ರಾಜ್ಯದಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ತುಮಕೂರು ಬಳಿ 8 ಸಾವಿರ ಎಕರೆ ಗುರುತು

| Updated By: ವಿವೇಕ ಬಿರಾದಾರ

Updated on: Jan 06, 2024 | 1:30 PM

ಕರ್ನಾಟಕದಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಈ ವಿಮಾನ ನಿಲ್ದಾಣ ನಿರ್ಮಿಸಲು ಸಜ್ಜಾಗಿದೆ.

ರಾಜ್ಯದಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ತುಮಕೂರು ಬಳಿ 8 ಸಾವಿರ ಎಕರೆ ಗುರುತು
ಸಾಂದರ್ಭಿಕ ಚಿತ್ರ
Follow us on

ತುಮಕೂರು, ಜನವರಿ 06: ಕರ್ನಾಟಕದಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಾಣಕ್ಕೆ‌ ರಾಜ್ಯ ಸರ್ಕಾರ (Karnataka Government) ಯೋಜನೆ ರೂಪಿಸುತ್ತಿದೆ. ಹೌದು ಬೆಂಗಳೂರಿನಲ್ಲಿರುವ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಈ ವಿಮಾನ ನಿಲ್ದಾಣ ನಿರ್ಮಿಸಲು ಸಜ್ಜಾಗಿದೆ. ತುಮಕೂರು ಬಳಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಸರ್ಕಾರ ಈಗಾಗಲೆ ಜಾಗ ಗುರುತು ಮಾಡಿದೆ.

ತುಮಕೂರು, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ತಾಲೂಕಿನ ಮಧ್ಯಭಾಗದಲ್ಲಿ ಎಂಟು ಸಾವಿರ ಎಕರೆ ಜಮೀನು ಜಾಗ ಗುರುತಿಸಿ ಅಧಿಕಾರಿಗಳು ಕೆಐಡಿಬಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಜಮೀನು ರಾಷ್ಟ್ರೀಯ ಹೆದ್ದಾರಿ 48ರ ಹತ್ತಿರವಿದೆ. ಈ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ‌ ಜೊತೆಗೆ ಚರ್ಚೆ ನಡೆಸಿದ್ದರು.

ಇದನ್ನೂ ಓದಿ: Global Airport Rankings: ಕಾರ್ಯಕ್ಷಮತೆ, ಸಮಯೋಚಿತ ಸೇವೆ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕವಾಗಿ 3ನೇ ರ‍್ಯಾಂಕ್

ಇದೀಗ ಜಾಗ ಗುರುತಿಸಿ ಕೆಐಡಿಬಿಗೆ ದಾಖಲೆಗಳ ಹಸ್ತಾಂತರ ಮಾಡಲಾಗಿದೆ. ದೇವನಹಳ್ಳಿ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ ನಿಮಿಷಕ್ಕೊಂದು ವಿಮಾನ ಟೆಕ್ ಆಫ್ ಮತ್ತು ಲ್ಯಾಡಿಂಗ್ ಆಗುತ್ತಿದೆ. ಹೀಗಾಗಿ ಒತ್ತಡ ತಗ್ಗಿಸಲು ಮತ್ತೊಂದು ವಿಮಾನ‌ ಅಂತರಾಷ್ಟ್ರೀಯ ನಿಲ್ದಾಣ ಪ್ರಾರಂಭಿಸಲು ಸರ್ಕಾರ ನಿರ್ಧಿರಿಸಿದೆ.

ನವದೆಹಲಿ, ಮುಂಬೈ, ಕಲ್ಕತ್ತಾದಂತಹ ಮಹಾನಗರಗಳಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಅದರಂತೆ ರಾಜ್ಯದಲ್ಲೂ ಮತ್ತೊಂದು ಅಂತರರಾಷ್ಟ್ರೀಯ ನಿಲ್ದಾಣ ನಿರ್ಮಾಣದ ಅಗತ್ಯವಿದೆ. ಕೇಂದ್ರ ನಾಗರೀಕ‌ ವಿಮಾನ‌ ಯಾನ ಸಚಿವಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಕರ್ನಾಟಕದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು

ರಾಜ್ಯದಲ್ಲಿ ಈಗಾಗಲೆ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಒಂದು ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ರೀಯ ವಿಮಾನ ನಿಲ್ದಾಣ. ಮತ್ತೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

 ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:30 pm, Sat, 6 January 24