ತುಮಕೂರು: ವೈದ್ಯೋ ನಾರಾಯಣ ಹರಿಃ ಅಂತಾರೆ. ರೋಗಿಗಳ ಜೀವ ಕಾಪಾಡಬೇಕಾದ ವೈದ್ಯರೇ, ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡಲು ಶರು ಮಾಡಿದರೇ ದುರಂತವೇ ನಡೆದು ಹೋಗುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಔಷಧಿಗಳನ್ನು ರೋಗಿಗಳಿಗೆ ನೀಡಿರುವ ಸುದ್ದಿಗಳನ್ನು ಓದಿದ್ದೇವೆ, ಕೇಳಿದ್ದೇವೆ ಮತ್ತು ನೋಡಿದ್ದೇವೆ. ಅದೇ ರೀತಿಯಾಗಿ ಡಾ. ಅಶೋಕ್ ಅವರು ನಡೆಸುತ್ತಿರುವ ತುಮಕೂರಿನ (Tumakuru) ಪ್ರತಿಷ್ಠಿತ ಮಡಿಲು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮುಗಿದ ಔಷಧಿಯನ್ನು ನೀಡಲಾಗಿದೆ. ಮಡಿಲು ಖಾಸಗಿ ಮಕ್ಕಳ ಆಸ್ಪತ್ರೆಯಾಗಿದ್ದರೂ ಕೂಡ ಎಲ್ಲ ವರ್ಗದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪಾವಗಡ ಮೂಲದ ರಂಗಪ್ಪ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ವೈದ್ಯರೊಬ್ಬರ ಸಲಹೆ ಮೇರೆಗೆ ಮಡಿಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಕಿಡ್ನಿ ಸ್ಪೇಷಲಿಸ್ಟ್ ವೈದ್ಯ ಡಾ.ರಂಗೇಗೌಡರ ಬಳಿ ಚಿಕಿತ್ಸೆ ಪಡೆದರು. ರಂಗಪ್ಪನಿಗೆ ಕಳೆದ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಡಾ.ರಂಗೇಗೌಡ ಕಿಡ್ನಿ ಸ್ಟೋನ್ ಆಪರೇಷನ್ ಮಾಡಿದ್ದಾರೆ.
ನಂತರ ಎರಡು ದಿನಗಳ ಕಾಲ ಮಡಿಲು ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಹೀಗಾಗಿ ವೈದ್ಯರು 2 ದಿನಕ್ಕಾಗುವ ಔಷಧಿಗಳನ್ನು ನೀಡಿದ್ದಾರೆ. ಹಾಗೇ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ರಂಗಪ್ಪ ಅವರಿಗೆ ಗ್ಲೂಕೋಸ್ ನೀಡಲಾಗಿತ್ತು. ಆಪರೇಷನ್ ಆದ ರಾತ್ರಿಯಿಂದಲೂ ಆಸ್ಪತ್ರೆ ಸಿಬ್ಬಂದಿ ರಂಗಪ್ಪ ಅವರಿಗೆ ನೀಡಿದ ಗ್ಲೂಕೋಸ್ನ ಅವಧಿ ಮುಗದಿತ್ತು.
ವೈದ್ಯರು ಹಾಗೂ ನರ್ಸ್ ಅವಧಿ ಮುಗಿದು 11 ತಿಂಗಳಾದ ಗ್ಲೂಕೋಸ್ ನೀಡಿದ್ದಾರೆ. ಇದನ್ನು ಗಮನಿಸಿದ ಮನಿಸಿದ ರಂಗಪ್ಪರ ಮಗ, ಕೂಡಲೇ ಮಾಧ್ಯಮದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಅವಧಿ ಮುಗಿದ ಗ್ಲೂಕೋಸ್ ಹಾಕಿರುವುದು ಬೆಳಕಿಗೆ ಬಂದಿದೆ.
ಅವಧಿ ಮುಗಿದ ಔಷಧಿ ಕೊಡಬಹುದು ಏನು ಆಗಲ್ಲ. ಏನೋ ಕಣ್ತಪ್ಪಿನಿಂದ ಆಗಿದೆ ಇಲ್ಲಿಗೆ ಬಿಟ್ಟು ಬಿಡಿ. ಅವಧಿ ಮುಗಿದ ಔಷಧಿ ನೀಡಿದರೂ ರೋಗಿಗೆ ಏನು ಆಗಿಲ್ಲ. ಇದುವರೆಗೆ ನಮ್ಮಲ್ಲಿ ಯಾವುದೇ ಅನಾಹುತವಾಗಿಲ್ಲ. ಅವಧಿ ಮುಗಿದ ಮೆಡಿಸನ್ ರೋಗಿಗೆ ಚಿಕಿತ್ಸೆ ಕೊಟ್ಟರೇ ನಿಮಗೇನು ಸಮಸ್ಯೆ ಎಂದು ಆಸ್ಪತ್ರೆಯ ವೈದ್ಯರು ಉದ್ದಟತನದ ಉತ್ತರ ನೀಡಿದ್ದಾರೆ.
ನಾನು 30 ವರ್ಷದಿಂದ IMA ಅಸೋಸಿಯೇಷನ್ಗೆ ಜಿಲ್ಲಾ ಅಧ್ಯಕ್ಷ ಆಗಿದ್ದೀನಿ. ರೋಗಿಗೆ ಅವಧಿ ಮುಗಿದ ಔಷಧಿ ಕೊಡಬಹುದು. ಆಹಾರಕ್ಕೆ ಅವಧಿ ಮುಗಿದೋದರೆ ನೀವು ತಿನ್ನಲ್ವಾ? ಎಂದು ಡಾ ಶಶಿಧರ್ ಉಡಾಫೆಯಾಗಿ ಮಾತನಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ