ತಿಪಟೂರು: ತಿಪಟೂರು NH 206 ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದೆ. ದ್ವಿಪಥದಿಂದ ಚತುಷ್ಪಥ ರಸ್ತೆಯಾಗಿ ವಿಸ್ತರಣೆ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂ(ನವೆಂಬರ್ 02) ಮಾಹಿತಿ ನೀಡಿದ್ದಾರೆ. ತಿಪಟೂರಿನ ಕೋಡಿ ಸರ್ಕಲ್ ನಿಂದ ಹುಚ್ಚಗೊಂಡನಹಳ್ಳಿ ಬೈ ಪಾಸ್ ತನಕ 4ಲೇನ್ ನಿರ್ಮಾಣ ಮಾಡಲಾಗುವುದು. 32.50 ಕೋಟಿ ವೆಚ್ಚದಲ್ಲಿ ಅಗಲೀಕರಣ ಮಾಡಲಾಗುವುದು ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
The project for widening of existing 2 lane road to 4 lane road from 72.390 km to 82.445 km of NH-206 (New NH-73) in Tiptur city limit of Karnataka,…
— Nitin Gadkari (@nitin_gadkari) November 2, 2022
206ರ ರಾಷ್ಟ್ರೀಯ ಹೆದ್ದಾರಿಯು ಆಂಧ್ರ ಪ್ರದೇಶದ ಚಿತ್ತೂರಿನಿಂದ ತುಮಕೂರು ಜಿಲ್ಲೆಯ ತಿಪಟೂರು, ಶಿರಾ, ಕಡೂರು, ಶಿವಮೊಗ್ಗ, ಶಿರಸಿ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರವನ್ನು ಸಂಪರ್ಕಿಸುತ್ತದೆ.
Published On - 3:38 pm, Wed, 2 November 22