ಹೈದರಾಬಾದಿನ ಜಿಮ್​​​ ಕೇಂದ್ರದಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ ಜಿಮ್​​​ ಟ್ರೈನರ್​, ಬೆಂಕಿ ಹಾಕಿದ್ದು ಮಾಜಿ ಪತ್ನಿ ಮತ್ತು ಅವಳ ಗೆಳೆಯ

Gym trainer murder: ಪೊಲೀಸರ ತನಿಖೆಯಲ್ಲಿ ಜಯಕೃಷ್ಣ ಕೊಲೆ ಪ್ರಕರಣ ಬಯಲಾಗಿದೆ. ಜಯಕೃಷ್ಣನನ್ನು ಕೊಂದಿದ್ದು ಆತನ ವಿಚ್ಛೇದಿತ ಪತ್ನಿ ಎಂದು ತಿಳಿದುಬಂದಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿಯೇ ಕೊಂದಿದ್ದಳು.

ಹೈದರಾಬಾದಿನ ಜಿಮ್​​​ ಕೇಂದ್ರದಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ ಜಿಮ್​​​ ಟ್ರೈನರ್​, ಬೆಂಕಿ ಹಾಕಿದ್ದು ಮಾಜಿ ಪತ್ನಿ ಮತ್ತು ಅವಳ ಗೆಳೆಯ
ಹೈದರಾಬಾದಿನ ಕುಕ್ಕಟಪಲ್ಲಿ ಜಿಮ್​​​ ಕೇಂದ್ರದಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ ಜಿಮ್​​​ ಟ್ರೈನರ್
Follow us
ಸಾಧು ಶ್ರೀನಾಥ್​
|

Updated on:May 19, 2023 | 6:00 PM

ವಾರದ ಹಿಂದೆ ಕುಕ್ಕಟಪಲ್ಲಿ ಪ್ರಸನ್ನನಗರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸಂಚಲನ ಮೂಡಿಸಿತ್ತು. ಜಯಕೃಷ್ಣ ಎಂಬ ಜಿಮ್ ಟ್ರೈನರ್ ಜೀವಂತ ಸುಟ್ಟುಹೋಗಿದ್ದರು. ಆದರೆ ಆರಂಭದಲ್ಲಿ, ಅಪಘಾತವೆಂದು ಆನಂತರ ಅದು ಆತ್ಮಹತ್ಯೆಯೆಂದು ತಿಳಿದು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ಆದರೆ ತನಿಖೆಯ ವೇಳೆ ಪೊಲೀಸರಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಬೇರೆಯದ್ದೇ ಆಯಾಮ ಸಿಕ್ಕಿದೆ ಪ್ರಕರಣಕ್ಕೆ. ಜಿಮ್ ಟ್ರೈನರ್ ಸಾವಿನ ಪ್ರಕರಣದಲ್ಲಿ ನಿಗೂಢತೆ ಬೇಧಿಸಲಾಗಿದ್ದು ಅದು ಅಪಘಾತ ಅಥವಾ ಆತ್ಮಹತ್ಯೆಯಲ್ಲ, ಬದಲಿಗೆ ಯೋಜಿತ ಕೊಲೆ ಎಂಬುದು ಸ್ಪಷ್ಟವಾಗಿದೆ.

ಪೊಲೀಸರ ತನಿಖೆಯಲ್ಲಿ ಜಯಕೃಷ್ಣ ಕೊಲೆ ಪ್ರಕರಣ ಬಯಲಾಗಿದೆ. ಜಯಕೃಷ್ಣನನ್ನು ಕೊಂದಿದ್ದು ಬೇರಾರೂ ಅಲ್ಲ, ಅವರ ವಿಚ್ಛೇದಿತ ಪತ್ನಿ ಎಂದು ತಿಳಿದುಬಂದಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ, ಜಯಕೃಷ್ಣ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿರುವುದಾಗಿ ನಂಬಿಸಲು ಯತ್ನಿಸಿದ್ದಾಳೆ. ಮೃತಳ ತಂದೆಯ ದೂರಿನ ಮೇರೆಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ಆರಂಭಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಮೃತನ ವಿಚ್ಛೇದಿತ ಪತ್ನಿಯು, ಚಿನ್ನಾ ಎಂಬ ಬೇರೊಬ್ಬ ವ್ಯಕ್ತಿಯೊಂದಿಗೆ ಕಳೆದ ಐದು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇತ್ತೀಚೆಗೆ ಜಯಕೃಷ್ಣ ಅವರಿಗೆ ಈ ವಿಷಯ ತಿಳಿದು ಕುಟುಂಬವನ್ನು ಹೈದರಾಬಾದ್‌ನಿಂದ ಶಿಫ್ಟ್ ಮಾಡಲು ನಿರ್ಧರಿಸಿದ್ದರು. ಸರಿಯಾಗಿ ಆಗಲೇ… ತಮ್ಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಮಾಜಿ ಪತಿಯನ್ನು ದೂರ ಮಾಡಲು ಪ್ಲಾನ್ ಮಾಡಿ ಗೆಳೆಯನೊಂದಿಗೆ ಸ್ಕೆಚ್ ಹಾಕಿದ್ದಳು ವಿಚ್ಛೇದಿತ ಪತ್ನಿ. ಅಡ್ಡಬಂದ ಮಾಜಿ ಪತಿಯನ್ನು ‘ತೆಗೆಯಲು’ ಇಬ್ಬರೂ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದಾರೆ. ಬೆಂಕಿ ಹಚ್ಚಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದರು. ವಿಷಯ ತಿಳಿದ ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Fri, 19 May 23