ತುಮಕೂರು: ಬೆಸ್ಕಾಂ (BESCOM) ತುಮಕೂರು ಗ್ರಾಮೀಣ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಹೊಸದಾಗಿ 11 ಕೆವಿ ಲಿಂಕ್ ಲೈನ್ ಕಾಮಗಾರಿ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಜನವರಿ 04 ರಿಂದ 07, ಜನವರಿ 10 ರಿಂದ 12 ಹಾಗೂ ಜನವರಿ 17 ರಿಂದ 21 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ (Power cut) ಆಗಿಲಿದೆ. ಹಾಲನೂರು, ಆದಲಾಪುರ, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಮಲ್ಲಸಂದ್ರಪಾಳ್ಯ, ಹಳೆಗ್ರಾಮ, ದಿಣ್ಣೇಪಾಳ್ಯ, ಕರಲುಬಾರೆ, ಹಬ್ಬತನಹಳ್ಳಿ, ಗೊಲ್ಲರಹಟ್ಟಿ ಸೇರಿದಂತೆ ಸುತ್ತಲೂ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಗ್ರಾಹಕರು ಸಹಕರಿಸಬೇಕು ಎಂದು ಎಇಇ ಮನವಿ ಮಾಡಿದ್ದಾರೆ.
ಕೌಶಲ ತರಬೇತಿಗೆ ಅರ್ಜಿ ಆಹ್ವಾನ
ಭಾರತ ಸರ್ಕಾರದ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್ (ಎನ್ಎಸ್ಡಿಸಿ) ಕೌಶಲಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ವಿದ್ಯಾಭ್ಯಾಸ ನಿಲ್ಲಿಸಿರುವ 15-29 ವರ್ಷ ವಯೋಮಿತಿಯವರಿಗೆ ಕೌಶಲ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನಗರದ ಎಂಪ್ರೇಸ್ ಶಾಲೆಯಲ್ಲಿ (ಕೆಪಿಎಸ್) ಸ್ಥಾಪಿಸಿರುವ ಸ್ಕಿಲ್ ಹಬ್ ಕೇಂದ್ರದಲ್ಲಿ ರಿಟೇಲ್ಸ್ ಸೇಲ್ಸ್ ಅಸೋಸಿಯೇಟ್ ಅಂಡ್ ಐಟಿ ಜಾಬ್ ರೋಲ್ಗಳಲ್ಲಿ ಸುಮಾರು ಆರು ತಿಂಗಳ ಕಾಲ ತರಬೇತಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಜನವರಿ 7 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲಾಭಿವೃದ್ದಿ ಕಚೇರಿ 1 ನೇ ಮಹಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಟ್ಟಡ. ತುಮಕೂರು. ದೂರವಾಣಿ ಸಂಖ್ಯೆ – 0816-2255652, 9448308395.
ಇದನ್ನೂ ಓದಿ:
Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?
ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರ ದುರ್ಮರಣ; ರಕ್ಷಣೆಗೆ ಬಂದ ಮೂರನೇಯವನಿಗೂ ಶಾಕ್