ಕಾಂಗ್ರೆಸ್​​ನಲ್ಲಿ ಸಿಎಂ ಹುದ್ದೆಗೆ 10 ನಾಯಕರು ರೇಸ್​ನಲ್ಲಿದ್ದಾರೆ, ಅದರಲ್ಲಿ ನಾನೂ ಒಬ್ಬ; ಜಿ.ಪರಮೇಶ್ವರ್

| Updated By: ಆಯೇಷಾ ಬಾನು

Updated on: Feb 16, 2023 | 1:12 PM

113ಕ್ಕಿಂತ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಿಎಂ ಆಗೋಕೆ ಎಲ್ಲಾರಿಗೂ ಆಸೆ ಇದೆ. ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಹುದ್ದೆಗೆ 10 ನಾಯಕರು ರೇಸ್​ನಲ್ಲಿದ್ದಾರೆ. ಅದರಲ್ಲಿ ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ.

ತುಮಕೂರು: ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಹುದ್ದೆಗೆ 10 ನಾಯಕರು ರೇಸ್​ನಲ್ಲಿದ್ದಾರೆ. ಅದರಲ್ಲಿ ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಡಾ.ಜಿ.ಪರಮೇಶ್ವರ್ ತಮ್ಮ ಮನದ ಬಯಕೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. 113ಕ್ಕಿಂತ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಅಂತಾ ಬೇರೆ ಇಲ್ಲ. ಕಾಂಗ್ರೆಸ್​ನಲ್ಲಿ ಜಾತಿಯಾಧಾರಿತ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ. ಆ ಸಂದರ್ಭಕ್ಕೆ ಯಾರು ಸಮರ್ಥರಿದ್ದಾರೆ ಅವರನ್ನು ಆಯ್ಕೆ ಮಾಡ್ತೀವಿ. ಪಕ್ಷದ ಧ್ಯೇಯೋದ್ದೇಶ ಮುನ್ನಡೆಸುವ ಸಾಮರ್ಥ್ಯ ಇದ್ದವರನ್ನು ಆಯ್ಕೆ ಮಾಡಲಾಗುತ್ತೆ.

ರಾಜಕೀಯ ಏನಿಕ್ಕೆ ಮಾಡ್ತಿದ್ದೀನಿ ಹೇಳಿ ನಾನು. ಅಧಿಕಾರಕ್ಕೆ ಬರಬೇಕು ಅಂತಾ ತಾನೇ, ಸಿಎಂ ಆಗೋಕೆ ಎಲ್ಲಾರಿಗೂ ಆಸೆ ಇದೆ. ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಹುದ್ದೆಗೆ 10 ನಾಯಕರು ರೇಸ್​ನಲ್ಲಿದ್ದಾರೆ. ಅದರಲ್ಲಿ ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ. ಆದರೆ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಹೈಕಮಾಂಡ್ ತೀರ್ಮಾನದಂತೆ ವಿಶ್ವಾಸವಿಟ್ಟು ಹೋಗ್ತಿವಿ ಎಂದರು. ಈ ಮೂಲಕ ತಾವೂ ಸಿಎಂ ಆಕಾಂಕ್ಷಿ ಎಂದು ಮನಸ ಮಾತನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: HDK again bats for Siddaramaiah | ದ್ವೇಷ ಮತ್ತು ಹಿಂಸೆ ಬಿಜೆಪಿ ನಾಯಕರ ಹಿಡನ್ ಅಜೆಂಡಾ: ಹೆಚ್ ಡಿ ಕುಮಾರಸ್ವಾಮಿ

ಕಾಂಗ್ರೆಸ್​ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ

ಇನ್ನು ಮತ್ತೊಂದೆಡೆ ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಕಾಂಗ್ರೆಸ್​ ಪಕ್ಷದಲ್ಲಿ 15 ಜನರು ಸಿಎಂ ಅಭ್ಯರ್ಥಿಗಳು ಇದ್ದೇವೆ. ಬರುವ ಚುನಾವಣೆಯಲ್ಲಿ 135 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ರು.

ಸಿಎಂ ಆಗುವ ಬಗ್ಗೆ ಪರಮೇಶ್ವರ್ ನೀಡಿದ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಸಿಎಂ ಹುದ್ದೆ ಕೇಳೋದ್ರಲ್ಲಿ ತಪ್ಪೇನಿದೆ. ಸಂಪೂರ್ಣವಾಗಿ ಅಧಿಕಾರಕ್ಕೆ ಬರ್ತೀವಿ ಅಂತಾ ವಿಶ್ವಾಸ ಇದೆ. ಹತ್ತಲ್ಲ ಹದಿನೈದು ಜನ ಸಿಎಂ ಅಭ್ಯರ್ಥಿಗಳು ಇದ್ದೀವಿ. ನಮ್ಮಲ್ಲಿ ಲೀಡರ್ ಶಿಪ್ ನೋಡಿ, ಬಿಜೆಪಿಯಲ್ಲಿ ಯಾರಿದ್ದಾರೆ? ನಾವು 135 ಸ್ಥಾನ ಗೆಲ್ಲುತ್ತೀವಿ. ಖರ್ಗೆ ಈಗಾಗಲೇ ಹೇಳಿದ್ದಾರೆ. ಎಲ್ಲಾರು ಒಗ್ಗಟ್ಟಾಗಿ ಕೆಲಸ ಮಾಡಿ ಅಂತಾ. 150 ಸೀಟು ಗೆಲ್ಲಬೇಕು ಅಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಸಿಎಂ ಅಭ್ಯರ್ಥಿ ಆಯ್ಕೆ ಆಮೇಲೆ. ಹೈಕಮಾಂಡ್ ತೀರ್ಮಾನ ಮಾಡಲಿದೆ. ರೇಸ್ ನಲ್ಲಿದ್ರೆ ಏನ್ ತೊಂದರೆ.

ಲಿಂಗಾಯತ ನಿಯೋಗ, ರಣದೀಪ್ ಸುರ್ಜೆವಾಲಾ ಭೇಟಿ ಮಾಡ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ಮಿಸ್ಟೇಕ್ ಆಗಿದ್ಯಾ ಅಂತಾ ತಿದ್ದಿಕೊಳ್ತಿದ್ದೀವಿ. ನೇಕಾರರು, ಜೈನ್ ಸಮುದಾಯದವರೂ ಕೇಳಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಬಿಜೆಪಿ, ಜೆಡಿಎಸ್ ನಿಂದ ಸೋಶಿಯಲ್ ಜಸ್ಟೀಸ್ ಸಿಗುತ್ತಾ? ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:09 pm, Thu, 16 February 23