ತುಮಕೂರು: ಎಸಿಬಿ ದಾಳಿ ವೇಳೆ ತಪ್ಪಿಸಿಕೊಂಡಿದ್ದ ಪಿಎಸ್​ಐ ಜನ್ನೇನಹಳ್ಳಿ ಅರಣ್ಯದ ಬಳಿ ವಶಕ್ಕೆ

| Updated By: ganapathi bhat

Updated on: Nov 03, 2021 | 6:10 PM

ಸಮವಸ್ತ್ರ ಕಿತ್ತೆಸೆದು ಓಡಿ ಹೋಗುತ್ತಿದ್ದ ಸೋಮಶೇಖರ್​ ಇದೀಗ ಎಸಿಬಿ ಅಧಿಕಾರಿಗಳ ವಶವಾಗಿದ್ದಾರೆ. ಲಂಚ ಸ್ವೀಕಾರ ವೇಳೆ ಪಿಎಸ್​​ಐ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತುಮಕೂರು: ಎಸಿಬಿ ದಾಳಿ ವೇಳೆ ತಪ್ಪಿಸಿಕೊಂಡಿದ್ದ ಪಿಎಸ್​ಐ ಜನ್ನೇನಹಳ್ಳಿ ಅರಣ್ಯದ ಬಳಿ ವಶಕ್ಕೆ
ಸಿ.ಎಸ್.ಪುರ ಪೊಲೀಸ್ ಠಾಣೆ ಮತ್ತು ಆರೋಪಿ ಸೋಮಶೇಖರ್
Follow us on

ತುಮಕೂರು: ಎಸಿಬಿ ದಾಳಿಯ ವೇಳೆ ತಪ್ಪಿಸಿಕೊಂಡಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನ್ನೇನಹಳ್ಳಿಯ ಪಿಎಸ್​ಐ ವಶಕ್ಕೆ ಪಡೆಯಲಾಗಿದೆ. ಜನ್ನೇನಹಳ್ಳಿ ಅರಣ್ಯದ ಬಳಿ ಪಿಎಸ್ಐಯನ್ನು ಹಿಡಿದಿದ್ದಾರೆ. ತಪ್ಪಿಸಿಕೊಂಡು ಹೋಗಿದ್ದ ಪಿಎಸ್​ಐ ಸೋಮಶೇಖರ್​ರನ್ನು ಎಸಿಬಿ ಅಧಿಕಾರಿಗಳು ಬೆನ್ನಟ್ಟಿ ಹಿಡಿದಿದ್ದಾರೆ. ಸಮವಸ್ತ್ರ ಕಿತ್ತೆಸೆದು ಓಡಿ ಹೋಗುತ್ತಿದ್ದ ಸೋಮಶೇಖರ್​ ಇದೀಗ ಎಸಿಬಿ ಅಧಿಕಾರಿಗಳ ವಶವಾಗಿದ್ದಾರೆ. ಲಂಚ ಸ್ವೀಕಾರ ವೇಳೆ ಪಿಎಸ್​​ಐ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬೆನ್ನಟ್ಟುವಾಗ ಸುಸ್ತಾಗಿದ್ದ ಎಸಿಬಿ ಕಾನ್ಸ್​​ಟೇಬಲ್​​ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಸಿಬಿ ಕಾನ್ಸ್​​ಟೇಬಲ್​​ ಮಹೇಶ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಪಿಎಸ್​ಐ ಸೋಮಶೇಖರ್ ವಿಚಾರಣೆ ನಡೆಸಲಾಗುತ್ತಿದೆ.

ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವರ ವಿರುದ್ಧ ಕಳೆದ ಅಕ್ಟೋಬರ್ 22ರಂದು ದೂರು ದಾಖಲಾಗಿತ್ತು. ಇದನ್ನೇ ದಾಳವಾಗಿಸಿಕೊಂಡು ಪೊಲೀಸರು ಚಂದ್ರಣ್ಣನ ಕಾರು ಮುಟ್ಟುಗೋಲು ಹಾಕಿಕೊಂಡಿದ್ದರು. ಕೋರ್ಟ್​ನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದ ಚಂದ್ರಣ್ಣ ಅವರ ಬಳಿ ಕಾರು ಬಿಡಲು ಪಿಎಸ್​ಐ ₹ 28 ಸಾವಿರಕ್ಕೆ ಹೆಡ್​ ಕಾನ್​ಸ್ಟೆಬಲ್ ನಯಾಜ್ ಅಹಮದ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟಿದ್ದರು.

ಈ ಪೈಕಿ ಮೊದಲ ಕಂತಿನಲ್ಲಿ ₹ 12 ಸಾವಿರ ಲಂಚವನ್ನು ಪಿಎಸ್​ಐ ಪಡೆದುಕೊಂಡಿದ್ದರು. ಉಳಿದ ₹ 16 ಸಾವಿರ ಪಡೆಯುವ ವೇಳೆ ಪಿಎಸ್ಐ ಎಸಿಬಿ ಬಲೆಗೆ ಬಿದ್ದಿದ್ದರು. ಪಿಎಸ್ಐ ಲಂಚ ಕೇಳುತ್ತಿರುವ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಇನ್​ಸ್ಪೆಕ್ಟರ್ ವಿಜಯಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆದಿತ್ತು.

ಇದನ್ನೂ ಓದಿ: ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದ ಪಿಎಸ್​ಐ ಪರಾರಿ: ಪೊಲೀಸರನ್ನು ಬೆನ್ನಟ್ಟಿದ ಸಾರ್ವಜನಿಕರು

ಇದನ್ನೂ ಓದಿ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ; ನಾಲ್ವರು ಪೊಲೀಸ್ ವಶಕ್ಕೆ

Published On - 6:10 pm, Wed, 3 November 21