ತುಮಕೂರು: ವಿದ್ಯುತ್ ತಂತಿ (Electrical Wire) ಹರಿದು ಬಿದ್ದು ಎರಡು ಹಸುಗಳು (Cows) ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್ನಲ್ಲಿ ಸಂಭವಿಸಿದೆ. ರೈತ ಶಿವಣ್ಣಗೆ ಸೇರಿದ ಎರಡು ಲಕ್ಷ ಬೆಲೆ ಬಾಳುವ ರಾಸುಗಳು ಮೃತಪಟ್ಟಿದ್ದು, ಕೂದಲೆಳೆಯ ಅಂತರದಲ್ಲಿ ರೈತ ಪ್ರಾಣಪಾಯದಿಂದ ಪಾರಾಗಿದ್ದಾರೆ. ತಂತಿ ಹರಿದು ಬೀಳುವುದನ್ನು ನೋಡಿ ಶಿವಣ್ಣ ದೂರಕ್ಕೆ ಓಡಿ ಹೋಗಿದ್ದಾರೆ. ಹೀಗಾಗಿ ಅವರ ಜೀವಕ್ಕೆ ಯಾವುದೇ ತೊಂದರೆಯಾಗಿಲ್ಲ. ವಿದ್ಯುತ್ ತಂತಿ ಹಳೆಯದಾದ ಪರಿಣಾಮ ಕೆಳಗೆ ಬಿದ್ದಿದೆ.
ಹೊಸ ತಂತಿ ಹಾಕುವಂತೆ ನಿವಾಸಿಗಳು ಈಗಾಗಲೇ ಬೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದರು. ವಾರದ ಹಿಂದೆ ಗುಬ್ಬಿ ಬೆಸ್ಕಾಂ ಅಧಿಕಾರಿಗಳಿಗೆ ನಿವಾಸಿಗಳು ಮನವಿ ಮಾಡಿದ್ದರು. ಆದರೆ ಯಾವುದೇ ಕೆಲಸಕ್ಕೆ ಮುಂದಾಗಿರಲಿಲ್ಲ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ದುರಂತ ನಡೆದಿದೆ ಎಂದು ರೈತ ಕುಟಂಬ ಆಕ್ರೋಶ ವ್ಯಕ್ತಪಡಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಗುಬ್ಬಿ ಪೋಲಿಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರೈಲಿಗೆ ಸಿಲುಕಿ ವ್ಯಕ್ತಿ ಸಾವು:
ತುಮಕೂರು: ಗುಬ್ಬಿ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಪರಿಚಿತ ವ್ಯಕ್ತಿಗೆ 35 ವರ್ಷ ಎಂದು ಹೇಳಲಾಗುತ್ತಿದೆ. ತುಮಕೂರು ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.
ಚಿರತೆ ದಾಳಿಗೆ ಹಸು ಬಲಿ:
ಮೈಸೂರು: ಚಿರತೆ ದಾಳಿ ನಡೆಸಿ ಹಸು ಬಲಿ ಪಡೆದಿರುವ ಘಟನೆ ಹುಣಸೂರು ತಾಲೂಕು ಕಚುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಮಹಿಳೆ ದಮಯಂತಿ ಎಂಬ ರೈತ ಮಹಿಳಗೆ ಸೇರಿದ ಹಸು ಸಾವನ್ನಪ್ಪಿದೆ. ಚಿರತೆ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Published On - 8:32 am, Sat, 14 May 22