AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumkur News: ವಿದ್ಯುತ್ ಶಾಕ್​ನಿಂದ ನಾಲ್ವರಿಗೆ ಗಾಯ, 70 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಭಸ್ಮ

ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿ ಮನೆ ಮೇಲೆ ಬಿದ್ದು ಶಾರ್ಟ್​ಸರ್ಕ್ಯೂಟ್​​​ನಿಂದ ಒಂದೇ ಕುಟುಂಬದ ನಾಲ್ವರಿಗೆ ಗಾಯಗಳಾಗಿವೆ.

Tumkur News: ವಿದ್ಯುತ್ ಶಾಕ್​ನಿಂದ ನಾಲ್ವರಿಗೆ ಗಾಯ, 70 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಭಸ್ಮ
ಮನೆ ಮೇಲೆ ಬಿದ್ದ ವಿದ್ಯುತ್ ತಂತಿಯಿಂದ ಅವಘಡ
ಆಯೇಷಾ ಬಾನು
|

Updated on:Jun 13, 2023 | 3:00 PM

Share

ತುಮಕೂರು: ವಿದ್ಯುತ್ ಶಾಕ್​ ಹೊಡೆದು ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಕೊರಟಗೆರೆ ‌ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ(Tumkur Electrocuted). ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿ ತುಂಡಾದ ಪರಿಣಾಮ ಅವಘಡ ಸಂಭವಿಸಿದೆ. ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿವೆ.

ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿ ಮನೆ ಮೇಲೆ ಬಿದ್ದು ಶಾರ್ಟ್​ಸರ್ಕ್ಯೂಟ್​​​ನಿಂದ ಒಂದೇ ಕುಟುಂಬದ ನಾಲ್ವರಿಗೆ ಗಾಯಗಳಾಗಿವೆ. ಮನೆಯಲ್ಲಿದ್ದ ತಾಯಿ ಶಾರದಮ್ಮ(55), ಮಗ ಮಂಜುನಾಥ್(35), ಸೊಸೆ ವರಲಕ್ಷ್ಮೀ(30), ಮೊಮ್ಮಗ ದರ್ಶನ್(12)ಗೆ ಸುಟ್ಟ ಗಾಯಗಳಾಗಿದ್ದು ನಾಲ್ವರಿಗೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಕಡಿದು ಬಿದ್ದು ಈ ಅವಘಡ ಸಂಭವಿಸಿದೆ. ಗ್ರಾಮದ 70 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಮನೆಗಳಲ್ಲಿ ವಿದ್ಯುತ್​ ಶಾರ್ಟ್​ಸರ್ಕ್ಯೂಟ್​​ನಿಂದ ವೈರ್​ಗಳು, ಮೀಟರ್​, ಗೃಹೋಪಯೋಗಿ ವಸ್ತುಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿವೆ.

ಇದನ್ನೂ ಓದಿ: ಹೈದರಾಬಾದಿನ ಜಿಮ್​​​ ಕೇಂದ್ರದಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ ಜಿಮ್​​​ ಟ್ರೈನರ್​, ಬೆಂಕಿ ಹಾಕಿದ್ದು ಮಾಜಿ ಪತ್ನಿ ಮತ್ತು ಅವಳ ಗೆಳೆಯ

ವಿದ್ಯುತ್ ಅವಗಢದಿಂದ ಚೆನ್ನಿಗಪ್ಪ ಬಡಾವಣೆಯ 45ಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕವೇ ಕಡಿತವಾಗಿದೆ. ಬಡವರ ಮನೆಯಲ್ಲಿದ್ದ ಮೀಟರ್, ಟಿವಿ, ಫ್ಯಾನ್, ಫ್ರಿಡ್ಜ್, ಮೊಬೈಲ್ ಚಾರ್ಜರ್, ನೀರಿನ ಮೋಟಾರ್, ಸ್ವೀಚ್‌ಬೋರ್ಡ್ ಸೇರಿದಂತೆ ವಿದ್ಯುತ್ ವೈರ್‌ಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ ನಷ್ಟವಾಗಿದೆ. ಬಡವಾಣೆಯ ಜನರಿಗೆ ಇನ್ನೂ ಭಯದ ವಾತವರಣ ಹಾಗೇ ಉಳಿದಿದೆ.

ಸದ್ಯ ತಹಶೀಲ್ದಾರ್​​​ ಮುನಿಶಾಮಿ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡ ನಾಲ್ವರ ಆರೋಗ್ಯ ವಿಚಾರಿಸಿದ್ದಾರೆ. ಹಾಗೂ ಘಟನಾ ಸ್ಥಳಕ್ಕೆ ಮಧುಗಿರಿ ಡಿವೈಎಸ್​ಪಿ, ಕೊರಟಗೆರೆ ತಹಶೀಲ್ದಾರ್, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯುತ್ ತಂತಿ‌ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಸುಟ್ಟು ಕರಕಲಾದ ಗೃಹಪಯೋಗಿ ವಸ್ತುಗಳಿಗೆ ಶೀಘ್ರ ಪರಿಹಾರ ನೀಡುವುದಾಗಿ ಹಾನಿಗೊಳಗಾದ ಕುಟುಂಬಗಳಿಗೆ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬೆಸ್ಕಾಂ ಇಲಾಖೆಯ ಎಇ ಮಲ್ಲಣ್ಣ ನೇತೃತ್ವದ ಸಿಬ್ಬಂದಿ ತಂಡ ಘಟನೆಯ ರಾತ್ರಿಯಿಂದ ದಿನಪೂರ್ತಿ ಗ್ರಾಮದಲ್ಲೇ ಮೊಕ್ಕಾಂ ಹೂಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನಷ್ಟದ ಮಾಹಿತಿಯ ಅಂಕಿಅಂಶ ಕಲೆಹಾಕಿದ್ದಾರೆ.

ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:04 pm, Tue, 13 June 23