ತುಮಕೂರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಹೆಸರಲ್ಲಿದೆ ಕೋಟ್ಯಾಂತರ ರೂ ಆಸ್ತಿ: ಪತ್ನಿ ಸಹ ಕೋಟಿ ಕೋಟಿ ಒಡತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 01, 2024 | 6:29 PM

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಇಂದು(ಏ.01) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಂಪೂರ್ಣ ಆಸ್ತಿ ವಿವರ ಸಲ್ಲಿಸಿರುವ ಅವರು, ಒಟ್ಟು 17.74 ಕೋಟಿ ರೂ. ಚರಾಸ್ತಿ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ.

ತುಮಕೂರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಹೆಸರಲ್ಲಿದೆ ಕೋಟ್ಯಾಂತರ ರೂ ಆಸ್ತಿ: ಪತ್ನಿ ಸಹ ಕೋಟಿ ಕೋಟಿ ಒಡತಿ
ವಿ ಸೋಮಣ್ಣ ಆಸ್ತಿ ವಿವರ
Follow us on

ತುಮಕೂರು, ಏ.01: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ(V Somanna) ಅವರು ಇಂದು(ಏ.01) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ತಮ್ಮ ಆರಾಧ್ಯ ಧೈವವಾಗಿರುವ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು, ಬಳಿಕ ವಿನೋಭಾ ನಗರದ ಅರ್ಧನಾರೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಸಾಥ್ ನೀಡಿದರು.

17.74 ಕೋಟಿ ರೂ. ಚರಾಸ್ತಿ, ಸ್ಥಿರಾಸ್ತಿ ಹೊಂದಿರುವ ವಿ ಸೋಮಣ್ಣ

ಇನ್ನು 69,79,921 ರೂಪಾಯಿ ವಾರ್ಷಿಕ ಆದಾಯ ಹೊಂದಿರುವ ವಿ.ಸೋಮಣ್ಣ ಅವರು ಕೃಷಿ ಮೂಲದಿಂದಲೇ 65 ಲಕ್ಷ ಆದಾಯ ಗಳಿಸುತ್ತಾರೆ. ಇನ್ನು ಇವರ ಚರಾಸ್ತಿ 5.18 ಕೋಟಿ ಹಾಗೂ 12.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 8,12,563 ನಗದು ಹೊಂದಿರುವ ಅವರು, ತಮ್ಮ ಬ್ಯಾಂಕ್ ಖಾತೆಯಲ್ಲಿ 4,55,32,896 ಕೋಟಿ ಹಣವಿಟ್ಟಿದ್ದಾರೆ. ಇವರ ಷೇರುಗಳು ಮತ್ತು ಹೂಡಿಕೆ ಒಟ್ಟು ಮೌಲ್ಯ 9,84,105 ರೂಪಾಯಿ ಇದ್ದು, ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ 4,38,81,625 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇನ್ನು ಇವರ ಬಳಿ 1,15,99,689 ಕೋಟಿ ರೂ. ಮೌಲ್ಯದ ಒಡವೆಗಳಿವೆ. ಜೊತೆಗೆ ಮೂರು ಕಾರುಗಳನ್ನು ಹೊಂದಿದ್ದಾರೆ. ಇವರ ಹೆಸರಿನಲ್ಲಿ ಚಿಕ್ಕಮಗಳೂರು ತಾಲೂಕಿನ ಬಾಸಾಪುರದಲ್ಲಿ 68.01 ಎಕರೆ ಜಮೀನು, ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ವಾಣಿಜ್ಯ ಕಟ್ಟಡ ಹಾಗೂ ವಿಜಯನಗರ, ಎಂಆರ್​ಸಿಆರ್ ಲೇಔಟ್​ನಲ್ಲಿ ಎರಡು ವಸತಿ ಕಟ್ಟಡವಿದ್ದು,
ಕೆಂಗೇರಿಯಲ್ಲಿರುವ ವಸತಿ ಕಟ್ಟಡ ಬರೊಬ್ಬರಿ 2,70,00,000 ಕೋಟಿ ರೂಪಾಯಿ ಮೌಲ್ಯವಿದೆ. ಇನ್ನು ಒಟ್ಟು 6,44,52,206 ರೂ. ಸಾಲ ಮಾಡಿರುವ ಸೋಮಣ್ಣ, ಇಬ್ಬರು ಮಕ್ಕಳಿಗೆ ಕೈಸಾಲ ನೀಡಿದ್ದಾರೆ.

ಇದನ್ನೂ ಓದಿ:ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು: ಯಾರು ಯಾವ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ರು? ಇಲ್ಲಿವೆ ಫೋಟೋಸ್

ಪತ್ನಿ, ಮಕ್ಕಳ ಆಸ್ತಿ ವಿವರ ಇಂತಿದೆ

ಇನ್ನು ಸೋಮಣ್ಣ ಪತ್ನಿ ಶೈಲಜಾ ಅವರ ಹೆಸರಲ್ಲಿ 4.38 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಒಟ್ಟು ಸ್ಥಿರಾಸ್ತಿ ಮೌಲ್ಯ 38,65,00,000 ಕೋಟಿ ರೂ. ಇದೆ. ಇವರ ವಾರ್ಷಿಕ ಆದಾಯ 49,53,070 ಲಕ್ಷ ರೂಪಾಯಿಯಿದ್ದು, ಕೃಷಿ ಮೂಲದಿಂದಲೇ  2,22,650 ಲಕ್ಷ ರೂ. ಆದಾಯ ಬರಲಿದೆ. ಇನ್ನು ಇವರ ಬ್ಯಾಂಕ್ ಖಾತೆಯಲ್ಲಿ 38,96,512 ಲಕ್ಷ ರೂ. ಹಣವಿದೆ. ಇನ್ನು ಇಬ್ಬರು ಪುತ್ರರಾದ ಅರುಣ್​ಗೆ 14,52,322 ರೂ., ಇನ್ನೊಬ್ಬ ಮಗ ನವೀನ್​ಗೆ 1,56,23,297 ರೂಪಾಯಿ ಕೈಸಾಲ ನೀಡಿದ್ದಾರೆ. ಇವರ ಬಳಿ 2 ಟೊಯೋಟಾ ಇನ್ನೋವಾ, 1 ಟೊಯೋಟಾ ಕ್ವಾಲಿಸ್ ಕಾರು ಇದೆ. ಇನ್ನು ಸೋಮಣ್ಣ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ 1 ಕೇಸ್​ ಇದ್ದು, ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​​ನಲ್ಲಿ ಎರಡು ಪ್ರಕರಣಗಳು ಇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ