ತಿಂಗಳಿಗೆ 20,401 ರೂಪಾಯಿ ವಿದ್ಯುತ್​ ಬಿಲ್​; ತುಮಕೂರಿನ ವ್ಯಕ್ತಿಗೆ ಬಿಲ್​ ಮೂಲಕವೇ ಶಾಕ್​ ಕೊಟ್ಟ ಬೆಸ್ಕಾಂ

| Updated By: Skanda

Updated on: Aug 13, 2021 | 1:01 PM

ಪ್ರತಿ ತಿಂಗಳು 200-300 ರೂಪಾಯಿ ಮೊತ್ತದ ಆಸುಪಾಸಿನಲ್ಲಿ ಬರುತ್ತಿದ್ದ ಬಿಲ್ ಏಕಾಏಕಿ 20 ಸಾವಿರ ರೂಪಾಯಿಗೆ ಹೋಗಿದ್ದನ್ನು ನೋಡಿ ಮಂಚೇಗೌಡ ಗಾಬರಿಯಾಗಿದ್ದಾರೆ.

ತಿಂಗಳಿಗೆ 20,401 ರೂಪಾಯಿ ವಿದ್ಯುತ್​ ಬಿಲ್​; ತುಮಕೂರಿನ ವ್ಯಕ್ತಿಗೆ ಬಿಲ್​ ಮೂಲಕವೇ ಶಾಕ್​ ಕೊಟ್ಟ ಬೆಸ್ಕಾಂ
ಬೆಸ್ಕಾಂ ಕಳುಹಿಸಿದ ಬೃಹತ್​ ಮೊತ್ತದ ಬಿಲ್​
Follow us on

ತುಮಕೂರು: ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲವೂ ಗಗನಮುಖಿಯಾಗುತ್ತಿರುವುದು ಸಾಮಾನ್ಯ ಜನರಿಗೆ ದೊಡ್ಡ ತಲೆನೋವಾಗಿದೆ. ಇಂತಹ ಹೊತ್ತಿನಲ್ಲಿ ತುಮಕೂರಿನಲ್ಲಿ ಒಬ್ಬರಿಗೆ ಬೆಸ್ಕಾಂ (BESCOM) ಶಾಕ್​ ನೀಡಿದ್ದು, ಮಾಸಿಕ ವಿದ್ಯುತ್​ ಬಿಲ್​ನಲ್ಲಿ 20 ಸಾವಿರ ರೂಪಾಯಿ ಕಟ್ಟುವಂತೆ ತಿಳಿಸಿದೆ. ತುರುವೇಕೆರೆ ತಾಲೂಕಿನ ಸುಬ್ರಮಣ್ಯ ನಗರದಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಮೀಟರ್ ರೀಡಿಂಗ್​ನಿಂದ ಆದ ಯಡವಟ್ಟು ಮನೆ ಮಾಲೀಕರ ನಿದ್ದೆ ಕೆಡಿಸಿದೆ. ಹಲವು ಮನೆಗಳಿಗೆ ಇದೇ ರೀತಿ ಯದ್ವಾತದ್ವಾ ಬಿಲ್ ನೀಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದ್ದು, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರುವೇಕೆರೆ ತಾಲೂಕಿನ ಸುಬ್ರಮಣ್ಯ ನಗರದ ಮಂಚೇಗೌಡ ಎನ್ನುವ ಗ್ರಾಹಕರೊಬ್ಬರಿಗೆ ನೀಡಿದ ಬಿಲ್ ನಲ್ಲಿ ಯಡವಟ್ಟು ಆಗಿದ್ದು, ತಿಂಗಳಿಗೆ 2480 ಯುನಿಟ್ ಬಳಕೆ ಅಂತ ತೋರಿಸಿರುವ ಬೆಸ್ಕಾಂ 20,401 ರೂಪಾಯಿ ಮೊತ್ತದ ಬಿಲ್ ನೀಡಿದೆ. ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದು, ಯಾವ ರೀತಿಯಲ್ಲಿ ಇಷ್ಟೊಂದು ವಿದ್ಯುತ್ ಬಳಕೆಯಾಗಲು ಸಾಧ್ಯ ಎಂದು ತಲೆಕೆಡಿಸಿಕೊಂಡಿದ್ದಾರೆ.

ಪ್ರತಿ ತಿಂಗಳು 200-300 ರೂಪಾಯಿ ಮೊತ್ತದ ಆಸುಪಾಸಿನಲ್ಲಿ ಬರುತ್ತಿದ್ದ ಬಿಲ್ ಏಕಾಏಕಿ 20 ಸಾವಿರ ರೂಪಾಯಿಗೆ ಹೋಗಿದ್ದನ್ನು ನೋಡಿ ಮಂಚೇಗೌಡ ಗಾಬರಿಯಾಗಿದ್ದಾರೆ. ಕೊನೆಗೆ ಕೂಲಂಕಷವಾಗಿ ಪರಿಶೀಲಿಸದಾಗ ಇದು ಬೆಸ್ಕಾಂನಿಂದ ಆಗಿರುವ ಯಡವಟ್ಟು. ಮೀಟರ್​ ರೀಡಿಂಗ್​ ವೇಳೆ ಆದ ತಪ್ಪಿನಿಂದ ಹೀಗಾಗಿದೆ ಎನ್ನುವುದು ಬೆಳಕಿಗೆ ಬಂದಿದೆ.

ಗ್ರಾಮದಲ್ಲಿ ಇನ್ನೂ ಕೆಲವರಿಗೆ ಇದೇ ರೀತಿಯ ಶಾಕಿಂಗ್ ಅನುಭವ ಆಗಿದ್ದು, ವಿದ್ಯುತ್​ ಬಳಕೆಗೂ ಬಿಲ್​ನಲ್ಲಿ ನಮೂದಾದ ಮೊತ್ತಕ್ಕೂ ಅಜಗಜಾಂತರ ಕಂಡುಬಂದಿದೆ. ಇದನ್ನು ನೋಡಿದ ಜನರು ಬೆಸ್ಕಾಂ ತಪ್ಪನ್ನು ತಕ್ಷಣವೇ ತಿದ್ದಿಕೊಳ್ಳಬೇಕು. ಗ್ರಾಹಕರನ್ನು ಅನಾವಶ್ಯಕ ಗೊಂದಲಕ್ಕೆ ನೂಕಬಾರದು ಎಂದು ಆಗ್ರಹಿಸಿದ್ದಾರೆ.

(Tumkur man gets electricity bill of Rs 20000 per month shocked due to BESCOM Mistake)

ಇದನ್ನೂ ಓದಿ:
Power Supply: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಸಮಾನತೆ ಹೋಗಲಾಡಿಸಲು ಸಿಎಂ ಬೊಮ್ಮಾಯಿ ಖಡಕ್ ಸೂಚನೆ 

ವಿದ್ಯುತ್ ತಿದ್ದುಪಡಿ ಮಸೂದೆಗೆ ರಾಜ್ಯಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಏಕೆ? ವಿದ್ಯುತ್ ವಿತರಣಾ ಕಂಪನಿಗಳ ಭವಿಷ್ಯಕ್ಕೇನು ಅಪಾಯ?