ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದವರನ್ನ ದೇವರಂತೆ ಬಂದು ರಕ್ಷಿಸಿದ ಸರ್ಕಾರಿ ಬಸ್ ಚಾಲಕ
ಕೆರೆಯಲ್ಲಿ ಮುಳುಗುತ್ತಿದ್ದವರನ್ನ ರಕ್ಷಿಸಿದ ಸರ್ಕಾರಿ ಬಸ್ ಚಾಲಕರೊಬ್ಬರು ರಕ್ಷಿಸುವ ಮೂಲಕ ಮಾನವೀಯತೆ ಮರೆದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.
ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ಸರ್ಕಾರಿ ಬಸ್ ಚಾಲಕರೊಬ್ಬರು ರಕ್ಷಿಸಿದ ಘಟನೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ. ಸುಷ್ಮಾ (18) ಹಾಗೂ ಮಂಜುಳ (9) ತಾಯಿ ಜೊತೆ ಬಟ್ಟೆ ತೊಳೆಯಲು ಹಂದಿಕುಂಟೆ ಅಗ್ರಹಾರ ಕೆರೆ ಬಳಿ ಹೋಗಿದ್ದಾರೆ. ಈ ವೇಳೆ ಸುಷ್ಮಾ ಮತ್ತು ಮಂಜುಳ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬೀಳುತ್ತಾರೆ. ಕೂಡಲೆ ಮಕ್ಕಳ ನೆರವಿಗೆ ದಾವಿಸುವಂತೆ ಮನವಿ ಮಾಡಲು ತಾಯಿ ರಸ್ತೆಗೆ ಓಡಿ ಹೋಗಿ ಕೂಗಿಕೊಂಡಿದ್ದಾರೆ. ಈ ವೇಳೆ ದೇವರಂತೆ ಬಂದ ಸರ್ಕಾರಿ ಬಸ್ ಚಾಲಕ ಮಂಜುನಾಥ್ ಕೂಡಲೇ ಬಸ್ ನಿಲ್ಲಿಸಿ ಕೆರೆಗೆ ಹಾರಿ ಇಬ್ಬರು ಸಹೋದರಿಯರನ್ನು ರಕ್ಷಿಸಿ ಮಾನವೀಯತೆ ಮೆರೆದರು. ಶಿರಾದಿಂದ ನಾಗಪ್ಪನಹಳ್ಳಿ ಕಡೆ ಸಾರಿಗೆ ಬಸ್ ಹೋಗುತ್ತಿತ್ತು.
ಕಾಳಾಪುರ ಗ್ರಾಮದಲ್ಲಿ ಕಲ್ಲು ತೂರಾಟ, ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿಕೆ
ವಿಜಯನಗರ: ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಕಲ್ಲು ತೂರಾಟ ಪ್ರಕರಣ ಸಂಬಂಧ ಹೇಳಿಕೆ ನೀಡಿದ ಜಿಲ್ಲಾಧಿಕಾರಿ ವೆಂಕಟೇಶ್, ಕಾಳಾಪುರ ಗ್ರಾಮಕ್ಕೆ ನಾನು ಹೋಗಿ ಹಾನಿಯಾಗಿರೋ ಮನೆಗಳಿಗೆ ಭೇಟಿ ಕೊಟ್ಟಿದ್ದೇನೆ. ಎಷ್ಟು ಮನೆಗಳು ಹಾನಿಯಾಗಿವೆ, ಎಷ್ಟು ವಾಹನಗಳು ಹಾನಿಯಾಗಿವೆ ಅಂತ ಸರ್ವೇ ಮಾಡಲು ಸೂಚಿಸಿದ್ದೇನೆ. ಎಸ್ಪಿ ಅವರು ಸ್ಥಳದಲ್ಲೇ ಇದ್ದಾರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ. 20-22 ಜನರಿಗೆ ಗಾಯಗಳಾಗಿವೆ, ಕೇವಲರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಕೆಲವರು ಆಸ್ಪತ್ರೆಗೆ ಸೇರಿದ್ದಾರೆ. ಒಬ್ಬರು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಅವರು ಹುಷಾರಾಗಿದ್ದಾರೆ. ಘಟನೆ ಸಂಬಂಧ 5 ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಈ ಬಗ್ಗೆಯೂ ಎಫ್ಐಆರ್ ಆಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಹೆದ್ದಾರಿ ದಾಟಲು ಹೋಗಿ 12 ಕೃಷ್ಣಮೃಗಗಳು ಸಾವು
ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಹಿನ್ನಲೆ ಸಿರಿಗೆರೆ ಮಠದ ಭಕ್ತರು ಕೊಟ್ಟೂರುವರೆಗೆ ಬೈಕ್ ರ್ಯಾಲಿ ಆಯೋಜಿಸಿದ್ದರು. ಈ ವೇಳೆ ಸಿರಿಗೆರೆ ಉಜ್ಜಯಿನಿ ಭಕ್ತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ನಂತರ ಕಾಳಾಪುರ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Sun, 29 January 23