ಲಾರಿ ಡಿಕ್ಕಿಯಾಗಿ ಇಬ್ಬರು ಸಾವು: ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದವರು ಮಸಣ ಸೇರಿದರು!

| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2023 | 12:08 PM

Tumakuru Accident: ಕ್ರೂಸರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ತುಮಕೂರು ತಾಲೂಕಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕರಿಗೆ ಕಮಿಷನ್‌ ಹಣ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಲಾರಿ ಡಿಕ್ಕಿಯಾಗಿ ಇಬ್ಬರು ಸಾವು: ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದವರು ಮಸಣ ಸೇರಿದರು!
ಲಾರಿ ಅಪಘಾತ
Follow us on

ತುಮಕೂರು, ನವೆಂಬರ್​​​ 9: ಕ್ರೂಸರ್​ಗೆ ಲಾರಿ ಡಿಕ್ಕಿ (accident) ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ತುಮಕೂರು ತಾಲೂಕಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಗಂಗಾವತಿ ಮೂಲದ ಶಂಕರ್​(35), ಸತೀಶ್​(40) ಮೃತರು. ಅಪಘಾತದಲ್ಲಿ ಮತ್ತೋರ್ವನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕರಿಗೆ ಕಮಿಷನ್‌ ಹಣ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ಕೋರ ಸಮೀಪ ಕ್ರೂಸರ್‌ ಕಾರಿನ ಹಿಂಬದಿಯ ಟೈಯರ್‌ ಪಂಚ್ಚರ್‌ ಆಗಿತ್ತು. ಹೀಗಾಗಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಟೈಯರ್‌ ಬದಲಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಐಎಂಎ ಕಂಪನಿಯಿಂದ 4 ಸಾವಿರ ಕೋಟಿ ರೂ. ವಂಚನೆ: ಕೊನೆಗೂ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಬಂತು ಹಣ

ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಿಡಿಲು ಬಡಿದು ಮೂರು ಕುರಿಗಳು ಸಾವು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೂತನಪ್ಪಹಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಕುರಿಗಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗ್ರಾಮದ ರೈತ ಚಿತ್ತಯ್ಯರಿಗೆ ಸೇರಿದ ಕುರಿಗಳು. ಪರಿಹಾರಕ್ಕಾಗಿ ರೈತ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

 ಅಡಿಕೆ‌ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ

ಅಡಿಕೆ ತೋಟಗಳಲ್ಲಿ ಅಡಿಕೆ‌ ಕಳವು ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರವಿ, ಅಭಿಜಿತ್, ಅಭಿಷೇಕ್, ಮಂಜುನಾಥ್ ಬಿಕೆ, ಮನು ಬಂಧಿತ ಆರೋಪಿಗಳು. ಬಂಧಿತರೆಲ್ಲರು ಮಂಡ್ಯ ಜಿಲ್ಲೆಯವರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಫಸಲಿಗೆ ಬಂದಿದ್ದ ಅಡಿಕೆಗಳನ್ನು ಆರೋಪಿಗಳು ಕಳವು ಮಾಡುತ್ತಿದ್ದರು. ಸದ್ಯ ಬಂಧಿತರಿಂದ ಒಂದು ಟಾಟ ಏಸ್ ಹಾಗೂ 6 ಸಾವಿರ‌ ನಗದು ವಶಕ್ಕೆ ಪಡೆಯಲಾಗಿದೆ. ‌

ಇದನ್ನೂ ಓದಿ: ನಿರ್ಜನ ಪ್ರದೇಶದಲ್ಲಿ ಡ್ರಾಪ್​ ಕೊಡುವ ಮುಂಚೆ ಹುಷಾರ್: ಅರಣ್ಯದೊಳಗೆ ಎಳೆದೊಯ್ದು ಸಾವಿರಾರು ರೂ. ಸುಲಿಗೆ

ಯೋಗಿಶ್ ಎಂಬುವರು ನೀಡಿದ ದೂರಿನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಬೇಗೂರು ಗ್ರಾಮದಲ್ಲಿ ಸುಮಾರು 25 ಕ್ವಿಂಟಾಲ್​ನ ಸುಮಾರು ಒಂದೂವರೆ ಲಕ್ಷ ರೂ. ಅಡಿಕೆಯನ್ನು ಆರೋಪಿಗಳನ್ನು ಕದ್ದಿದ್ದರು. ಕುಣಿಗಲ್ ಹಾಗೂ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಲಾರಿ ಹಾಗೂ ಕೆಕೆಆರ್​ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ: ತಪ್ಪಿದ ಭಾರಿ ದುರಂತ

ಯಾದಗಿರಿ: ಲಾರಿ ಹಾಗೂ ಕೆಕೆಆರ್​ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದಿರುವಂತಹ ಘಟನೆ ಯಾದಗಿರಿ ತಾಲೂಕಿನ ಸೌದಗಾರ ಕ್ರಾಸ್ ಬಳಿ ನಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಯಾದಗಿರಿಯಿಂದ ಸೇಡಂ ಕಡೆ ಹೊರಟಿದ್ದ ಬಸ್​ಗೆ ಲಾರಿ ಗುದ್ದಿದೆ. ಬಸ್ ಡ್ರೈವರ್​ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ‌ ಗಾಯಗಳು ಆಗಿಲ್ಲ. ಯಾದಗಿರಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.