Mysuru: 85 ಜನರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು 77 ಸಾವಿರ ರೂಪಾಯಿ ಲಂಚ; ಆರ್ಟಿಒ ಅಧಿಕಾರಿ ಎಸಿಬಿ ಬಲೆಗೆ
Mysuru: ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುವಾಗ ಆರ್ಟಿಒ ಅಧಿಕಾರಿ ಪ್ರಭಾಕರ್ ಸಿಕ್ಕಿಬಿದ್ದಿದ್ದಾರೆ. ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗ ಈ ಕರ್ಮಕಾಂಡವನ್ನು ಬಯಲಿಗೆಳೆಯಲಾಗಿದೆ.
ಮೈಸೂರು: ಭ್ರಷ್ಟಾಚಾರ ಎಂಬುದು ಕೆಲವೊಮ್ಮೆ ಬಹಳ ಅನಾಹುತಕ್ಕೆ ಕಾರಣವಾಗಬಹುದು. ಅದರಿಂದಾಗಿ ಹಲವು ಅವಘಡಗಳು ಸಂಭವಿಸಬಹುದು. ಸರಿಯಾಗಿ ವಾಹನ ಚಲಾಯಿಸಲು ಬಾರದವರಿಗೆ ಪರವಾನಗಿ (Driving License) ಸಿಕ್ಕರೆ ಎಷ್ಟು ಅಪಾಯಕಾರಿ ಎಂದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಆದರೆ, ಈ ಬಗ್ಗೆ ಬೇಜವಾಬ್ದಾರಿಯ ಕೃತ್ಯ ಒಂದನ್ನು ಮೈಸೂರಿನಲ್ಲಿ (Mysuru) ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಾಹನ ಪರವಾನಗಿ ನೀಡಲು ಆರ್ಟಿಒ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದಾಗ ಚಾಮರಾಜಪುರಂ ಆರ್ಟಿಒ ಇನ್ಸ್‌ಪೆಕ್ಟರ್ ಪ್ರಭಾಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಆರ್ಟಿಒ ಅಧಿಕಾರಿ ಪ್ರಭಾಕರ್ ಎಂಬವರು ಡ್ರೈವಿಂಗ್ ಲೈಸೆನ್ಸ್ ನೀಡಲು ಲಂಚ ಸ್ವೀಕಾರ ಮಾಡುತ್ತಿದ್ದರು. ಅದೂ ಕೂಡ ಒಂದಿಬ್ಬರಿಗಲ್ಲ. 85 ಜನರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು 77,000 ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದರು. ಡ್ರೈವಿಂಗ್ ಸ್ಕೂಲ್‌ನ ಮಹೇಶ್ ಎಂಬವರಿಂದ ಲಂಚ ಪಡೆಯುವಾಗ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುವಾಗ ಆರ್ಟಿಒ ಅಧಿಕಾರಿ ಪ್ರಭಾಕರ್ ಸಿಕ್ಕಿಬಿದ್ದಿದ್ದಾರೆ. ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗ ಈ ಕರ್ಮಕಾಂಡವನ್ನು ಬಯಲಿಗೆಳೆಯಲಾಗಿದೆ.
ನಂಜನಗೂಡಿನಲ್ಲಿ ಮತ್ತೊಂದು ಲಂಚಾವತಾರ ಕಂಡುಬಂದಿತ್ತು ಲಂಚ ಪಡೆದಿದ್ದೇನೆ ಏನೀಗಾ ? ಯಾರು ಕೊಟ್ಟಿದ್ದಾರೆ ಕರೆದುಕೊಂಡು ಬಾ ಎಂದು ಸಾರ್ವಜನಿಕವಾಗಿ ಜನರ ಜೊತೆ ಒಬ್ಬ ಪಿಡಿಓ ಮಾತಿನ ಚಕಮಕಿ ನಡೆಸಿದ್ದ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಪಿಡಿಓ ಪುರುಷೋತ್ತಮ ವಿರುದ್ದ ಲಂಚ ಪಡೆದ ಆರೋಪ ಕೇಳಿಬಂದಿತ್ತು.
ನಂಜನಗೂಡು ತಾಲ್ಲೂಕು ಕವಲಂದೆ ಗ್ರಾಮ ಪಂಚಾಯತ್ ಪಿಡಿಓ ಪುರುಷೋತ್ತಮ ಖಾತೆ ಬದಲಾವಣೆಗೆ ಮೂರೂವರೆ ಸಾವಿರ ರೂಪಾಯಿ ಲಂಚ ಕೇಳಿರುವ ಆರೋಪ ಕೇಳಿಬಂದಿತ್ತು. ಲಂಚ ಪಡೆದರೂ ಸಹ ಕೆಲಸ ಮಾಡಿಕೊಟ್ಟಿಲ್ಲ ಅಂತಾ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ: ವಿಡಿಯೋ ವೈರಲ್
ಬೀದರ್: 15 ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್!
(RTO Officer caught while collecting Bribe for giving Driving License to 85 people)
Published On - 3:42 pm, Sat, 31 July 21