AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪಡೆದ ಸರ್ಕಾರಿ ವೈದ್ಯೆ, ನರ್ಸ್​ಗೆ ಜೈಲು ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ; ಹಸು ಮಾರಿ ಹಣ ನೀಡಿದ ಮಹಿಳೆಗೆ ನ್ಯಾಯ

ಬಾಕಿ 4 ಸಾವಿರ ರೂಪಾಯಿ ನೀಡದೇ ಜಯಮ್ಮರನ್ನು ಡಿಸ್ಚಾರ್ಜ್​ ಮಾಡುವುದಿಲ್ಲವೆಂದು ಸತಾಯಿಸಿದ್ದ ಡಾ.ಕೆ.ಮಮತಾ ಹಾಗೂ ನರ್ಸ್​ ಗಂಗಮ್ಮ ಕಾಟ ತಾಳಲಾರದೇ ಮನೆಯವರು ಹಸು ಮಾರಿ ಹಣ ನೀಡಿದ್ದರು. ಆದರೆ, ಉಳಿದ 4 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆಗೆ ಅವರಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.

ಲಂಚ ಪಡೆದ ಸರ್ಕಾರಿ ವೈದ್ಯೆ, ನರ್ಸ್​ಗೆ ಜೈಲು ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ; ಹಸು ಮಾರಿ ಹಣ ನೀಡಿದ ಮಹಿಳೆಗೆ ನ್ಯಾಯ
ಪ್ರಾತಿನಿಧಿಕ ಚಿತ್ರ
TV9 Web
| Updated By: Skanda|

Updated on: Aug 14, 2021 | 7:50 AM

Share

ತುಮಕೂರು: ಗರ್ಭಕೋಶ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ ಮಹಿಳೆಯಿಂದ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, 6 ಸಾವಿರ ರೂಪಾಯಿ ಪಡೆದು ಶಸ್ತ್ರಚಿಕಿತ್ಸೆ ಮಾಡಿ ನಂತರ 4 ಸಾವಿರ ರೂಪಾಯಿ ನೀಡದಿದ್ದಕ್ಕೆ ಡಿಸ್ಚಾರ್ಚ್​ ಮಾಡದೇ ಸತಾಯಿಸಿ ಉಳಿದ ಹಣವನ್ನೂ ತರಿಸಿಕೊಂಡಿದ್ದ ಸರ್ಕಾರಿ ವೈದ್ಯೆ ಹಾಗೂ ನರ್ಸ್​ ಇಬ್ಬರಿಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತುಮಕೂರಿನ 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಜಯಮ್ಮ ಎಂಬುವರಿಗೆ ಗರ್ಭಕೋಶ ಆಪರೇಷನ್‌ ಮಾಡಲು ವೈದ್ಯೆ ಕೆ.ಮಮತಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ನರ್ಸ್ ಗಂಗಮ್ಮ ಲಂಚ ನೀಡುವಂತೆ ಒತ್ತಡ ಹಾಕಿದ್ದರು. ಕೊನೆಗೆ ಅವರಿಬ್ಬರ ಲಂಚಬಾಕತನಕ್ಕೆ ಮಣಿದು ಜಯಮ್ಮ ಮನೆಯವರು ಹಸು ಮಾರಿ ಹಣ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ 2014ರ ಸೆಪ್ಟೆಂಬರ್ 8ರಂದು ಪ್ರಕರಣ ದಾಖಲಾಗಿತ್ತು. ಸತತ 7 ವರ್ಷಗಳ ವಿಚಾರಣೆ ಬಳಿಕ ಕೋರ್ಟ್‌ನಿಂದ ತೀರ್ಪು ಲಭಿಸಿದ್ದು, ವೈದ್ಯೆ ಕೆ.ಮಮತಾಗೆ 7 ವರ್ಷ ಜೈಲು, ₹20 ಸಾವಿರ ದಂಡ ಹಾಗೂ ನರ್ಸ್ ಗಂಗಮ್ಮಗೆ 3 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಿ ಆದೇಶ ನೀಡಲಾಗಿದೆ.

ಗರ್ಭಕೋಶ ಶಸ್ತ್ರಚಿಕಿತ್ಸೆಗೆಂದು ಜಯಮ್ಮ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ ವೇಳೆ ಡಾ.ಕೆ.ಮಮತಾ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ನರ್ಸ್​ ಗಂಗಮ್ಮ ಕೂಡಾ ಸಾಥ್ ನೀಡಿ ಒತ್ತಡ ಹಾಕಿದ್ದರು. ಬಳಿಕ ಚಿಕಿತ್ಸೆಗೆ ಬಂದಿದ್ದ ಜಯಮ್ಮ 6 ಸಾವಿರ ರೂಪಾಯಿ ನೀಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ, ಉಳಿದ 4 ಸಾವಿರ ರೂಪಾಯಿ ನೀಡದ ಹಿನ್ನೆಲೆ ಡಿಸ್ಚಾರ್ಜ್ ಮಾಡಿರಲಿಲ್ಲ. ಎಷ್ಟೇ ಕೇಳಿಕೊಂಡರೂ ಡಿಸ್ಚಾರ್ಜ್ ಮಾಡದೆ ಆಸ್ಪತ್ರೆಯಲ್ಲೇ ಇರಿಸಿದ್ದರು.

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಾಕಿ 4 ಸಾವಿರ ರೂಪಾಯಿ ನೀಡದೇ ಜಯಮ್ಮರನ್ನು ಡಿಸ್ಚಾರ್ಜ್​ ಮಾಡುವುದಿಲ್ಲವೆಂದು ಸತಾಯಿಸಿದ್ದ ಡಾ.ಕೆ.ಮಮತಾ ಹಾಗೂ ನರ್ಸ್​ ಗಂಗಮ್ಮ ಇಬ್ಬರ ಕಾಟ ತಾಳಲಾರದೇ ಜಯಮ್ಮನ ಮನೆಯವರು ಹಸು ಮಾರಿ ಹಣ ನೀಡಿದ್ದರು. ಆದರೆ, ಉಳಿದ 4 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆಗೆ ಅವರಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. 2014ರ ಸೆಪ್ಟೆಂಬರ್ 8ರಂದು ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇದೀಗ ಸತತ 7 ವರ್ಷಗಳ ವಿಚಾರಣೆ ಬಳಿಕ ತುಮಕೂರಿನ 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಸದ್ಯ ರಾಮನಗರದಲ್ಲಿ ಕರ್ತವ್ಯದಲ್ಲಿದ್ದ ಡಾ. ಕೆ.ಮಮತಾಗೆ 7 ವರ್ಷ ಜೈಲು, ₹20 ಸಾವಿರ ದಂಡ ವಿಧಿಸಲಾಗಿದೆ ಹಾಗೂ ನರ್ಸ್ ಗಂಗಮ್ಮಗೆ 3 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಲಾಗಿದೆ. 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರ ನಾಥ್ ರಿಂದ ತೀರ್ಪು ಪ್ರಕಟವಾಗಿದೆ.

ಇದನ್ನೂ ಓದಿ: ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​ 

Mysuru: 85 ಜನರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು 77 ಸಾವಿರ ರೂಪಾಯಿ ಲಂಚ; ಆರ್​ಟಿಒ ಅಧಿಕಾರಿ ಎಸಿಬಿ ಬಲೆಗೆ

(Government Hospital Doctor and Nurse Jailed for taking bribe Tumkur Special Court gives decision)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ