ತುಮಕೂರು: ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಂಪ್‌ಗೆ ಬಿದ್ದಿದ್ದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಆಸ್ಪತ್ರೆಯ ವೈದ್ಯ ಡಾ.ರೋಹಿತ್ ಮತ್ತು ಆಂಬುಲೆನ್ಸ್ ಚಾಲಕನನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ (K Sudhakar) ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 2, ಶುಕ್ರವಾರದಂದು ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು,ಆಡಳಿತ ವೈದ್ಯಧಿಕಾರಿ ಹಾಗೂ ಆಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.@Comm_dhfwka
1/2 pic.twitter.com/h8GDD0T2WA
— Dr Sudhakar K (@mla_sudhakar) December 3, 2022
ಏನಿದು ಘಟನೆ
ಕೊಡಿಗೇನಹಳ್ಳಿ ಗ್ರಾಮದ ತಾಯಿ ಮಲ್ಲಿಕಾ, ಶೌಖತ್ ದಂಪತಿಗಳ ಪುತ್ರ ನಾಲ್ಕು ವರ್ಷ ಅಬ್ಬಾಸ್, ಆಕಸ್ಮಿಕವಾಗಿ ನೀರಿನ ಸಂಪ್ಗ ಬಿದ್ದು ಅಸ್ವಸ್ಥಗೊಂಡಿದ್ದ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ಕೊಡಿಗೇನಹಳ್ಳಿ ಗ್ರಾಮ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಆದ್ರೆ, ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಹಾಗೇ ಬೇರೆ ಆಸ್ಪತ್ರೆಗ ಹೋಗಲು ಆ್ಯಂಬುಲೆನ್ಸ್ ಇದ್ದರೂ ಚಾಲಕನಿರಲಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿದೆ.
ಪಂಚರತ್ನ ಯಾತ್ರೆ ವೇಳೆ ಮಗುವಿನ ಮೃತದೇಹ ಕಂಡು ಮರುಗಿದ ಕುಮಾರಣ್ಣ
ಜೆಡಿಎಸ್ ಪಂಚರತ್ನ ಯಾತ್ರೆ ಇಂದು (ಡಿಸೆಂಬರ್ 02) ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಸಾಗಿತು. ಯಾತ್ರೆ ಸಾಗುತ್ತಿದ್ದ ವೇಳೆ ಮತ್ತೊಂದು ಕಡೆಯಿಂದ ಪೋಷಕರು ಒಂದು ಮಗುವಿನ ಶವ ಹಿಡಿದುಕೊಂಡು ಹೋಗುವುದನ್ನು ಕಂಡು ಕುಮಾರಸ್ವಾಮಿ ಮರುಗಿದ್ದರು. ಅಲ್ಲದೇ ಮಗುವಿನ ಶವವನ್ನು ತಾವಿದ್ದ ವಾಹನದ ಮೇಲಕ್ಕೆ ಎತ್ತಿಕೊಂಡು ಭಾವುಕರಾಗಿರುವ ಪ್ರಸಂಗ ನಡೆಯಿತು. ಈ ಪ್ರಸಂಗ ಅಲ್ಲಿದ್ದ ಇತರೆ ಜೆಡಿಎಸ್ ಕಾರ್ಯಕರ್ತರ ಕಣ್ಣು ಒದ್ದೆ ಮಾಡಿತು.
ಇಮ್ರಾನ್ ಪಾಷ ಮೃತ ಮಗುವನ್ನು ಎತ್ತಿಕೊಂಡಿದ್ರೆ, ಪಕ್ಕದಲ್ಲೇ ಇದ್ದ ಕುಮಾರಸ್ವಾಮಿ ಪೋಷಕರ ಬಳಿ ಮಗು ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದಕ್ಕೆ ಮಗು ಮೃತಪಟ್ಟಿದೆ ಎಂದು ಪೋಷಕರ ಹೇಳುತ್ತಲ್ಲೇ ಕುಮಾರಸ್ವಾಮಿ ಕಣ್ಣು ಕೆಂಪಾಗಿಸಿದ್ದು, ಕೂಡಲೇ ತುಮಕೂರು ಡಿಹೆಚ್‌ಒಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಹೆಚ್‌ಕೆ ಭರವಸೆ ನೀಡಿದ್ದರು.
ಅಲ್ಲದೇ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ಗೂ ಫೋನ್ ಮಾಡಿ ಮಗು ಸಾವಿನ ಬಗ್ಗೆ ವಿವರಿಸಿದ್ದರು. ಕೂಡಲೇ ಕೊಡಿಗೇನಹಳ್ಳಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಸೂಚಿಸಿದರು. ಇನ್ನು ಕರ್ತವ್ಯಲೋಪವೆಸಗಿದ ಆಸ್ಪತ್ರೆ ಸಿಬ್ಬಂದಿ ಅಮಾನತು ಮಾಡುವಂತೆ ಹೇಳಿದ್ದರು.
ಮಗು ಸಾವಿನ ಪ್ರಕರಣದ ಬಗ್ಗೆ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಡಿಹೆಚ್ಒ ಸಾಯಂಕಾಲ ಮಾಧ್ಯಮ ಪ್ರಕಟಣೆ ಹೊರಡಿಸಿ ಮಗು ಆಸ್ಪತ್ರಗೆ ಬರುವ ಮುನ್ನವೇ ಸಾವನ್ನಪ್ಪಿತ್ತು ಎಂದು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 pm, Sat, 3 December 22