AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Cut: ತುಮಕೂರಿನ ಈ ಭಾಗದಲ್ಲಿ ಎರಡು ವಾರ ವಿದ್ಯುತ್ ಕಡಿತ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನೋ ಕರೆಂಟ್

ಫೆ 18 ರಿಂದ ಮಾರ್ಚ್ 5 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ((Electricity Supply) ವ್ಯತ್ಯಯ ವಾಗಲಿದೆ. ನಗರದ ಶ್ರೀ ರಾಮನಗರ, ಹೊರಪೇಟೆ, ವಿವೇಕಾನಂದ ರಸ್ತೆ, ಕೆಆರ್ ಬಡಾವಣೆ, ಬಾರ್ ಲೈನ್ , ಎಮ್ ಜಿ ರಸ್ತೆ, ಅಶೋಕ ರಸ್ತೆ, ಕೋತಿತೋಪು, ಪಾಂಡುರಂಗ ನಗರ, ಜಾಮೀಯ ಮಸೀದಿ, ಇತ್ಯಾದಿ...

Power Cut: ತುಮಕೂರಿನ ಈ ಭಾಗದಲ್ಲಿ ಎರಡು ವಾರ ವಿದ್ಯುತ್ ಕಡಿತ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನೋ ಕರೆಂಟ್
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Feb 18, 2022 | 9:12 AM

Share

ತುಮಕೂರು: ಬೆಸ್ಕಾಂ(BESCOM) ನಗರ ಉಪವಿಭಾಗ-1 ರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿದ್ದು, ಫೆ 18 ರಿಂದ ಮಾರ್ಚ್ 5 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ((Electricity Supply) ವ್ಯತ್ಯಯ ವಾಗಲಿದೆ. ನಗರದ ಶ್ರೀ ರಾಮನಗರ, ಹೊರಪೇಟೆ, ವಿವೇಕಾನಂದ ರಸ್ತೆ, ಕೆಆರ್ ಬಡಾವಣೆ, ಬಾರ್ ಲೈನ್ , ಎಮ್ ಜಿ ರಸ್ತೆ, ಅಶೋಕ ರಸ್ತೆ, ಕೋತಿತೋಪು, ಪಾಂಡುರಂಗ ನಗರ, ಜಾಮೀಯ ಮಸೀದಿ, ಅಗ್ರಹಾರ ಕ್ರಿಶ್ಚಿಯನ್ ಸ್ಟ್ರೀಟ್, ಡಿಸಿ ಕಚೇರಿ, ನ್ಯಾಯಾಲಯ ಆವರಣ, ವಿದ್ಯಾನಗರ, ವಾಲ್ಮೀಕಿ ನಗರ, ಬಟವಾಡಿ, ಕೈಗಾರಿಕಾ ಪ್ರದೇಶ, ಹನುಮಂತ ಪುರ, ಕುವೆಂಪು ನಗರ, ಆದರ್ಶನಗರ, ಅಣ್ಣೇತೋಟ, ಜಗನ್ನಾಥ ಪುರ, ಬೆಳಗುಂಬ, ಕುಂದೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಬನಶಂಕರಿ, ವಿದ್ಯಾರಣ್ಯಪುರ, ಶ್ರೀನಗರ ಸೇರಿ ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಪವರ್ ಕಟ್ ಬೆಂಗಳೂರು: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇನ್ನೆರಡು ದಿನ ವಿದ್ಯುತ್ ಪೂರೈಕೆಯಲ್ಲಿ (Electricity Supply) ವ್ಯತ್ಯಯವಾಗಲಿದೆ. ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಇಂದು ಪವರ್ ಕಟ್ (Power Cut) ಇರಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ನಿರ್ವಹಣೆ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯಿಂದ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಪವರ್ ಕಟ್ ಇರಲಿದೆ. ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಬನಶಂಕರಿ 3ನೇ ಹಂತ, ಶ್ರೀನಗರ, ವಿದ್ಯಾರಣ್ಯಪುರ, ಭುವನೇಶ್ವರಿ ನಗರ ಮುಂತಾದೆಡೆ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು (ಫೆ. 18) ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತ ವಲ್ಲಬ ನಗರ, ಶಾರದ ನಗರ, ಸಿದ್ದಾಪುರ, ಸೋಮೇಶ್ವರನಗರ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಕೆ.ಆರ್.ರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಹಂತ, ಈಜಿಪುರ, ಮಾರುತಿ ನಗರ, ಮಾರುತಿ , ಡಾಲರ್ಸ್ ಕಾಲೋನಿ, ಭೋಗನಹಳ್ಳಿ, ಶ್ರೀನಗರ, ಚಿನ್ನಪನಹಳ್ಳಿ ಮುಖ್ಯರಸ್ತೆ, ಮಾರತಹಳ್ಳಿ, ವಡ್ಡರಪಾಳ್ಯ ಮತ್ತು ಕೂಡ್ಲು ಮುಖ್ಯರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ನ್ಯೂ ಬಿಇಎಲ್ ರಸ್ತೆ, ಶಿವಕೋಟೆ, ಮಧುಗಿರಿ ಬೆಟ್ಟ, ಮಾವಳ್ಳಿಪುರ, ಬೊಮ್ಮಸಂದ್ರ 4ನೇ ಬ್ಲಾಕ್, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೇಟಹಳ್ಳಿ, ಮಾರುತಿ ನಗರ, ವಿದ್ಯಾರಣ್ಯಪುರ, ತಿರುಮೇನಹಳ್ಳಿ, ಜಕ್ಕೂರು ಮುಖ್ಯರಸ್ತೆ, ಕೆಎಚ್‌ಬಿ ಕ್ವಾರ್ಟರ್ಸ್, ಎಂಆರ್ ಪಾಲ್ ಶೆಟ್ಟಿ, ಎಂ.ಆರ್. , ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ ಮತ್ತು ಟಿ ದಾಸರಹಳ್ಳಿಯಲ್ಲಿ ಕರೆಂಟ್ ಇರುವುದಿಲ್ಲ.

ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದಾನಂದನಗರ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಕೆ.ಜಿ.ಪುರ ಮುಖ್ಯರಸ್ತೆ, ಹಳೆ ಮದ್ರಾಸ್ ರಸ್ತೆ, ಜೋಗುಪಾಳ್ಯ, ಇಲ್ಪೆ ತೋಪು, ಎಚ್‌ಬಿಆರ್‌ ಲೇಔಟ್‌, ಸುಬ್ಬನಪಾಳ್ಯ, ಗೋವಿಂದಪುರ, ರಷದ್‌ ನಗರ, ಕಚಮಾರನಹಳ್ಳಿ, ದೊಮ್ಮಸಂದ್ರ ರಸ್ತೆ, ಕಾಡುಗೋಡಿ, ಶಂಕರಪುರ ಮತ್ತು ಮಹದೇವಪುರದಲ್ಲಿ ಇಂದು ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಸವೇಶ್ವರನಗರ, ಅಗ್ರಹಾರದಾಸರಹಳ್ಳಿ, ಅಗ್ರಹಾರದಾಸರಹಳ್ಳಿ, ಕೆಎಚ್‌ಬಿ 2ನೇ ಹಂತ, ಲಕ್ಷ್ಮಣನಗರ, ಹನುಮಂತರಾಯನ ಪಾಳ್ಯ, ಅಮರಜ್ಯೋತಿ ನಗರ, ಹನುಮಂತನಗರ, ಎನ್‌ಆರ್‌ ಕಾಲೋನಿ, ಉತ್ತರಹಳ್ಳಿ ರಸ್ತೆ, ಕೊಂಚಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣನಗರ, ಬ್ರಾಂಡ್‌ರಹಳ್ಳಿ ಮುಖ್ಯರಸ್ತೆ, ಅಂಡೇಶ್ವರಿನಗರದ ಮುಖ್ಯರಸ್ತೆ, ಕೆಎಚ್‌ಬಿ 2ನೇ ಹಂತ ಸೇರಿವೆ. ರಸ್ತೆ, ಮಲ್ಲತ್ತಹಳ್ಳಿ ಲೇಔಟ್ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Power Cut: ಬನಶಂಕರಿ, ವಿದ್ಯಾರಣ್ಯಪುರ, ಶ್ರೀನಗರ ಸೇರಿ ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Published On - 8:40 am, Fri, 18 February 22

ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?
ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?