ತುಮಕೂರು: ಮೌಢ್ಯಾಚರಣೆಗೆ ಒಂದು ಜೀವ ಬಲಿಯಾಗಿದ್ದರೂ ನಿಲ್ಲದ ಗೊಲ್ಲ ಸಮಾಜದ ಮೈಲಿಗೆ ಸಂಪ್ರದಾಯ

| Updated By: ಆಯೇಷಾ ಬಾನು

Updated on: Aug 24, 2023 | 10:02 AM

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿ ಬಳಿ ಕೆಲವು ದಿನಗಳಿಂದ ಮಗು ಹಾಗೂ ಬಾಣಂತಿಯನ್ನ ಊರಾಚೆ ಇಟ್ಟು ಮತ್ತೆ ಅದೇ ಸಂಪ್ರದಾಯ ಮುಂದುವರಿಸಿದ್ದಾರೆ. ಪ್ರಾಣಿಗಳಿಗೂ ಯೋಗ್ಯವಲ್ಲದ, ಊರಿನಿಂದ ಆಚೆ ಒಂದು ಚಿಕ್ಕ ಗುಡಿಸಿಲಿನಲ್ಲಿ ಮಗು ಬಾಣಂತಿಯನ್ನ ಇಡಲಾಗಿತ್ತು. ಈ ವಿಚಾರ ತಿಳಿದ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪನವರು ಗ್ರಾಮಕ್ಕೆ ಭೇಟಿ ನೀಡಿ ಮಗು ಹಾಗೂ ಬಾಣಂತಿ ರಕ್ಷಿಸಿ ಮಗುವನ್ನ ತಾವೇ ಕೈಗೆತ್ತಿಕೊಂಡು ಮನೆಗೆ ಬಿಟ್ಟಿದ್ದಾರೆ.

ತುಮಕೂರು: ಮೌಢ್ಯಾಚರಣೆಗೆ ಒಂದು ಜೀವ ಬಲಿಯಾಗಿದ್ದರೂ ನಿಲ್ಲದ ಗೊಲ್ಲ ಸಮಾಜದ ಮೈಲಿಗೆ ಸಂಪ್ರದಾಯ
ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪನವರು ಗ್ರಾಮಕ್ಕೆ ಭೇಟಿ ನೀಡಿ ಮಗು ಹಾಗೂ ಬಾಣಂತಿ ರಕ್ಷಿಸಿ ಮನೆಗೆ ಬಿಟ್ಟರು
Follow us on

ತುಮಕೂರು, ಆ.24: ಅದೆಕೋ ತುಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯ ನಿಲ್ಲುವಂತೆ ಕಾಣಿಸುತ್ತಿಲ್ಲ(Superstition) . ಊರಾಚೆ ಇರಿಸಿ ನವಜಾತ ಶಿಶು ಸಾವನ್ನಪ್ಪಿದರೂ ಕೂಡ ಈ ಸಮುದಾಯ‌ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಳೆದ ಜುಲೈ ತಿಂಗಳಿನಲ್ಲಿ ತುಮಕೂರು(Tumkur) ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಬಳಿ ಬಾಣಂತಿಯನ್ನ ಊರಾಚೆ ಇಟ್ಟು ಮಗು ಸಾವನ್ನಪ್ಪಿತ್ತು. ಅದನ್ನ ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ಹಾಗೂ ಜಿಲ್ಲಾ ನ್ಯಾಯಾಲಯ ಪ್ರಕರಣ ಕೂಡ ದಾಖಲಿಸಿ ವಾರ್ನಿಂಗ್ ನೀಡಿತ್ತು. ಇಷ್ಟಾದರೂ ಕೂಡ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಕಾಲ ಬದಲಾಗುತ್ತಿದ್ದರೂ ಕೂಡ ಆ ಸಮುದಾಯದ ಮೌಡ್ಯಾಚರಣೆ ಮಾತ್ರ ಬದಲಾಗುತ್ತಿಲ್ಲ. ಕಳೆದ ತಿಂಗಳು ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಬಳಿ ಅವಳಿ ಮಕ್ಕಳ ತಾಯಿಯನ್ನ ಸೂತಕ ಎಂದು ಊರಾಚೆ ಇಡಲಾಗಿತ್ತು. ಒಂದು ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೇ ಮತ್ತೊಂದು ಮಗು ಒಂದು ತಿಂಗಳ ಬಳಿಕ ಸಾವನ್ನಪಿತ್ತು. ಈ ಘಟನೆಗೆ ಕಾರಣ ಆಗಿದ್ದು ಬಾಣಂತಿಯನ್ನು ಊರಿನಿಂದ ಆಚೆ ಇಟ್ಟದ್ದು. ಮಗುವಿಗೆ ಅತಿ ಶೀತ ಆಗಿ ಮಗು ಪ್ರಾಣಬಿಟ್ಟಿತ್ತು. ಮೌಡ್ಯದಿಂದ ಮಗು ಬಲಿಯಾದರೂ ಕೂಡ ಜಿಲ್ಲೆಯಲ್ಲಿ ಮತ್ತೆ ಅದೇ ಸಂಪ್ರದಾಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಾಣಂತಿ, ಶಿಶುವನ್ನು ಊರಿಂದ ಹೊರಗಿಟ್ಟ ಕಾಡುಗೊಲ್ಲ ಕುಟುಂಬ; ನಮ್ಮ ದೇವರಿಗೆ ಸೂತಕ ಆಗಲ್ಲ, ನಾವು ಬಿಟ್ಟುಕೊಳ್ಳಲ್ಲ ಎಂದ ಹಿರಿಯರು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿ ಬಳಿ ಕೆಲವು ದಿನಗಳಿಂದ ಮಗು ಹಾಗೂ ಬಾಣಂತಿಯನ್ನ ಊರಾಚೆ ಇಟ್ಟು ಮತ್ತೆ ಅದೇ ಸಂಪ್ರದಾಯ ಮುಂದುವರಿಸಿದ್ದಾರೆ. ಪ್ರಾಣಿಗಳಿಗೂ ಯೋಗ್ಯವಲ್ಲದ, ಊರಿನಿಂದ ಆಚೆ ಒಂದು ಚಿಕ್ಕ ಗುಡಿಸಿಲಿನಲ್ಲಿ ಮಗು ಬಾಣಂತಿಯನ್ನ ಇಡಲಾಗಿತ್ತು. ಈ ವಿಚಾರ ತಿಳಿದ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪನವರು ಗ್ರಾಮಕ್ಕೆ ಭೇಟಿ ನೀಡಿ ಮಗು ಹಾಗೂ ಬಾಣಂತಿ ರಕ್ಷಿಸಿ ಮಗುವನ್ನ ತಾವೇ ಕೈಗೆತ್ತಿಕೊಂಡು ಮನೆಗೆ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಘಟನೆ ಮತ್ತೆ ಮರುಕಳಿಸಿದರೇ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ‌ನೀಡಿ ಅರಿವು ಮೂಡಿಸಿದ್ದಾರೆ. ಸದ್ಯ ಮ‌ನೆಯೊಳಗೆ ಮಗು ತಾಯಿ ಸುರಕ್ಷಿತವಾಗಿದ್ದಾರೆ.

ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:02 am, Thu, 24 August 23