AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಎಂಎ ಕಂಪನಿಯಿಂದ 4 ಸಾವಿರ ಕೋಟಿ ರೂ. ವಂಚನೆ: ಕೊನೆಗೂ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಬಂತು ಹಣ

IMA case: ಐಎಂಎ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಕಾಂಪಿಟೆಂಟ್ ಅಥಾರಿಟಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಜುವೆಲ್ಲರಿಯಲ್ಲಿ ಡೈಮಂಡ್, ಗೋಲ್ಡ್, ಸಿಲ್ವರ್ ಜಪ್ತಿ ಮಾಡಿ ಇ-ಹರಾಜು ಮಾಡಲಾಗಿತ್ತು. ಸದ್ಯ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಹಂತ-ಹಂತವಾಗಿ ಹಣ ಜಮೆ ಮಾಡುತ್ತಿದೆ. ಹಣ ಕಳೆದುಕೊಂಡ ಗ್ರಾಹಕರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.

ಐಎಂಎ ಕಂಪನಿಯಿಂದ 4 ಸಾವಿರ ಕೋಟಿ ರೂ. ವಂಚನೆ: ಕೊನೆಗೂ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಬಂತು ಹಣ
ಐಎಂಎ ಕಂಪನಿ (ಸಂಗ್ರಹ ಚಿತ್ರ)
Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 09, 2023 | 7:57 AM

Share

ಬೆಂಗಳೂರು, ನವೆಂಬರ್​​​ 9: ಐಎಂಎ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಕಾಂಪಿಟೆಂಟ್ ಅಥಾರಿಟಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಮನ್ಸೂರ್ ಅಲಿಖಾನ್ (Mansoor Ali Khan) ಒಡೆತನದ ಐಎಂಎ ಜುವೆಲ್ಲರಿಯಲ್ಲಿ ಡೈಮಂಡ್, ಗೋಲ್ಡ್, ಸಿಲ್ವರ್ ಜಪ್ತಿ ಮಾಡಿ ಇ-ಹರಾಜು ಮಾಡಲಾಗಿತ್ತು. ಸರ್ಕಾರ ಜಪ್ತಿ ಮಾಡಿ ಇ-ಹರಾಜು ಮಾಡುವ ಮೂಲಕ ಒಟ್ಟು 68 ಕೋಟಿ ರೂ. ಹಣ ಹಂಚಿಕೆ ಮಾಡಿದೆ. ಹಿರಿಯ ಐಎಎಸ್ ಅಧಿಕಾರಿ ಅಮಲನ್ ಆದಿತ್ಯ ಬಿಸ್ವಾಸ್ ನೇತೃತ್ವದ ಕಾಂಪಿಟೆಂಟ್ ಅಥಾರಿಟಿ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಮಾತ್ರ ಹಂತ-ಹಂತವಾಗಿ ಹಣ ಜಮೆ ಮಾಡುತ್ತಿದೆ. ಹಣ ಕಳೆದುಕೊಂಡ ಗ್ರಾಹಕರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.

ಉಳಿದ ಹಣವನ್ನು ತ್ವರಿತವಾಗಿ ವಿತರಿಸಲು ಕ್ರಮಕ್ಕೆ ಮನವಿ

ಟಿವಿನೈನ್ ಜತೆಗೆ ಐಎಂಎ ಗ್ರಾಹಕ ಮಾತನಾಡಿದ್ದು, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಉಳಿದ ಹಣವನ್ನು ತ್ವರಿತವಾಗಿ ವಿತರಿಸಲು ಕ್ರಮಕ್ಕೆ ಮನವಿ ಮಾಡಿದ್ದಾರೆ. ಮನ್ಸೂರ್ ಅಲಿಖಾನ್ ಸಂಬಂಧಿಸಿದ ನೂರಾರು ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿಯಾಗಿದೆ. ಆದರೆ ಜಪ್ತಿ ಮಾಡಿದ ಆಸ್ತಿ ಹರಾಜು ಪ್ರಕ್ರಿಯೆ ವಿಳಂಬವಾಕಿದೆ ಎಂದಿದ್ದಾರೆ.

ಇದನ್ನೂ ಓದಿ: IMA ಬಹುಕೋಟಿ ಹಗರಣ: ಅಜಯ್ ಹಿಲೋರಿಗೆ ಹೈಕೋರ್ಟ್ ರಿಲೀಫ್, ಸಿಬಿಐ ಪ್ರಕರಣ ರದ್ದು

ಜಪ್ತಿಯಾದ ಆಸ್ತಿಯ ಕೇಸ್ ನ್ಯಾಯಾಲಯದಲ್ಲಿ ಬಾಕಿ ಇದೆ. ಗ್ರಾಹಕರು ಹಣ ಹೂಡಿಕೆ ಮಾಡಿ ತುಂಬಾ ಕಷ್ಟದಲ್ಲಿದ್ದು ತ್ವರಿತವಾಗಿ ಉಳಿದ ಬಹುಪಾಲು ಹಣ ಮರಳಿಸುವಂತೆ ಒತ್ತಾಯ ಮಾಡಿದ್ದಾರೆ. ಐಎಂಎ ಗ್ರಾಹಕರ ಅಕೌಂಟ್​ಗೆ ಸ್ವಲ್ಪ ಪ್ರಮಾಣದ ಹಣ ಜಮೆ ಆಗುತ್ತಿದೆ.

ಇದನ್ನೂ ಓದಿ: IMA ವಂಚನೆ ಪ್ರಕರಣ: ಕ್ಲೇಮ್​ ಅರ್ಜಿ ಸಲ್ಲಿಸಲು ಡೆಡ್​ ಲೈನ್​ ಫಿಕ್ಸ್..

ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಗೆ ವಂಚನೆ ಮಾಡಿರುವ ಬೆಂಗಳೂರು ಮೂಲದ ಐಎಂಎ ಕಂಪನಿಯಿಂದ ಮಹಾವಂಚನೆ ಇದೀಗ ಬೆಳಕಿಗೆ ಬಂದಿದೆ. ಹಣ ಹೂಡಿಕೆ ಮಾಡಿಸಿಕೊಂಡ ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಕಂಪನಿ 4000 ಕೋಟಿ ರೂ. ಮಹಾ ವಂಚನೆ ಮಾಡಿದೆ. ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಲಾಗಿದೆ.

ಸೆಬಿ-ಸಿ ಒನ್ ಇ ಪೋರ್ಟಲ್ ಮೂಲಕ ಇಡೀ ದಿನ ಅನ್ ಲೈನ್ ಬಿಡ್ಡಿಂಗ್ ಮೂಲಕ ಹರಾಜು ಮಾಡಲಾಗಿತ್ತು. ಐಎಂಎ ಗ್ರೂಪ್ ಮಳಿಗೆಗಳಿಂದ ವಶಕ್ಕೆ ಪಡೆದಿದ್ದ ಜುವೆಲ್ಲರಿ ಇ-ಹರಾಜಾದ ವಿವರ ಹೀಗಿದೆ.

  • ಡೈಮಂಡ್​ಗೆ ಕಾಂಪಿಟೆಂಟ್ ಅಥಾರಿಟಿ ನಿರ್ಧರಿಸಿದ್ದ ಮೌಲ್ಯ 47 ಕೋಟಿ 68 ಲಕ್ಷ ರೂ.
  • ಇ-ಹರಾಜಿನಲ್ಲಿ ಬಿಡ್ ಆದ ಡೈಮಂಡ್ಸ್ ಬರೋಬ್ಬರಿ 52 ಕೋಟಿ 73 ಲಕ್ಷ ರೂ.
  • ಗೋಲ್ಡ್ ಕಾಂಪಿಟೆಂಟ್ ಅಥಾರಿಟಿ ನಿರ್ಧರಿಸಿದ್ದ ಮೌಲ್ಯ 6 ಕೋಟಿ 35 ಲಕ್ಷ ರೂ.
  • ಇ-ಹರಾಜಿನಲ್ಲಿ ಬಿಡ್ ಆದ ಗೋಲ್ಡ್ 7 ಕೋಟಿ 23 ಲಕ್ಷ ರೂ.
  • ಪ್ಲಾಟಿನಮ್ ಕಾಂಪಿಟೆಂಟ್ ಅಥಾರಿಟಿ ನಿರ್ಧರಿಸಿದ್ದ ಮೌಲ್ಯ 1 ಕೋಟಿ 41 ಲಕ್ಷ ರೂ.
  • ಇ-ಹರಾಜಿನಲ್ಲಿ ಬಿಡ್ ಆದ ಪ್ಲಾಟಿನಮ್ ಬರೋಬ್ಬರಿ 1 ಕೋಟಿ 46 ಲಕ್ಷ ರೂ.
  • ಸಿಲ್ವರ್ ಕಾಂಪಿಟೆಂಟ್ ಅಥಾರಿಟಿ ನಿರ್ಧರಿಸಿದ್ದ ಮೌಲ್ಯ 6 ಕೋಟಿ 1 ಲಕ್ಷ ರೂ.
  • ಇ-ಹರಾಜಿನಲ್ಲಿ ಬಿಡ್ ಆದ ಸಿಲ್ವರ್ ಬರೋಬ್ಬರಿ 6 ಕೋಟಿ 19 ಲಕ್ಷ ರೂ.
  • ಒಟ್ಟಾರೆ 68 ಕೋಟಿಗೂ ಹೆಚ್ಚು ಹಣ ವಜ್ರ, ಚಿನ್ನಾಭರಣ, ಪ್ಲಾಟಿಮಮ್,‌ಬೆಳ್ಳಿ ಆಭರಣಗಳ ಹರಾಜಿನಲ್ಲಿ ಸಂಗ್ರಹಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:55 am, Thu, 9 November 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ