲೆಯ ಮಧುಗಿರಿಯ ದಂಡಿನಮಾರಮ್ಮ ದೇವಾಲಯ ಬಳಿ ಭಗತ್ ಸಿಂಗ್ ಯೂತ್ ಅಸೋಸಿಯೇಷನ್ ನಾಥೂರಾಮ್ ಗೋಡ್ಸೆ ಪೋಟೋ‌ ಇರೋ ಫ್ಲೆಕ್ಸ್ ಹಾಕಿದ್ದಾರೆ.

ಮಧುಗಿರಿಯಲ್ಲಿ ವಿವಾದ ಸೃಷ್ಟಿಸಿದ ನಾಥೂರಾಮ್ ಗೋಡ್ಸೆ ಪೋಟೋ‌; ಕನ್ನಡಪರ ಸಂಘಟನೆಗಳ ವ್ಯಾಪಕ ವಿರೋಧ
ನಾಥೂರಾಮ್ ಗೋಡ್ಸೆ ಇರುವ ಫ್ಲೆಕ್ಸ್​
Edited By:

Updated on: Aug 17, 2022 | 3:19 PM

ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿಯ ದಂಡಿನಮಾರಮ್ಮ ದೇವಾಲಯ ಬಳಿ ಸ್ವಾತಂತ್ರ್ಯದ ಅಮೃತ ಮಹೋತ್ವದ ಹಿನ್ನೆಲೆ ಭಗತ್ ಸಿಂಗ್ ಯೂತ್ ಅಸೋಸಿಯೇಷನ್ ನಾಥೂರಾಮ್ ಗೋಡ್ಸೆ ಪೋಟೋ‌ ಇರುವ  ಫ್ಲೆಕ್ಸ್ ಹಾಕಿದ್ದಾರೆ. ಕಿಡಿಗೇಡಿಗಳು ಗೋಡ್ಸೆ ಪೋಟೋ ಹಾಕಿ ವಿಕೃತಿ ಮೆರೆದ್ದಿದ್ದು, ಪ್ರಸ್ತುತ ಇದು ವಿವಾದಕ್ಕೆ ಕಾರಣವಾಗಿದೆ. ಫ್ಲೆಕ್ಸ್​ನಲ್ಲಿ ಮೇಲೆ ಗೋಡ್ಸೆ ಪೋಟೋ ಹಾಕಿ, ಕೆಳಗೆ ಗಾಂಧೀಜಿ ಪೋಟೋ ಹಾಕಿದ್ದು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ.

ಈ ಫ್ಲೆಕ್ಸ್​ಗೆ ಕನ್ನಡಪರ ಸಂಘಟನೆಗಳ ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ವಿರೋಧ ಹಿನ್ನೆಲೆ ಪೊಲೀಸರು ಕೂಡಲೇ ಫ್ಲೆಕ್ಸ್ ತೆರವುಗೊಳಿಸಿದ್ದಾರೆ.

Published On - 3:02 pm, Wed, 17 August 22