ವಿಜಯಪುರ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಕೃಷ್ಣಮೃಗಗಳ ಸಾವು: ಧ್ರುವ ಪಾಟೀಲ್ ಆಕ್ರೋಶ
ಹೆದ್ದಾರಿ ದಾಟಲು ಹೋಗಿ 12 ಕೃಷ್ಣಮೃಗಗಳು ಸಾವನ್ನಪ್ಪಿರುವಂತಹ ಹೃದಯವಿದ್ರಾವಕ ಘಟನೆ ಸೊಲ್ಲಾಪುರ-ಬಿಜಾಪುರ ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರು: ಹೆದ್ದಾರಿ ದಾಟಲು ಹೋಗಿ 12 ಕೃಷ್ಣಮೃಗಗಳು (blackbucks) ಸಾವನ್ನಪ್ಪಿರುವಂತಹ ಹೃದಯವಿದ್ರಾವಕ ಘಟನೆ ಸೊಲ್ಲಾಪುರ-ವಿಜಯಪುರ ಹೆದ್ದಾರಿಯಲ್ಲಿ ನಡೆದಿದೆ. ಯಾವುದೇ ರಕ್ಷಣೆ ಇಲ್ಲದೆ ಹೈವೆಯಿಂದ ಜಿಗಿದು 50 ಅಡಿ ಸರ್ವಿಸ್ ರಸ್ತೆಗೆ ಬಿದ್ದು ದುರ್ಮರಣ ಹೊಂದಿವೆ. ಸೋಲಾಪುರ-ವಿಜಯಪುರ ಭಾಗದಲ್ಲಿ ಕೃಷ್ಣ ಮೃಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪುತ್ರ ಧ್ರುವ ಪಾಟೀಲ್ 12 ಕೃಷ್ಣಮೃಗಗಳ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೃಷ್ಣಮೃಗಗಳ ರಕ್ಷಣೆಗೆ ಫೆನ್ಸಿಂಗ್ ಹಾಕುವಂತೆ ಆಗ್ರಹಿಸಿದರು.
ಬೀದಿ ನಾಯಿಗಳ ದಾಳಿಗೆ ಅಮಾಯಕ ಭಿಕ್ಷುಕಿ ಸಾವು
ಧಾರವಾಡ: ಭಿಕ್ಷೆ ಬೇಡುತ್ತ, ಜನ ಕೊಟ್ಟಿದ್ದನ್ನು ತಿಂದು, ಎಲ್ಲೆಂದರಲ್ಲಿ ಮಲಗಿ ಅನಾಥವಾಗಿ ಜೀವನ ಸಾಗಿಸುತ್ತಿದ್ದ ಭಿಕ್ಷುಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿರುವ ಅಮಾನವೀಯ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ಮಲಗಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಪರಿಣಾಮ ಭಿಕ್ಷುಕಿ ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ: ಹೊಡೆದಾಡಿಕೊಂಡ ಮಂಗಳಮುಖಿಯರು
ಧಾರವಾಡದಲ್ಲಿ ಬೀದಿ ನಾಯಿಗಳ ಆವಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ಎಂದಿನಂತೆ ರಸ್ತೆ ಬದಿ ರಾತ್ರಿ ನಿದ್ದೆಗೆ ಜಾರಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ಎರಗಿವೆ. ಭಿಕ್ಷುಕಿಯನ್ನು ಕಚ್ಚಿ ಎಳೆದಾಡಿವೆ. ನಾಯಿ ದಾಳಿಯಿಂದ ಭಿಕ್ಷುಕಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಗ್ರಾಮದ ಖಬರಸ್ತಾನ್ ಬಳಿ ಶವ ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿ ದಾಳಿಗೆ ಮೃತಪಟ್ಟ ಭಿಕ್ಷುಕಿ ಹೆಸರು, ವಿಳಾಸ ಪತ್ತೆಯಾಗಿಲ್ಲ.
ಮಲಗಿದ್ದ ಮಹಿಳೆಗೆ ಬೆಂಕಿ ಹಚ್ಚಿ ಭೀಕರ ಹತ್ಯೆ
ಮಂಡ್ಯದ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ಗ್ರಾಮಸ್ಥರು ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಮಲಗಿದ್ದ ಮಹಿಳೆ ಪ್ರೇಮ (42) ಬೆಂಕಿ ಹಚ್ಚಿ ಭೀಕರ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ಹತ್ಯೆ ಮಾಡಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಬೆಸಗರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತರಳ ಬಾಳು ಸಿರಿಗೆರೆ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಉಜ್ಜೈನಿ ಸುತ್ತಮುತ್ತಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ
ಮೃತ ಮಹಿಳೆಗೆ ಓರ್ವ ಪುತ್ರನಿದ್ದು ಆತ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಪತಿಯ ನಿಧನದ ಬಳಿಕ ಮಹಿಳೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ರಾತ್ರಿ ತಮ್ಮ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾಗ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಹಾಸಿಗೆಯಲ್ಲಿಯೇ ಮಹಿಳೆ ಸಂಪೂರ್ಣ ಸುಟ್ಟು ಹೋಗಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Sun, 29 January 23