ಐಡಿಬಿಐ ಬ್ಯಾಂಕಿನಲ್ಲಿಟ್ಟಿದ್ದ ಗ್ರಾಹಕರ ಎಫ್ಡಿ ಹಣ ಗುಳಂ: ಆರೋಪಿ ಸಜಿಲಳ ಬಂಧನ
ಐಡಿಬಿಐ ಬ್ಯಾಂಕ್ನಲ್ಲಿ ಗ್ರಾಹಕರ ಎಫ್ಡಿ ಹಣ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಐಡಿಬಿಐ ಬ್ಯಾಂಕ್ನ ರಿಲೇಷನ್ಶಿಪ್ ಮ್ಯಾನೇಜರ್ ಆಗಿದ್ದ ಆರೋಪಿ ಸಜಿಲಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಐಡಿಬಿಐ ಬ್ಯಾಂಕ್ನಲ್ಲಿ ಗ್ರಾಹಕರ ಎಫ್ಡಿ ಹಣ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಐಡಿಬಿಐ ಬ್ಯಾಂಕ್ನ ರಿಲೇಷನ್ಶಿಪ್ ಮ್ಯಾನೇಜರ್ ಆಗಿದ್ದ ಆರೋಪಿ ಸಜಿಲಳನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜಿಲ ಬೆಂಗಳೂರಿನ ಗಾಂಧಿನಗರ ಶಾಖೆಯಲ್ಲಿ 18 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಳು. ಬ್ಯಾಂಕ್ನಲ್ಲಿ ಲೆಕ್ಕಪರಿಶೋಧನೆ ವೇಳೆ ಸಜಿಲಳ ಕಳ್ಳಾಟ ಬಯಲಾಗಿತ್ತು. ಬ್ಯಾಂಕ್ ಮ್ಯಾನೇಜರ್ ದೂರಿನ ಮೇರೆಗೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.
2022ರ ಮಾರ್ಚ್ 23ರಿಂದ ಡಿಸೆಂಬರ್ 23ರ ನಡುವೆ ನಡೆದ ವಂಚನೆಯಾಗಿದೆ. ವಿಚಾರಣೆ ವೇಳೆ ಗ್ರಾಹಕರ 5 ಕೋಟಿ ಹಣ ಮತ್ತೊಬ್ಬರಿಗೆ ನೀಡಿದ್ದಾಗಿ ಹೇಳಿದ್ದು, ಉಳಿದ ಹಣ ಎಲ್ಐಸಿ ಬಾಂಡ್ಗಳಲ್ಲಿ ಇನ್ವೆಸ್ಟ್ ಮಾಡಿದ್ದಾಗಿ ಹೇಳಿದ್ದಾಳೆ. ವಂಚನೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗನ್ನು ಬಂಧಿಸುವ ಸಾಧ್ಯತೆ ಇದೆ.
ಆರೋಪಿ ಸಜಿಲ ದೊಡ್ಡ ಪ್ರಮಾಣದ ಎಫ್.ಡಿ ಇಟ್ಟವರ ಹಣ ತೆಗೆದು ಎಲ್ಐಸಿ ಬಾಂಡ್ ಖರೀದಿಸುತ್ತಿದ್ದಳು. ಬಾಂಡ್ ಮೆಚ್ಯೂರ್ ಬಳಿಕ ಗ್ರಾಹಕರ ಹಣ ಅವರ ಖಾತೆಗೆ ಡೆಪಾಸಿಟ್ ಮಾಡುತ್ತಿದ್ದಳು. ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಕಳ್ಳಾಟ ಪತ್ತೆಯಾಗಿತ್ತು.
ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ: ಹೊಡೆದಾಡಿಕೊಂಡ ಮಂಗಳಮುಖಿಯರು
ಅವಧಿ ಮೀರಿ ನಡೆಸುತ್ತಿದ್ದ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಅವಧಿ ಮೀರಿ ನಡೆಸುತ್ತಿದ್ದ ನಗರದ ದೊಮ್ಮಲೂರು ಬಳಿಯ ಕ್ರೇಜಿ ಬಾಯ್ಸ್ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ತಡರಾತ್ರಿ ಸಿಸಿಬಿ 10 ಜನ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಹಿಳೆ ನಾಪತ್ತೆ ಕೇಸ್ ದಾಖಲು: ಆತ್ಮಹತ್ಯೆಗೆ ಶರಣಾದ ಯುವಕ
ಮೈಸೂರು: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಯುವಕ ರಾಘವೇಂದ್ರ ವಿರುದ್ಧ ದೂರು ಹಿನ್ನೆಲೆ ಅವಮಾನದಿಂದ ರಾಘವೇಂದ್ರ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅಗ್ರಹಾರದಲ್ಲಿ ನಡೆದಿದೆ. ರಾಘವೇಂದ್ರ ವಿರುದ್ಧ ಕಟ್ಟೆಮಳಲವಾಡಿ ಕೊಪ್ಪಲಿನ ಮಹಿಳೆ ಕರೆದೊಯ್ದಿದ್ದ ಎಂಬ ಆರೋಪವಿತ್ತು.
ಈ ಹಿನ್ನೆಲೆ ಮಹಿಳೆ ಸಂಬಂಧಿಕರು ರಾಘವೇಂದ್ರ ವಿರುದ್ಧ ಬಿಳಿಕೆರೆ ಠಾಣೆಗೆ ದೂರು ನೀಡಿದ್ದರು. ಮಹಿಳೆ ಕುಟುಂಬಸ್ಥರ ದೂರಿನ ಆಧಾರದಲ್ಲಿ ರಾಘವೇಂದ್ರನನ್ನು ವಿಚಾರಣೆ ನಡೆಸಲಾಗಿತ್ತು. ಬಿಳಿಕೆರೆ ಪೊಲೀಸರು ರಾಘವೇಂದ್ರ ಅಜ್ಜಿಯನ್ನೂ ವಿಚಾರಣೆ ನಡೆಸಿದ್ದರು. ಇದರಿಂದ ಅವಮಾನಗೊಂಡು ಬೇಸತ್ತು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತರಳ ಬಾಳು ಸಿರಿಗೆರೆ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಉಜ್ಜೈನಿ ಸುತ್ತಮುತ್ತಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ
ಕಾರಿಗೆ, ಖಾಸಗಿ ಬಸ್ ಡಿಕ್ಕಿ ಓರ್ವ ದುರ್ಮರಣ
ಚಿತ್ರದುರ್ಗ: ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿ ತೆರಳುತ್ತಿದ್ದ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರಹಳ್ಳಿ ಬಳಿ ನಡೆದಿದೆ. ಯಾದಗಿರಿ ಜಿಲ್ಲೆ ಶಹಾಪುರ ಮೂಲದ ಮಲ್ಲಿನಾಥ್(23) ಮೃತ ದುರ್ದೈವಿ. ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರದಿಂದ ಬೆಂಗಳೂರಿಗೆ ತೆರಳುವಾಗ ಘಟನೆ ಸಂಭವಿಸಿದೆ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ