ಫುಡ್ ತಡವಾಗಿ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಸ್ವಿಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೆಸ್ಟೋರೆಂಟ್ ಮಾಲೀಕ

| Updated By: sandhya thejappa

Updated on: Dec 27, 2021 | 8:45 AM

ಚಿಕನ್ ಬಿರಿಯಾನಿ ಆರ್ಡರ್ ಬಂದಿತ್ತು. ಆರ್ಡರ್ ಕಲೆಕ್ಟ್ ಮಾಡಿಕೊಳ್ಳಲು ನಿತೀಶ್ ರೆಸ್ಟೋರೆಂಟ್ಗೆ ಹೋಗಿದ್ದರು. ಈ ವೇಳೆ ಆರ್ಡರ್ ಸ್ವಲ್ಪ ಬೇಗ ಕೊಡಿ ಎಂದಿದ್ದಾರೆ. ಆರ್ಡರ್ ಬಂದಾಗಲೆಲ್ಲಾ ತಡವಾಗಿ ಫುಡ್ ನೀಡುತ್ತಾರೆ.

ಫುಡ್ ತಡವಾಗಿ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಸ್ವಿಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೆಸ್ಟೋರೆಂಟ್ ಮಾಲೀಕ
ಸ್ವಿಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ
Follow us on

ತುಮಕೂರು: ಫುಡ್ ತಡವಾಗಿ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಸ್ವಿಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಎಸ್ಪಿ ಕಚೇರಿ ಮುಂಭಾಗದಲ್ಲಿರುವ ನವಾಬಿ ರೆಸ್ಟೋರೆಂಟ್ನಲ್ಲಿ ನಡೆದಿದೆ. ಹೋಟೆಲ್ ಮಾಲೀಕ ಸ್ವಿಗ್ಗಿ ಸಿಬ್ಬಂದಿ ನಿತೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹೊಸ ಬಡಾವಣೆ ಪೊಲೀಸ್ ಠಾಣೆಗೆ ನಿತೀಶ್ ದೂರು ನೀಡಿದ್ದಾರೆ. ನಿತೀಶ್ ಪುಡ್ ಕಲೆಕ್ಟ್ ಮಾಡಲು ರೆಸ್ಟೋರೆಂಟ್ಗೆ ಹೋಗಿದ್ದರು. ಈ ವೇಳೆ ಫುಡ್ ಬೇಗ ಕೊಡಿ ಅಂತ ಕೇಳಿದ್ದಕ್ಕೆ ರೆಸ್ಟೋರೆಂಟ್ ಮಾಲೀಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಚಿಕನ್ ಬಿರಿಯಾನಿ ಆರ್ಡರ್ ಬಂದಿತ್ತು. ಆರ್ಡರ್ ಕಲೆಕ್ಟ್ ಮಾಡಿಕೊಳ್ಳಲು ನಿತೀಶ್ ರೆಸ್ಟೋರೆಂಟ್​ಗೆ ಹೋಗಿದ್ದರು. ಈ ವೇಳೆ ಆರ್ಡರ್ ಸ್ವಲ್ಪ ಬೇಗ ಕೊಡಿ ಎಂದಿದ್ದಾರೆ. ಆರ್ಡರ್ ಬಂದಾಗಲೆಲ್ಲಾ ತಡವಾಗಿ ಫುಡ್ ನೀಡುತ್ತಾರೆ. ಕೇಳಲು ಹೋದವರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂಬ ಆರೋಪ ಕೇಳಿಬಂದಿದೆ.

ಪಾದಚಾರಿ ದುರ್ಮರಣ
ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ದುರ್ಮರಣ ಹೊಂದಿದ್ದಾರೆ. ಬೆಂಗಳೂರಿನ ನಾಗರಬಾವಿಯ ರಿಂಗ್ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಬೇನಂ ಬರ್ಮನ್(42) ಮೃತಪಟ್ಟಿದ್ದಾರೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ.

ರೈಲಿಗೆ ಸಿಲುಕಿ ವೃದ್ದೆ ಸಾವು
ತುಮಕೂರಿನ ಕ್ಯಾತ್ಸಂದ್ರ ಬಳಿ ರೈಲಿಗೆ ಸಿಲುಕಿ ಸುಮಾರು 65 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

ಬಿಸಿಬಿಸಿ ರಾಗಿಮುದ್ದೆ-ನಾಟಿ ಕೋಳಿ ಸಾರಿನ ಘಮ, ಐದೂವರೆ ಮುದ್ದೆ ತಿಂದು ಗೆದ್ದು ತೇಗಿದ ಶೂರ!

ಸಾವಿನಲ್ಲೂ ಸಾರ್ಥಕತೆ – ಮಂಡ್ಯ ಯುವಕನ ಅಂಗಾಗ ದಾನ, ಪೋಷಕರ ಸಮಯಪ್ರಜ್ಞೆ, ಆರು ಜನರ ಬಾಳಿಗೆ ಬೆಳಕು

Published On - 8:41 am, Mon, 27 December 21