ತುಮಕೂರು ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮೇಲ್ನೋಟಕ್ಕೆ ಆಡಳಿತಾರೂಢ ಬಿಜೆಪಿಗೆ ಮುಖಭಂಗ!
Tumkur City Corporation: ಹೌದು... ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮತ್ತೇ ಭಾಯೀ ಭಾಯೀ ಆಗಿದ್ದಾರೆ. ಇಬ್ಬರೂ ಕೈ ಕೈ ಜೋಡಿಸಿ ಪಾಲಿಕೆಯ ಗದ್ದುಗೆ ಹಿಡಿದಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ (Tumkur City Corporation) ಹಳೆಯ ದೋಸ್ತಿಗಳಾದ ಕಾಂಗ್ರೆಸ್-ಜೆಡಿಎಸ್ (Congress, JDS) ಮತ್ತೇ ಒಂದಾಗಿದ್ದಾರೆ. ಎರಡೂ ಪಕ್ಷ ಮೈತ್ರಿಯಾಗಿ ಪಾಲಿಕೆಯ ಗದ್ದುಗೆ ಹಿಡಿದಿದೆ (Mayor, Deputy Mayor). ಈ ನಡುವೆ ಉಪಮೇಯರ್ ಸ್ಥಾನವಾದರೂ ಗಿಟ್ಟಿಸಿಕೊಳ್ಳುವ ಹಂಬಲದಲ್ಲಿದ್ದ ಬಿಜೆಪಿ (BJP) ತಿಗಳ ಸಮುದಾಯದ (Thigala community) ವಿರೋಧಕ್ಕೆ ಹೆದರಿ ನಾಮಪತ್ರ ವಾಪಸ್ ಪಡೆದಿದೆ. ಈ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಹೌದು… ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮತ್ತೇ ಭಾಯೀ ಭಾಯೀ ಆಗಿದ್ದಾರೆ. ಇಬ್ಬರೂ ಕೈ ಕೈ ಜೋಡಿಸಿ ಪಾಲಿಕೆಯ ಗದ್ದುಗೆ ಹಿಡಿದಿದ್ದಾರೆ. ಈ ಬಾರಿಯ ಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿತ್ತು. ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಎಸ್ಸಿ ಮಹಿಳಾ ಸದಸ್ಯರು ಇರಲಿಲ್ಲ. ಹಾಗಾಗಿ ಕಾಂಗ್ರೆಸ್ ನ ಪ್ರಭಾವತಿ ಸುದೀಶ್ವರ್ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಉಪಮೇಯರ್ ಬಿಸಿಎಂ 2ಎ ಗೆ ಮೀಸಲು ಇತ್ತು. ಹಾಗಾಗಿ ಜೆಡಿಎಸ್ ನ ನರಸಿಂಹಮೂರ್ತಿ ಹಾಗೂ ಬಿಜೆಪಿಯ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದ್ರು. ಕಾಂಗ್ರೆಸ್ ಜೆಡಿಎಸ್ ಸೇರಿ ಒಟ್ಟು 20 ಸದಸ್ಯರ ಬಲಾಬಲ ಇತ್ತು. ಗೆಲ್ಲಲು 18 ಮತ ಬೇಕಿತ್ತು. ಆದರೆ ಬಿಜೆಪಿಯದ್ದು ಕೇವಲ 12 ಮತ ಇತ್ತು. ಹಾಗಾಗಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ನಾಮಪತ್ರ ವಾಪಸ್ ಪಡೆದ್ರು. ಈ ಮೂಲಕ ಜೆಡಿಎಸ್ ಪಕ್ಷದ ನರಸಿಂಹಮೂರ್ತಿ ಉಪಮೇಯರ್ ಆಗಿ ಆಯ್ಕೆಯಾದರು!
ಉಪಮೇಯರ್ ಸ್ಥಾನದಿಂದ ಹಿಂದಕ್ಕೆ ಸರಿದ ಬಿಜೆಪಿಯಲ್ಲಿದೆ ರಾಜಕೀಯ ಲೆಕ್ಕಾಚಾರ:
ಉಪಮೇಯರ್ ಮೈತ್ರಿ ಅಭ್ಯರ್ಥಿ ನರಸಿಂಹಮೂರ್ತಿ ತಿಗಳ ಸಮುದಾಯದಕ್ಕೆ ಸೇರಿದವರು. ನರಸಿಂಹಮೂರ್ತಿಯನ್ನು ಸೋಲಿಸಿದರೆ ತಿಗಳ ಸಮುದಾಯದ ವಿರೋಧ ಪಕ್ಕಾ. ಚುನಾವಣಾ ವರ್ಷದಲ್ಲಿ ಪ್ರಬಲ ತಿಗಳ ಸಮುದಾಯದ ವಿರೋಧ ಕಟ್ಟಿಕೊಳ್ಳಲು ಹೆದರಿದ ಬಿಜೆಪಿ. ಹಾಗಾಗಿ ಸೋತು ಗೆಲ್ಲುವ ಪ್ಲಾನ್ ಮಾಡಿದ ಕಮಲ ಪಡೆ.
ಎಸ್… ಮೇಲ್ನೋಟಕ್ಕೆ ಇಲ್ಲಿ ಆಡಳಿತ ಬಿಜೆಪಿಗೆ ಮುಖಭಂಗ ಆದಂತೆ ಕಾಣುತ್ತದೆ. ನಗರದಲ್ಲಿ ಶಾಸಕ ಜ್ಯೋತಿ ಗಣೇಶ್ ಹಾಗೂ ಸಂಸ್ಥೆ ಬಸವರಾಜು ಬಿಜೆಪಿಗರೇ ಆದರೂ ಪಾಲಿಕೆ ಇವರ ಹಿಡಿತದಿಂದ ಕೈ ತಪ್ಪಿ ಮುಜುಗರ ಉಂಟಾಗಿದೆ ಎಂಬಂತೆ ಭಾಸವಾಗೋದು ನಿಜ. ಆದರೆ ಇದರ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಯ ರಾಜಕೀಯ ಲೆಕ್ಕಾಚಾರ ಇರೋದನ್ನು ತಳ್ಳಿಹಾಕುವಂತಿಲ್ಲ. ಕಾರಣ ಬಿಜೆಪಿ ಮನಸ್ಸು ಮಾಡಿದರೆ ಕನಿಷ್ಠ ಪಕ್ಷ ಉಪಮೇಯರ್ ಸ್ಥಾನವನ್ನಾದರೂ ಅಲಂಕರಿಸಬಹುದಿತ್ತು. 12 ಬಿಜೆಪಿ ಸದಸ್ಯರು, ಪಕ್ಷೇತರರು 3 ಹಾಗೂ ಶಾಸಕ ಮತ್ತು ಸಂಸದರ ತಲಾ ಒಂದೊಂದು ಮತ ಪಡೆದರೆ ಅಲ್ಲಿಗೆ 17 ಮತಗಳಿಕೆ ಆಗುತ್ತದೆ.
ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಅತೃಪ್ತರಾಗಿದ್ದ ಇಬ್ಬರು ಸದಸ್ಯರನ್ನು ಸೆಳೆದರೆ ಅಲ್ಲಿಗೆ 19 ಮತ ಪಡೆದು ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗಬಹುದಿತ್ತು. ಆದರೆ ಬಿಜೆಪಿ ಈ ಬಾರಿ ಸೋತು ಗೆಲ್ಲುವ ಪ್ಲಾನ್ ಮಾಡಿದೆ. ಜೆಡಿಎಸ್ ನಿಂದ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ನರಸಿಂಹಮೂರ್ತಿ ಪ್ರಬಲ ತಿಗಳ ಸಮುದಾಯದವರು. ನರಸಿಂಹಮೂರ್ತಿಯನ್ನು ಸೋಲಿಸಿದರೆ ತಿಗಳರ ವಿರೋದ ಕಟ್ಟಿಕೊಳ್ಳಬೇಕಾಗುತ್ತದೆ.
ತುಮಕೂರು ನಗರದಲ್ಲಿ ಬಹುತೇಕ ನಿರ್ಣಾಯಕ ಪಾತ್ರ ವಹಿಸುವ ಈ ಸಮುದಾಯವನ್ನು ಎದುರುಹಾಕಿಕೊಂಡರೆ ಮುಂದಿನ ಚುನಾವಣೆಯಲ್ಲಿ ಕಷ್ಟ ಆಗಬಹುದು ಎಂಬ ರಾಜಕೀಯ ಲೆಕ್ಕಾಚಾರ ಹಾಕಿ ಬಿಜೆಪಿ ಉಪಮೇಯರ್ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಚುನಾವಣಾ ವರ್ಷ ಇದಾಗಿರುವುದರಿಂದ ತಿಗಳ ಸಮುದಾಯದವರ ಓಲೈಕೆಗಾಗಿ ಪಾಲಿಕೆ ಗದ್ದುಗೆ ಬಿಟ್ಟುಕೊಟ್ಟಿದೆ ಬಿಜೆಪಿ ಎನ್ನಲಾಗಿದೆ.
ಇನ್ನೂ…ಮೇಯರ್-ಉಪಮೇಯರ್ ಅಯ್ಕೆಯಾದ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳನ್ನು ಬಿಜೆಪಿ ಶಾಸಕ ಜ್ಯೋತಿಗಣೇಶ್ ಹಾಗೂ ಸಂಸದ ಜಿ.ಜಿ.ಜ್ಯೋತಿಗಣೇಶ್ ಅಭಿನಂದಿಸಿದ್ದಾರೆ. ಒಳ್ಳೆ ಕೆಲಸ ಮಾಡುವಂತೆ ಹಾರೈಸಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಯಾವುದೂ ಅಡ್ಡಿಯಾಗದಂತೆ ದಾರಿ ಸುಗಮ ಮಾಡಿಕೊಂಡಿದ್ದಾರೆ. ಪಾಲಿಕೆಯಲ್ಲಿ ಸೋತು…ವಿಧಾನಸಭೆಯಲ್ಲಿ ಗೆಲ್ಲುವ ಬಿಜೆಪಿ ತಂತ್ರಗಾರಿಕೆ ಸಫಲವಾಗುತ್ತಾ ಅನ್ನೋದು ಮಾತ್ರ ಪ್ರಶ್ನೆಯಾಗಿದೆ. ವರದಿ -ಮಹೇಶ್, ಟಿವಿ 9, ತುಮಕೂರು