ಕ್ಷುಲ್ಲಕ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ: ಹೊಡೆದಾಡಿಕೊಂಡ ಮಂಗಳಮುಖಿಯರು
ಮಂಗಳಮುಖಿಯರ ಎರಡೂ ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಅಸಭ್ಯವಾಗಿ ಹೊಡದಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ಕೊಪ್ಪಳ: ಮಂಗಳಮುಖಿಯರ ಎರಡೂ ಗುಂಪುಗಳ ಮಧ್ಯೆ ಗಲಾಟೆ (Clash) ಉಂಟಾಗಿದ್ದು, ಅಸಭ್ಯವಾಗಿ ಹೊಡದಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ. ಬಳ್ಳಾರಿ, ಹುಬ್ಬಳ್ಳಿ, ಕುರುಗೋಡುದಿಂದ ನೂರಾರು ಮಂಗಳಮುಖಿಯರು ಬಂದಿದ್ದರು. ಬಳ್ಳಾರಿ ಜಿಲ್ಲೆಯ ತಂಡ ಸೇರಿಕೊಳ್ಳುವಂತೆ ನಿರಾಕರಿಸಿದ್ದಕ್ಕೆ ಒಂದು ಗುಂಪಿನ ಕಾರಟಗಿ ಮತ್ತು ಸಿಂಧನೂರು ಭಾಗದ ಮಂಗಳಮುಖಿಯರ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಕ್ರೂಷರ್ ವಾಹನದ ಗ್ಲಾಸ್ ಪುಡಿ ಪುಡಿ ಆಗಿದೆ. ಸದ್ಯ ಮಂಗಳಮುಖಿಯರು ಕಾರಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗ್ರಾಮದಲ್ಲಿ ಸ್ಮಶಾನ ಜಾಗವಿಲ್ಲದ ಹಿನ್ನೆಲೆ: ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ
ಧಾರವಾಡ: ಗ್ರಾಮದಲ್ಲಿ ಸ್ಮಶಾನ ಜಾಗವಿಲ್ಲದ ಹಿನ್ನೆಲೆ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ಮಾಡಿರುವಂತಹ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಸ್ಮಶಾನಕ್ಕಾಗಿ ಅನೇಕ ವರ್ಷಗಳಿಂದ ಗ್ರಾಮಸ್ಥರು ಹೋರಾಟ ನಡೆಸಿದ್ದಾರೆ. ಆದರೂ ಬೇಡಿಕೆ ಈಡೇರಿಲ್ಲ. ಇಂದು ಗ್ರಾಮದಲ್ಲಿ ಸಹದೇವಪ್ಪ ಬಳ್ಳಾರಿ (80) ನಿಧನ ಹೊಂದಿದ್ದು, ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ. ಈ ಹಿನ್ನೆಲೆ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ.
ಲೊಕ್ಕನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ 7 ಎಕರೆ ಕಬ್ಬು ಭಸ್ಮ
ಚಾಮರಾಜನಗರ: ಬೆಂಕಿ ಬಿದ್ದು 7 ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವಂತಹ ಘಟನೆ ಜಿಲ್ಲೆ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ನಡೆದಿದೆ. ಅವಧಿ ಮುಗಿದಿದ್ದರು ಕಟಾವು ಮಾಡದೆ ನಿರ್ಲಕ್ಷ್ಯ ಆರೋಪ ಮಾಡಲಾಗುತ್ತಿದೆ. ಕೊಳ್ಳೆಗಾಲ ಸತ್ಯ ಮಂಗಲಂ ಹೆದ್ದಾರಿಯಲ್ಲೇ ಪೆಂಡಾಲ್ ಹಾಕಿ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ದ ರೈತರು ಪ್ರತಿಭಟನೆ ಮಾಡಿದರು. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅವಧಿ ಮುಗಿದು ಕಬ್ಬು ಒಣಗುತ್ತಿವೆ. ಸುಟ್ಟು ಹೋದ ಕಬ್ಬಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ತರಳ ಬಾಳು ಸಿರಿಗೆರೆ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಉಜ್ಜೈನಿ ಸುತ್ತಮುತ್ತಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ
ಇನ್ನಿಲ್ಲವಾದ ಮೈಸೂರು ಹುಲಿ ಪೀಪಿ ಹೋರಿ
ಹಾವೇರಿ: ಜಿಲ್ಲೆಯ ರಾಣೆಬೇನ್ನೂರಿನ ಕುರುಬಗೇರಿಯ ಮೈಸೂರು ಹುಲಿ ಹೆಸರಿನ ಪೀಪಿ ಹೋರಿ ಇಂದು (ಜ. 29) ಕೊನೆಯುಸಿರೆಳೆದಿದೆ. ನಾಗಪ ಕರಬಸಪ್ಪ ಗೂಳಣ್ಣನವರ ಒಡೆತನದ ಮೈಸುರು ಹುಲಿ. 13 ವರ್ಷಗಳಿಂದ ಸೊಲಿಲ್ಲದ ಸರದಾರನಾಗಿದ್ದ. ಮೈಸೂರು ಹುಲಿ ಅಪಾರ ಅಭಿಮಾನಿಗಳನ್ನ ಹೊಂದಿದ್ದ. ಹೋರಿ ಹಬ್ಬದ ಮೈಸೂರು ಹುಲಿ ಇನ್ನಿಲ್ಲವಾದ ಹಿನ್ನೆಲೆ ಅಭಿಮಾನಿಗಳು ಕಣ್ಣಿರು ಹಾಕಿದ್ದಾರೆ. ಇಂದು ಹಿಂದೂ ವಿಧಿ ವಿಧಾನಗಳಿಂದ ಮೆರವಣಿಗೆ ಮಾಡಿ, ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.