ಗಾಂಜಾ ಮಾರಾಟಗಾರ ಎಂದು ಭಿಕ್ಷುಕನ ಮೇಲೆ ಸ್ಥಳೀಯರ ಶಂಕೆ, ಪರಿಶೀಲನೆ ನಡೆಸಿದ ಕೊರಟಗೆರೆ ಪೊಲೀಸರಿಗೆ ಶಾಕ್!
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿರುವ ಸಿದ್ದರಬೆಟ್ಟ ಬಳಿಯ ಮರೇನಾಯನಕಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದರಿ ಭಿಕ್ಷುಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಿಕ್ಷೆ ಬೇಡಿಕೊಂಡಿದ್ದಾತ. ಆತನ ಚಲನವಲನ ಮೇಲೆ ಅನುಮಾನಗೊಂಡ ಸ್ಥಳೀಯರು, ಗಾಂಜಾ ಮಾರಾಟಗಾರ ಎಂದು ಶಂಕೆ ವ್ಯಕ್ತಪಡಿಸಿದ್ದರು.

ತುಮಕೂರು: ಗಾಂಜಾ ಮಾರಾಟಗಾರ (ganja seller) ಎಂದು ಭಿಕ್ಷುಕನ ಮೇಲೆ ಸ್ಥಳೀಯರು (Localites) ಶಂಕೆ ವ್ಯಕ್ತಪಡಿಸಿ, ಭಿಕ್ಷುಕನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಬಳಿಕ, ಭಿಕ್ಷುಕನ ಬಳಿಯಿದ್ದ ಗಂಟು ಮೂಟೆಯನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೇ ಒಂದು ಕ್ಷಣ ಶಾಕ್ ಆಗಿದೆ. ಏಕೆಂದರೆ ಭಿಕ್ಷುಕನ (beggar) ಬಳಿಯಿದ್ದ ಗಂಟುಮೂಟೆಯಲ್ಲಿತ್ತು ಬರೊಬ್ಬರಿ 50 ಸಾವಿರ ರೂಪಾಯಿ ನಗದು ಹಣ. 20 ಸಾವಿರ ಚಿಲ್ಲರೆ ಹಣ ಹಾಗೂ 10, 20, 50 ರೂಪಾಯಿಯ 30 ಸಾವಿರ ರೂಪಾಯಿ ನೋಟುಗಳು.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿರುವ ಸಿದ್ದರಬೆಟ್ಟ ಬಳಿಯ ಮರೇನಾಯನಕಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದರಿ ಭಿಕ್ಷುಕನು ಮರೇನಾಯಕನಹಳ್ಳಿ, ಸಿದ್ದರಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಭಿಕ್ಷೆ ಬೇಡಿಕೊಂಡಿದ್ದಾತ. ಆತನ ಚಲನವಲನ ಮೇಲೆ ಅನುಮಾನಗೊಂಡ ಸ್ಥಳೀಯರು, ಗಾಂಜಾ ಮಾರಾಟಗಾರ ಎಂದು ಶಂಕೆ ವ್ಯಕ್ತಪಡಿಸಿದ್ದರು.
ಪತ್ನಿ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟುಬಂದಿರುವ ವ್ಯಕ್ತಿ ಆತ
ಬಳಿಕ 112 ಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ತಕ್ಷಣವೇ ಭಿಕ್ಷುಕನನ್ನ ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ಬಳಿಯಿದ್ದ ಗಂಟು ಮೂಟೆಯಲ್ಲಿ ಬರೊಬ್ಬರಿ 50 ಸಾವಿರ ಹಣ ಪತ್ತೆಯಾಗಿದೆ. ಆದರೆ ಸ್ಥಳೀಯರ ಆರೋಪಿಸಿದ್ದಂತೆ ಭಿಕ್ಷುಕನ ಬಳಿ ಗಾಂಜಾ ಪತ್ತೆಯಾಗಿಲ್ಲ. ಇದರಿಂದ ಪೊಲೀಸರು ಭಿಕ್ಷುಕನನ್ನ ಮರಳಿ ಗೂಡಿಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ಸದರಿ ಭಿಕ್ಷುಕ ಗುರುಸಿದ್ದಪ್ಪ ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಎಂ. ಹೆಚ್. ಪಟ್ನಾ ಬಳಿಯ ಮಾದಾಪುರ ಗ್ರಾಮದ ನಿವಾಸಿಯಂತೆ. ಕಳೆದ 10 ವರ್ಷಗಳ ಹಿಂದೆ ತನ್ನ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಮನೆ ಬಿಟ್ಟುಬಂದಿದ್ದಾನೆ ಈ ಗುರುಸಿದ್ದಪ್ಪ. ಗುಬ್ಬಿ, ತುಮಕೂರು, ಕೊರಟಗೆರೆ ಭಾಗಗಳಲ್ಲಿ ಭಿಕ್ಷೆ ಬೇಡಿಕೊಂಡು ಓಡಾಡುತ್ತಿದ್ದಾನೆ. ನಿನ್ನೆ ರಾತ್ರಿ ಆತನ ಪತ್ನಿ ಹಾಗೂ ಪುತ್ರನನ್ನ ಠಾಣೆಗೆ ಕರೆಸಿ ಗುರುಸಿದ್ದಪ್ಪನನ್ನ ಮನೆಗೆ ಕಳುಹಿಸಿಕೊಟ್ಟು, ಕೊರಟಗೆರೆ ಪೊಲೀಸರು (Koratagere police) ಮಾನವೀಯತೆ ಮೆರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ