Valentine’s day: ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು: 40 Percent Love ಎಂದ ಕಾಂಗ್ರೆಸ್
ವ್ಯಾಲೆಂಟೆನ್ಸ್ ಡೇ ಪ್ರೇಮಿಗಳಿಗೆ ಮೀಸಲಾಗಿಸಿದ ದಿನ. ಈ ದಿನದಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಮಾರ್ಮಿಕವಾಗಿ ಟ್ವೀಟ್ ಮಾಡಿದೆ.
Updated on: Feb 14, 2023 | 3:07 PM

ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!! ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ.....!! #40PercentLove ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ!! ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ!#40PercentLove ಸಚಿವ ಪ್ರಭು ಚವ್ಹಾಣ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ! #40PercentLove ಸಂಸದ ತೇಜಸ್ವಿ ಸೂರ್ಯ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ! ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು! ಸಚಿವ ಆರ್. ಅಶೋಕ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

"ಪ್ರೀತಿ ಮಧುರ, ತ್ಯಾಗ ಅಮರ" ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ!! #40PercentLove ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ! "ಸಚಿವ ಹುದ್ದೆ" ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ! #40PercentLove ಶಾಸಕ ರೇಣುಕಾಚಾರ್ಯ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ. ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ! ಏಕೆಂದರೆ ಅದು - #40PercentLove !! ಗೃಹ ಸಚಿವ ಆರಗ ಜ್ಞಾನೇಂದ್ರ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್‌ಗೂ ಲವ್ವಾಗಿದೆ - PSI ಹುದ್ದೆಗಳ ಮೇಲೆ! #40PercentLove ಸಚಿವ ಅಶ್ವತ್ ನಾರಾಯಾಣ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಕನಸಲ್ಲೂ ನೀನೇ, ಮನಸಲ್ಲೂ ನೀನೇ, ಉಸಿರಲ್ಲೂ ನೀನೇ, ಹೆಸರಲ್ಲೂ ನೀನೇ. ಹೃದಯದ "ಆಕ್ಸಿಜನ್"! ಕಮಿಷನ್ ಕೊಡಿಸುವ, ಖಜಾನೆ ತುಂಬುವ "ಆಕ್ಸಿಜನ್" ಎಂದರೆ ಇವರಿಗೆ ಅದಮ್ಯ ಪ್ರೇಮ!! 40PercentLove ಡಾ. ಕೆ. ಸುಧಾಕರ್ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ! #40PercentLove ಶಾಸಕ ಸಿ ಟಿ ರವಿ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ.. ಆದರೆ ದ್ವೇಷವನ್ನೇ ಪ್ರೇಮಿಸಿದರೆ....!? ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!! #40PercentLove ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.

"ಸರಸ ಸಲ್ಲಾಪದ ಸಿಡಿಗಳು" ಬಿಜೆಪಿಗರ 'ಸಿಡಿ ಸಂಭ್ರಮ'ದ ಎಪಿಸೋಡ್‌ಗಳು ನೂರಾರಿವೆಯಂತೆ. ಯತ್ನಾಳರು ಹೇಳುವ ಸಿಡಿ ಸಿಡಿಯುವುದು ಯಾವಾಗ? 40PercentLove ಶಾಸಕ ಬಸವನಗೌಡ ಯತ್ನಾಳ ಫೋಟೋ ಬಳಸಿ ವ್ಯಂಗ್ಯ ಮಾಡಿದ್ದಾರೆ.
























