ತುಮಕೂರು, ಅಕ್ಟೋಬರ್ 30: ಮಾಂಸಕ್ಕಾಗಿ ಎಂಟು ಬಾವಲಿ (bats) ಗಳನ್ನು ಕೊಂದಿದ್ದ ನಾಲ್ವರನ್ನು ಕುಣಿಗಲ್ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮಾಗಡಿ ತಾಲ್ಲೂಕಿನ ಹೊಂಬಾಳಮ್ಮ ಪೇಟೆಯ ರಂಗನಾಥ, ರಾಮಕೃಷ್ಣ, ಶಿವಶಂಕರ ಹಾಗೂ ರಂಗನಾಥ ಬಂಧಿತರು. ಕಾಡರಾಮನಹಳ್ಳಿ ಜಮೀನೊಂದರ ಮರದಲ್ಲಿದ್ದ ಎಂಟು ಬಾವಲಿಗಳನ್ನು ಆರೋಪಿಗಳು ಹೊಡೆದು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಹುಲಿಯೂರುದುರ್ಗ ವಲಯ ಅರಣ್ಯ ಅಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸತ್ತ ಬಾವಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರು: ಆತಂಕ ಸೃಷ್ಟಿಸಿದ್ದ ಆನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಕೊನೆಗೂ ಕಾಡಿಗಟ್ಟಿದ್ದಾರೆ. ಜಿಲ್ಲೆಯ ಸರಗೂರು ತಾಲೂಕಿನ ತೆರಣಿಮುಂಟಿ ಗ್ರಾಮದ ಬಳಿ ಆನೆ ಕಾಣಿಸಿಕೊಂಡಿತ್ತು. ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಮೈಸೂರು: ಈಜು ಬಾರದೆ ಕಾಲುವೆಯಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವು
ಕಬಿನಿ ಹಿನ್ನೀರು ಪ್ರದೇಶದ ರವಿರಾಮೇಶ್ವರ ದೇವಾಲಯದ ಬಳಿ ಆನೆ ಬಿಡುಬಿಟ್ಟಿತ್ತು. ಜಮೀನುಗಳಿಗೆ ತೆರಳುವ ವೇಳೆ ಎಚ್ಚರಿಕೆ ವಹಿಸುವಂತೆ ರೈತರಿಗೆ ತಿಳಿಸಿದ್ದರು. ಇದೀಗ ಆನೆಯನ್ನ ಬಂಡೀಪುರ ಅರಣ್ಯಕ್ಕೆ ಕಳುಹಿಸುವಲ್ಲಿ ಸಿಬ್ಬಂದಿಗಳು ಯಶಸ್ವಿ ಆಗಿದ್ದಾರೆ.
ಹುಬ್ಬಳ್ಳಿ: ಬೈಕ್ನ ಬ್ಯಾಗ್ನಲ್ಲಿದ್ದ ಹಣ ಕಳ್ಳತನ ಮಾಡಿದ್ದ ಕಳ್ಳನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಖಿಲ್ ಬಂಧಿತ ವ್ಯಕ್ತಿ. ಬಂಧಿತನ ಬಳಿ ಇದ್ದ 7.97 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಅ.26ರಂದು ಹಳೆಯ ಬಸ್ ನಿಲ್ದಾಣ ಬಳಿ ಸುನೀಲ್ ಜಾಡ್ ಎಂಬಾತನ 8 ಲಕ್ಷ ರೂ. ಕಳ್ಳತನ ಮಾಡಿದ್ದ.
ಮೈಸೂರು: ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಪಿಲಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಆಗಿದೆ. ಸುಮಾರು 35 ವರ್ಷದ ಅಪರಿಚಿತ ಮಹಿಳೆ ಶವ ಎಂದು ಗುರುತಿಸಲಾಗಿದೆ. ನದಿಯಲ್ಲಿ ಶವ ತೆಲುತ್ತಿದ್ದದ್ದನ್ನ ದೇವಾಲಯದ ಭದ್ರತಾ ಸಿಬ್ಬಂದಿ ನೋಡಿ, ನಂಜನಗೂಡಿನ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಮೂವರ ಸೆರೆ
ಸ್ಥಳಕ್ಕಾಗಮಿಸಿದ ಪೊಲೀಸರು ದೋಣಿ ನಡೆಸುವ ಅಂಬಿಗರಿಂದ ಶವ ಹೊರಕ್ಕೆ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.