ವಿದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ಅನಕೊಂಡ ಹಾವು, ಪ್ರಾಣಿಗಳ ಸಾಗಾಟ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೂವರು ಅರೆಸ್ಟ್

ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಾವು ಮತ್ತು ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

TV9 Web
| Updated By: Rakesh Nayak Manchi

Updated on:Jan 27, 2023 | 10:20 PM

Bengaluru snakes animals Illegal transportation Airport Customs Officials Operation three arrest in international airport bengaluru news in kannada

ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಹಾವು ಮತ್ತು ಪ್ರಾಣಿಗಳನ್ನು ಸಾಗಿಸುತ್ತಿದ್ದ ಜಾಲ ಪತ್ತೆ ಹಚ್ಚಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, 18 ಹಾವು ಮತ್ತು ಪ್ರಾಣಿಗಳನ್ನು ಜಪ್ತಿ ಮಾಡಿದ್ದಾರೆ.

1 / 5
Bengaluru snakes animals Illegal transportation Airport Customs Officials Operation three arrest in international airport bengaluru news in kannada

ಪ್ರಕರಣ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಬ್ಯಾಂಕಾಕ್​ನಿಂದ ನಗರಕ್ಕೆ ಬಂದ ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ಹಾವು ಮತ್ತು ಪ್ರಾಣಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದಾರೆ.

2 / 5
Bengaluru snakes animals Illegal transportation Airport Customs Officials Operation three arrest in international airport bengaluru news in kannada

ಆದರೆ ಹದ್ದಿನ ಕಣ್ಣಿನಂತೆ ತಪಾಸಣೆ ನಡೆಸುತ್ತಿದ್ದ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸರಿಸೃಪ ಹಾಗೂ ಪ್ರಾಣಿಗಳ ಅಕ್ರಮ ಸಾಗಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

3 / 5
Bengaluru snakes animals Illegal transportation Airport Customs Officials Operation three arrest in international airport bengaluru news in kannada

ಬ್ಯಾಂಕಾಕ್​ನಿಂದ ಅಕ್ರಮವಾಗಿ ಸರಿಸೃಪ ಹಾಗೂ ಪ್ರಾಣಿ, ಪಕ್ಷಿಗಳನ್ನು ನಗರಕ್ಕೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶ ಆರೋಪಿಗಳು ಹೊಂದಿರಬಹುದು ಎಂದು ಶಂಕಿಸಲಾಗಿದೆ.

4 / 5
Bengaluru snakes animals Illegal transportation Airport Customs Officials Operation three arrest in international airport bengaluru news in kannada

ಸದ್ಯ ಬಂಧಿತ ಮೂವರು ಆರೋಪಿಗಳಿಂದ ಹಳದಿ ಮತ್ತು ಹಸಿರು ಬಣ್ಣದ ಅನಕೊಂಡ ಹಾವುಗಳು, ಹಳದಿ ಬಣ್ಣದ ಅಮೇಜಾನ್ ಗಿಳಿ, ನೈಲ್ ಮಾನಿಟರ್ ಸೇರಿದಂತೆ ಹಲವು ಅಪರೂಪದ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಎಲ್ಲಾ ಪ್ರಾಣಿಗಳು ಬನ್ನೆರಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಲಾಗಿದೆ.

5 / 5

Published On - 10:20 pm, Fri, 27 January 23

Follow us