19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊತ್ತಗೆರೆ ಶಂಕರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 9:49 PM

ತುಮಕೂರು ಜಿಲ್ಲೆಯ ಪಾವಗಡದ ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೋಯಿಸ್ಟ್ ನಕ್ಸಲೀಯರು ಬಂದೂಕು, ಬಾಂಬ್‌, ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ 7 ಪೊಲೀಸರು, ಖಾಸಗಿ ಬಸ್‌ನ ಕ್ಲೀನರ್‌ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊತ್ತಗೆರೆ ಶಂಕರನನ್ನ ಬಂಧಿಸಲಾಗಿದೆ.

19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊತ್ತಗೆರೆ ಶಂಕರ ಬಂಧನ
ಸಾಂದರ್ಭಿಕ ಚಿತ್ರ
Follow us on

ತುಮಕೂರು, ಮೇ.22: ಪೊಲೀಸರ ಮೇಲೆ ದಾಳಿ ನಡೆಸಿ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊತ್ತಗೆರೆ‌ ಶಂಕರ(Naxal Kottagere Shanker)ನನ್ನ ತುಮಕೂರು, ಬೆಂಗಳೂರು ಆಂತರಿಕ ಭದ್ರತಾ ವಿಭಾಗ ಮತ್ತು ಸಿ.ಐ. ತಂಡ ಬಂಧಿಸಿದೆ ಎಂದು ತುಮಕೂರು(Tumakuru) ಎಸ್ಪಿ ಅಶೋಕ್ ವೆಂಕಟ್ ತಿಳಿಸಿದ್ದಾರೆ. ಬಂಧಿತ ಶಂಕರ, ಬೆಂಗಳೂರಿನ ಗೌರಿಪಾಳ್ಯದ ವೆಂಕಟಸ್ವಾಮಿ ಗಾರ್ಡನ್ ನಗರದಲ್ಲಿ ವಾಸವಿದ್ದು, ಬಿಬಿಎಂಪಿಯಲ್ಲಿ ಡ್ರೈವರ್ ಕೆಲಸ ಮಾಡುತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಏನಿದು ಘಟನೆ

2005 ಫೆ. ರಾತ್ರಿ‌10.30 ರ ವೇಳೆ ತುಮಕೂರು ಜಿಲ್ಲೆಯ ಪಾವಗಡದ ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೋಯಿಸ್ಟ್ ನಕ್ಸಲೀಯರು ಬಂದೂಕು, ಬಾಂಬ್‌, ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ
ಕರ್ತವ್ಯದಲ್ಲಿದ್ದ 7 ಪೊಲೀಸರು, ಖಾಸಗಿ ಬಸ್‌ನ ಕ್ಲೀನರ್‌ ಹತ್ಯೆಯಾಗಿತ್ತು. ಜೊತೆಗೆ 5 ಮಂದಿ ಪೊಲೀಸ್ ಸಿಬ್ಬಂದಿಗಳು ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ:ಕೊಡಗು-ದಕ್ಷಿಣ ಕನ್ನಡ ಗಡಿಯಲ್ಲಿ ನಕ್ಸಲ್​ ಸದ್ದು; ಅಂಗಡಿಯಿಂದ ದಿನಸಿ ಖರೀದಿಸಿ ತೆರಳಿದ ಬಂದೂಕು ದಾರಿಗಳ ತಂಡ

ಹತ್ಯೆ ಬಳಿಕ ಕ್ಯಾಂಪ್‌ನಲ್ಲಿದ್ದ ಬಂದೂಕು, ಗುಂಡುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ನಂತರ ತಲೆ ಮರೆಸಿಕೊಂಡಿದ್ದ 32 ಜನ ಆರೋಪಿಗಳ ಮೇಲೆ ಪಾವಗಡದ ಸಿಜೆ[ಜೆಡಿ] ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿತ್ತು. ಈ ಬಗ್ಗೆ ತಿರುಮಣಿ ಪೊಲೀಸ್ ಠಾಣಾ ಮೊನಂ: 07/2005, ಕಲಂ:143, 144, 147, 148, 307, 302, 396, 353, 120,121(ಬಿ),109, 332, 333 ರೆ/ವಿ 149 ಐಪಿಸಿ ಕಲಂ:3.4.5 ಸ್ಪೋಟಕ ನಿಯಂತ್ರಣ ಕಾಯ್ದೆ ಕಲಂ:25 ಶಸ್ತಾçಸ್ತ ಅಧಿನಿಯಮ ಅಡಿ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ