Devarayanadurga: ರೆಸಾರ್ಟ್ ನಿರ್ಮಿಸಲು ದೇವರಾಯನ ದುರ್ಗದ ಅರಣ್ಯ ಪ್ರದೇಶ ನಾಶ, ಜನಪ್ರತಿನಿಧಿಗಳು-ಅಧಿಕಾರಿಗಳು ಶಾಮೀಲಾಗಿದ್ದಾರಾ?

ಊರ್ಡಿಗೆರೆ ಹೋಬಳಿಯಲ್ಲಿ ಬರುವ ದುರ್ಗದಹಳ್ಳಿ ಗೋಮಾಳಲ್ಲಿರುವ 49 ಎಕರೆ ಪ್ರದೇಶವನ್ನು ಅಕ್ರಮವಾಗಿ ಜೆಸಿಬಿಯಿಂದ ಅಗೆಯಲಾಗಿದೆ. ರೆಸಾರ್ಟ್ ನಿರ್ಮಿಸಲು ನೂರಾರು ಗಿಡಗಳನ್ನು ಅನುಮತಿ ಪಡೆಯದೇ ಕಡಿದು ಹಾಕಿದ್ದಾರೆ.

Devarayanadurga: ರೆಸಾರ್ಟ್ ನಿರ್ಮಿಸಲು ದೇವರಾಯನ ದುರ್ಗದ ಅರಣ್ಯ ಪ್ರದೇಶ ನಾಶ, ಜನಪ್ರತಿನಿಧಿಗಳು-ಅಧಿಕಾರಿಗಳು ಶಾಮೀಲಾಗಿದ್ದಾರಾ?
ರೆಸಾರ್ಟ್ ನಿರ್ಮಿಸಲು ದೇವರಾಯನ ದುರ್ಗದ ಅರಣ್ಯ ಪ್ರದೇಶ ನಾಶ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on:Jul 20, 2023 | 2:30 PM

ಐತಿಹಾಸಿಕ ಪ್ರವಾಸಿ ತಾಣ, ಸಂರಕ್ಷಿತ ಅರಣ್ಯ ಪ್ರದೇಶ ತುಮಕೂರಿನ ದೇವರಾಯನದುರ್ಗ ಬೆಟ್ಟದಲ್ಲಿ ಪದೇ ಪದೇ ಜೆಸಿಬಿ ಘರ್ಜನೆ ಮಾಡುತ್ತಿದೆ. ರಿಯಲ್ ಎಸ್ಟೇಟ್ ಕುಳಗಳು ಒಂದರ ಹಿಂದೆ ಒಂದು ರೆಸಾರ್ಟ್ (Hill Resort) ನಿರ್ಮಾಣಕ್ಕೆ ಕೈ ಹಾಕುತಿದ್ದಾರೆ. ಪರಿಣಾಮ ಜೀವ ಸಂಕುಲಕ್ಕೆ ಸಂಚಕಾರ ತಂದೊಡ್ಡುತ್ತಿದೆ. ತುಮಕೂರು (Tumkur) ಜಿಲ್ಲೆಯ ದೇವರಾಯನ ದುರ್ಗದ (Devarayanadurga) ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ (Forest) ಕಾನೂನುಬಾಹಿರವಾಗಿ ಗುಡ್ಡ ಬಗೆದು ಜೀವ ವೈವಿಧ್ಯತೆ ನಾಶದ ಜತೆಗೆ ಸರ್ಕಾರಿ ಗೋಮಾಳವನ್ನು ಅತಿಕ್ರಮಿಸುವ ದೊಡ್ಡ ಹುನ್ನಾರ ನಡೆದಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರಾ ಎಂಬ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಊರ್ಡಿಗೆರೆ ಹೋಬಳಿಯಲ್ಲಿ ಬರುವ ದುರ್ಗದಹಳ್ಳಿಯ ಸರ್ವೇ ನಂ. 4ರ ಗೋಮಾಳಲ್ಲಿರುವ ಸುಮಾರು 49 ಎಕರೆ ಪ್ರದೇಶವನ್ನು ಅಕ್ರಮವಾಗಿ ಜೆಸಿಬಿಯಿಂದ ಅಗೆಯಲಾಗಿದೆ. ಹಣವಿರುವ ಕುಳಗಳು ಈಗಾಗಲೇ ರೆಸಾರ್ಟ್ ನಿರ್ಮಿಸಲು ನೂರಾರು ಗಿಡಗಳನ್ನು ಅನುಮತಿ ಪಡೆಯದೇ ಕಡಿದು ಹಾಕಿದ್ದಾರೆ. ಈ ಕುರಿತು ಊರಿನ ಯಾರಿಗೂ ಮಾಹಿತಿ ಇಲ್ಲ. ಸುಮಾರು 15 ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌ಗೆ ಅಧಿಕಾರಿಗಳು ಕೃಪಾಕಟಾಕ್ಷವಿದೆ ಎಂದು ಆರೋಪಿಸಲಾಗಿದೆ.

ಇನ್ನು ಸಾವಿರಾರು ಜಾತಿಯ ಸಸ್ಯಗಳನ್ನು ನಾಶ ಮಾಡಲಾಗಿದೆ. ದೇವರಾಯನದುರ್ಗದ ತಪ್ಪಲಿನಲ್ಲಿ ಬರುವ ದುರ್ಗದಹಳ್ಳಿಯು ಸಂರಕ್ಷಿತ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದೆ. ಈ ಗ್ರಾಮದ ಸುತ್ತಮುತ್ತಲಿನಲ್ಲಿ ವಾಸಿಸುವ ಕಾಡುಪಾಪ, ಚಿರತೆ, ಮೊಲ, ಉಡ, ಕಾಡುಬೆಕ್ಕು, ಹೆಬ್ಬಾವು, ಸುಮಾರು 30ಕ್ಕೂ ಹೆಚ್ಚು ಬಗೆಯ ಹಾವುಗಳು, 10ಕ್ಕಿಂತ ಹೆಚ್ಚು ವಿಧದ ಕಪ್ಪೆಗಳು, 163 ಬಗೆಯ ಪಕ್ಷಿಗಳು, 7 ಬಗೆಯ ಚೇಳುಗಳು, ಮುಳ್ಳು ಹಂದಿ, ಕಾಡು ಹಂದಿ, ಕರಡಿ ಸೇರಿ ನೂರಾರು ಜಾತಿಯ ಗಿಡ-ಮರಗಳು ಇಲ್ಲಿವೆ. ಜತೆಗೆ ನವಿಲುಗಳ ವಾಸಸ್ಥಾನವೂ ಇದ್ದು, ಜಿಂಕೆಗಳ ಆವಾಸ ಸ್ಥಾನವಾಗಿದೆ.

ಇದನ್ನೂ ಓದಿ:

ಕೈಬೀಸಿ ಕರೆಯುತ್ತಿದೆ ದೇವರಾಯನದುರ್ಗ; ಹಚ್ಚಹಸಿರಿನ ಪ್ರಕೃತಿ ಸೊಬಗನ್ನು ಸವಿಯಲು ಹರಿದು ಬರುತ್ತಿದೆ ಪ್ರವಾಸಿಗರ ದಂಡು

ರೆಸಾರ್ಟ್ ನಿರ್ಮಾಣದಿಂದ ಇವುಗಳಿಗೆ ಕಂಟಕ ಎದುರಾಗುತ್ತದೆ. ಈಗಾಗಲೇ ನವಿಲುಗಳ ಮೊಟ್ಟೆಗಳು ನಾಶವಾಗಿವೆ. ಅಷ್ಟಲ್ಲದೇ ಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಜೇಡ ಪ್ರಬೇಧವೂ ಈ ದೇವರಾಯನದುರ್ಗದ ಅರಣ್ಯದಲ್ಲಿವೆ. ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದೆ. ಸದ್ಯ ಜೆಸಿಬಿ ತಂದು ಗುಡ್ಡ ಅಗೆದ ರಾಮಚಂದ್ರ ಅನ್ನುವವರ ವಿರುದ್ದ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜಾರೋಷವಾಗಿ ಈ ಭಾಗದಲ್ಲಿ ಗುಡ್ಡವನ್ನು ಅಗೆಯುವುದರಿಂದ ಮುಂದೆ ಗುಡ್ಡ ಕುಸಿತವಾಗಬಹುದು. ಆಗ ಗ್ರಾಮಸ್ಥರಿಗೆ ಏನಾದರೂ ಆದರೆ ಯಾರು ಜವಾವ್ದಾರಿ, ಕುರಿಗಳನ್ನು ಮೇಯಿಸುತ್ತಿದ್ದ ಜಾಗದಲ್ಲೇ ರೆಸಾರ್ಟ್‌ ನಿರ್ಮಿಸುತ್ತಿದ್ದು, ಕುರಿಗಳಿಗೆ ಹುಲ್ಲು ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗೆ ತಕ್ಷಣ ಕಡಿವಾಣ ಹಾಕಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತುಮಕೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Thu, 20 July 23

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್