ತುಮಕೂರು: ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು, ಜನರನ್ನು ಪ್ರಚೋದಿಸಲು ಈ ಕೃತ್ಯ ನಡೆದಿದೆ ಎಂದ ಎಸ್‌ಪಿ ರಾಹುಲ್‌ ಕುಮಾರ್

| Updated By: ಆಯೇಷಾ ಬಾನು

Updated on: Aug 16, 2022 | 7:45 PM

ಅಮೃತ ಮಹೋತ್ಸವದ ಶುಭಕೋರಿ ಬಿಜೆಪಿ ವತಿಯಿಂದ ನಗರ ಶಾಸಕ ಜ್ಯೋತಿಗಣೇಶ್ ಪೋಟೋ ಸಹಿತ ಸಾವರ್ಕರ್ ಫ್ಲೆಕ್ಸ್ ಹಾಕಲಾಗಿತ್ತು. ಆದ್ರೆ ಕೆಲ ಕಿಡಿಗೇಡಿಗಳು ಮಧ್ಯರಾತ್ರಿ ಬಂದು ಫ್ಲೆಕ್ಸ್ ಹರಿದಿದ್ದಾರೆ.

ತುಮಕೂರು: ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು, ಜನರನ್ನು ಪ್ರಚೋದಿಸಲು ಈ ಕೃತ್ಯ ನಡೆದಿದೆ ಎಂದ ಎಸ್‌ಪಿ ರಾಹುಲ್‌ ಕುಮಾರ್
ಫ್ಲೆಕ್ಸ್ ಅಳವಡಿಸಲಾಗಿದ್ದ ರಸ್ತೆ
Follow us on

ತುಮಕೂರು: ಸಾವರ್ಕರ್ ಫ್ಲೆಕ್ಸ್(Veer Savarkar) ವಿಚಾರವಾಗಿ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಆಗಸ್ಟ್ 15ರಂದು ಭಾರೀ ಗಲಾಟೆ ನಡೆದಿತ್ತು. ಇದರ ಬೆನ್ನಲ್ಲೆ ಈಗ ತುಮಕೂರಿನಲ್ಲೂ ಕೆಲ ಕಿಡಿಗೇಡಿಗಳು ಸಾವರ್ಕರ್ ಫ್ಲೆಕ್ಸ್ ಹರಿದು ದರ್ಪ ಮೆರೆದಿದ್ದಾರೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತುಮಕೂರು ನಗರದ ಹೃದಯ ಭಾಗದಲ್ಲಿರುವ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ಅಳವಡಿಸಿದ್ದ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಲಾಗಿದೆ.

ನಿನ್ನೆ ದೇಶದೆಲ್ಲೆಡೆ 75ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ದೇಶದೆಲ್ಲೆಡೆ ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ತ್ಯಾಗ ಬಲಿದಾನ ಮಾಡಿದವನ್ನ ನೆನೆದು ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು. ಹೀಗಿರುವಾಗ ತುಮಕೂರಿನಲ್ಲೂ ಕೂಡ ಶಾಸಕ ಜ್ಯೋತಿ ಗಣೇಶ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಸುಮಾರು 86 ಹೋರಾಟಗಾರರ ಫ್ಲೆಕ್ಸ್ ಗಳನ್ನ ಹಾಕಿಸಿದ್ದರು. ಇದರಲ್ಲಿ ವಿವಾದಿತ ಕೇಂದ್ರಬಿಂದುವಾಗಿರುವ ವೀರ ಸಾರ್ವಕರ್ ರವರ ಫೋಟೋ ಕೂಡ ಹಾಕಲಾಗಿತ್ತು.ಆದರೆ ಈ ಪೋಟೊವನ್ನ ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ತುಮಕೂರಿನ ಎಂಪ್ರೆಸ್ ಕಾಲೇಜ್ ಮುಂಬಾಗದಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ಪೋಟೊವನ್ನ ಹರಿದು ಹಾಕಲಾಗಿದ್ದು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ತಡರಾತ್ರಿ ಯಾರೋ ದುಷ್ಕರ್ಮಿಗಳು ಫೋಟೋವನ್ನ ಹರಿದು ಹಾಕಲಾಗಿದ್ದು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಮುಸ್ಲಿಂ ಸಮಾಜದವರೆ ಹೀಗೆ ಮಾಡಿರಬಹುದು ಅನ್ನೋ ಸಂಶಯ ವ್ಯಕ್ತವಾಗಿದ್ದು ಹೀಗೆ ಮಾಡಿರುವವರನ್ನ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಪ್ರಕರಣ ಹಾಗೂ ತುಮಕೂರಿನ ಫ್ಲೆಕ್ಸ್ ಹರಿದು ಹಾಕಿದವರನ್ನ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕೃತ್ಯವೆಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ

ಘಟನೆ ಸಂಬಂಧ ಎಸ್‌ಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಪ್ರತಿಕ್ರಿಯೆ ನೀಡಿದ್ದು, ಇದನ್ನು ಯಾರೇ ಮಾಡಿರಲಿ ಅವರ ಉದ್ದೇಶ ಏನೆಂಬುದುನ್ನ ಪತ್ತೆ ಹಚ್ಚುತ್ತೇವೆ. ಘಟನೆ ಸಂಬಂಧ ಈಗಾಗಲೇ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದೇವೆ. ಕೃತ್ಯವೆಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ಲೆಕ್ಸ್‌ಗಳನ್ನ ಅಳವಡಿಸಲಾಗಿತ್ತು. ತುಮಕೂರಿನ ಅಶೋಕ ರಸ್ತೆಯಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕಲಾಗಿತ್ತು. ನಿನ್ನೆ ಹರಿದಿದ್ದ ಫ್ಲೆಕ್ಸ್‌ ತೆರವು ಮಾಡಿ ಇಂದು ಬೆಳಗ್ಗೆ ಪಾಲಿಕೆಯ ಸಿಬ್ಬಂದಿ ನಮ್ಮ ಗಮನಕ್ಕೆ ತಂದಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜನರು ಎಚ್ಚರ ವಹಿಸಿ. ಏನಾದ್ರೂ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಿ ತನಿಖೆಗೆ ಸಹಕರಿಸಿ ಎಂದು ತುಮಕೂರು ಎಸ್‌ಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಮನವಿ ಮಾಡಿದ್ದಾರೆ.

ಫ್ಲೆಕ್ಸ್ ನಿಂದ ಅಹಿತಕರ ಘಟನೆಗಳು ನಡೆಯುವ ಕಾರಣದಿಂದ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂಜಾನೆಯೇ ನಗರದಲ್ಲಿ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ.ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಜಿಲ್ಲಾ ಬಿಜೆಪಿ ಆರೋಪಿಗಳನ್ನ ಬಂದಿಸುವಂತೆ ಒತ್ತಾಯಿಸಿದ್ದಾರೆ.

Published On - 6:25 pm, Tue, 16 August 22