Kannada News Photo gallery Orphaned husband killed by wife as she indulged in illicit relations with co brother in kunigal taluk in Tumkur
Kunigal: ಸ್ಪುರದ್ರೂಪಿ ಜೋಡಿ ಮದುವೆಯಾಗಿ ವರ್ಷ ಪೂರೈಸಿಲ್ಲ, ಆದ್ರೆ ದೊಡ್ಡಮ್ಮನ ಮಗನ ಜೊತೆ ಪತ್ನಿಯ ಅಕ್ರಮ ಸಂಬಂಧ, ಸುಪಾರಿ ಕೊಟ್ಟು ಅನಾಥ ಗಂಡನ ಹತ್ಯೆ
TV9 Web | Updated By: ಸಾಧು ಶ್ರೀನಾಥ್
Updated on:
Feb 14, 2023 | 3:10 PM
ಮಂಜುನಾಥನಿಗೆ (Orphan) ತಂದೆ ತಾಯಿ ಇಲ್ಲ. 90 ವರ್ಷದ ಅಜ್ಜಿ ಮಾತ್ರ ಇದ್ದಾರೆ. ಹರ್ಷಿತಾ ಅಣ್ಣ ರಘು ಜೊತೆ ಸದಾ ಫೋನಿನಲ್ಲಿ ಸಲುಗೆಯಿಂದ ಮಾತನಾಡುತಿದ್ದಳು ಎನ್ನಲಾಗಿದೆ. ಫೆಬ್ರವರಿ 3 ರಂದು ರಾತ್ರೋರಾತ್ರಿ ಬಂದು ಮಂಜುನಾಥನನ್ನು ಕೊಲೆ ಮಾಡಿ ಕಿತ್ತನಾಮಂಗಲ ಕೆರೆಯಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
1 / 7
ಆ ಸ್ಪುರದ್ರೂಪಿ ಜೋಡಿ ಮದುವೆಯಾಗಿ ಇನ್ನೂ ಒಂದು ವರ್ಷ ಪೂರೈಸಿಲ್ಲ. ಮಾರ್ಚ್ 13 ಕ್ಕೆ ವಿವಾಹದ ಮೊದಲ ವಾರ್ಷಿಕೋತ್ಸವ ಆಚರಣೆ ಮಾಡಬೇಕಿತ್ತು. ಆದರೆ ಪತ್ನಿಯ (wife) ಅಕ್ರಮ ಸಂಬಂಧಕ್ಕೆ ಗಂಡ ಬಲಿಯಾಗಿದ್ದಾನೆ. ನಿಜಕ್ಕೂ ಇದು ವಿಲಕ್ಷಣ ಘಟನೆ ಅನ್ನಬೇಕು. ಸ್ವತಃ ದೊಡ್ಡಮ್ಮನ ಮಗನ ಜೊತೆ ಅಕ್ರಮ ಸಂಬಂಧ (illicit relation) ಇಟ್ಟುಕೊಂಡ ನವ ವಿವಾಹಿತೆ ಸುಪಾರಿ ಕೊಟ್ಟು ಗಂಡನನ್ನೇ (husband) ಕೊಲೆ ಮಾಡಿಸಿದ್ದಾಳೆ.
2 / 7
ಕುಣಿಗಲ್ ನಲ್ಲಿ ರಾತ್ರಿ ಬರ್ತಡೆ ಆಚರಿಸಿಕೊಂಡ ಯುವಕ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಸ್ವತಃ ಹೆಂಡತಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋದು ಈಗ ಬಯಲಾಗಿದೆ. ಅಂದಹಾಗೆ ಕುಣಿಗಲ್ (kunigal) ತಾಲೂಕಿನ ಸೀನಪ್ಪನಹಳ್ಳಿಯಲ್ಲಿ ಘಟನೆ ಜರುಗಿದೆ. ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಕೊಲೆಗೆ ಸಂಬಂಧಿಸಿದಂತೆ ಅತನ ಹೆಂಡತಿ ಹರ್ಷಿತಾ ಸುಪಾರಿ ಕೊಟ್ಟಿದ್ದು, ಈಕೆಯ ಚಿಕ್ಕಮ್ಮನ ಮಗ ರಘು ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. (ವರದಿ: ಮಹೇಶ್, ಟಿವಿ 9, ತುಮಕೂರು)
3 / 7
ಹರ್ಷಿತಾ, ರಘು ಸೇರಿದಂತೆ ರವಿಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ. ಫೆಬ್ರವರಿ 3 ನೇ ತಾರೀಕು ಕುಣಿಗಲ್ ಪಟ್ಟಣದಲ್ಲಿ ಮಂಜುನಾಥ ಆತನ ಸ್ನೇಹಿತರೊಂದಿಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಸೀನಪ್ಪನಹಳ್ಳಿ ಗ್ರಾಮದ ಆತನ ಸ್ವಂತ ಮನೆಗೆ ಬಂದು ಮಲಗುತ್ತಾನೆ. ಆಗ ಮಧ್ಯ ರಾತ್ರಿ 12 ರ ಸಮಯದಲ್ಲಿ ಫೋನ್ ಕಾಲ್ ಬಂದಾಗ ಎದ್ದು ಹೊರ ಹೋಗುತ್ತಾನೆ. ಮತ್ತೆ ಮನೆಗೆ ವಾಪಾಸ್ಸು ಬರುವುದೇ ಇಲ್ಲ.
4 / 7
ಬದಲಿಗೆ, ಊರಿನಿಂದ ಒಂದು ಕಿ.ಮೀ ದೂರದಲ್ಲಿ ಇರುವ ಕಿತ್ನಾಮಂಗಲ ಕೆರೆಯಲ್ಲಿ ಶವ ಪತ್ತೆಯಾಗಿದ್ದ. ಈ ಸಂಬಂಧ ಗ್ರಾಮಸ್ಥರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿ, ತನಿಖೆ ಆರಂಭಿಸಿ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದಾರೆ. ಕೊಲೆಗೆ ಹೆಂಡತಿಯೇ ಸುಪಾರಿ ನೀಡಿರುವುದು ಆರೋಪಿಗಳನ್ನು ಪತ್ತೆ ಹಚ್ಚಿದಾಗ ತಿಳಿದು ಬಂದಿದೆ.
5 / 7
ಇನ್ನು ಹರ್ಷಿತಾ ಮೂಲತಃ ಮಾಗಡಿಯ ಸೋಲುರು ಬಳಿಯ ಒಂಭತ್ತನಗುಂಟೆಯವಳು. ಆರೋಪಿ ರಘು ಮತ್ತು ರವಿಕಿರಣ್ ಹರ್ಷಿತಾಳ ಸ್ವಂತ ದೊಡ್ಡಮ್ಮನ ಮಕ್ಕಳು. ಇವರು ಬೆಂಗಳೂರಿನ ಲಿಂಗದೀರನಹಳ್ಳಿಯವರು. ಅಂದಹಾಗೆ 2022 ನೇ ಮಾರ್ಚ್ 13 ರಂದು ಸೀನಪ್ಪನಹಳ್ಳಿಯಲ್ಲಿಯ ಮಂಜುನಾಥನ ಜೊತೆ ಹರ್ಷಿತಾ ಜೊತೆ ಮದುವೆಯಾಗಿರುತ್ತದೆ.
6 / 7
ಮಂಜುನಾಥನಿಗೆ (Orphan) ತಂದೆ ತಾಯಿ ಇಲ್ಲ. 90 ವರ್ಷದ ಅಜ್ಜಿ ಮಾತ್ರ ಇದ್ದಾರೆ. ಹರ್ಷಿತಾ ಅಣ್ಣ ರಘು ಜೊತೆ ಸದಾ ಫೋನಿನಲ್ಲಿ ಸಲುಗೆಯಿಂದ ಮಾತನಾಡುತಿದ್ದಳು ಎನ್ನಲಾಗಿದೆ. ಫೆಬ್ರವರಿ 3 ರಂದು ರಾತ್ರೋರಾತ್ರಿ ಬಂದು ಮಂಜುನಾಥನನ್ನು ಕೊಲೆ ಮಾಡಿ ಕಿತ್ತನಾಮಂಗಲ ಕೆರೆಯಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
7 / 7
ಈ ಕೊಲೆಗೆ ಸುಮಾರು 7 ಲಕ್ಷ ರೂ ಸುಪಾರಿ ನೀಡಲಾಗಿದೆ ಎನ್ನಲಾಗಿದೆ. ಕುಣಿಗಲ್ ಪೊಲೀಸರು ತನಿಖೆ ಆರಂಭಿಸಿದಾಗ ಈ ಮಾಹಿತಿ ಹೊರ ಬಂದಿದೆ. ಇನ್ನು ಒಟ್ಟು 7 ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಮೂವರನ್ನು ಬಂಧಿಸಿದ್ದಾರೆ.
Published On - 3:06 pm, Tue, 14 February 23