ಗರ್ಭಿಣಿಯಾಗಿದ್ದ ಅವಿವಾಹಿತೆ, ಸ್ವಯಂ ಹೆರಿಗೆ ಮಾಡಿಕೊಂಡು ಹೆತ್ತಕೂಸನ್ನು ಬಯಲಿಗೆ ಎಸೆದಳು

| Updated By: ಸಾಧು ಶ್ರೀನಾಥ್​

Updated on: Jan 06, 2024 | 5:45 PM

ತುಮಕೂರಿನ ಅರೇಗುಜ್ಜನಹಳ್ಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಗ್ರಾಮದ ಅವಿವಾಹಿತ ಯುವತಿಯೊಬ್ಬಳು ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದು ಇದರಿಂದ ಸಮಾಜಕ್ಕೆ ಹೆದರಿ ಯಾರಿಗೂ ತಿಳಿಯದಂತೆ ಸ್ವಯಂ ಹೆರಿಗೆ ಮಾಡಿಕೊಂಡು ಹೆತ್ತಕೂಸನ್ನು ಬಯಲಿಗೆಸೆದಿದ್ದಾಳೆ.

ಗರ್ಭಿಣಿಯಾಗಿದ್ದ ಅವಿವಾಹಿತೆ, ಸ್ವಯಂ ಹೆರಿಗೆ ಮಾಡಿಕೊಂಡು ಹೆತ್ತಕೂಸನ್ನು ಬಯಲಿಗೆ ಎಸೆದಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
Follow us on

ತುಮಕೂರು, ಜ.06: ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ (Pregnant) 25 ವರ್ಷದ ಯುವತಿ ಸಮಾಜಕ್ಕೆ ಹೆದರಿ ಯಾರಿಗೂ ಗೊತ್ತಾಗದಂತೆ ಸ್ವಯಂ ಹೆರಿಗೆ ಮಾಡಿಕೊಂಡು ಹೆತ್ತಕೂಸನ್ನೇ ಬಯಲಿಗೆಸೆದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ. ಮಗುವಿನ ಜನನ ಮರೆಮಾಚಲು ಹೋಗಿ ಹಸುಗೂಸು (Foeticide)  ಸಾವಿಗೆ ಯುವತಿ ಕಾರಣಳಾಗಿದ್ದಾಳೆ. ಅಮ್ಮ ಮಾಡಿದ ತಪ್ಪಿಗೆ ಜಗತ್ತನ್ನೇ ಕಾಣದೆ ಹಸುಗೂಸೊಂದು ಪ್ರಾಣ ಕಳೆದುಕೊಂಡಿದೆ.

ತುಮಕೂರಿನ ಅರೇಗುಜ್ಜನಹಳ್ಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಗ್ರಾಮದ ಅವಿವಾಹಿತ ಯುವತಿಯೊಬ್ಬಳು ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದು ಇದರಿಂದ ಸಮಾಜಕ್ಕೆ ಹೆದರಿ ಯಾರಿಗೂ ತಿಳಿಯದಂತೆ ಸ್ವಯಂ ಹೆರಿಗೆ ಮಾಡಿಕೊಂಡು ಹೆತ್ತಕೂಸನ್ನು ಬಯಲಿಗೆಸೆದಿದ್ದಾಳೆ. ಮೋಸದ ಪ್ರೀತಿಯ ಜಾಲಕ್ಕೆ ಬಿದ್ದು ಗರ್ಭಿಣಿಯಾಗಿ ಅದನ್ನು ಹೇಗೆ ಸಮ್ಮಾಲಿಸಬೇಕು ಎಂದು ತಿಳಿಯಲಾಗದೆ ತನ್ನ ಕರುಳಬಳ್ಳಿಯನ್ನೇ ಕಿತ್ತೆಸೆದಿದ್ದಾಳೆ. ಪೋಷಕರು ಇಲ್ಲದ ಹಿನ್ನೆಲೆ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವತಿ ತಾನು ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆ ಈಕೆ ಮನೆಯಲ್ಲಿ ಸಡಿಲವಾದ ಬಟ್ಟೆ ಹಾಕಿ ಗರ್ಭ ಧರಿಸಿರೋದನ್ನೇ ಮುಚ್ಚಿಟ್ಟಿದ್ದಳು. ಮೊನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರ ಹೋಗಿ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ. ನಂತರ ಮಗುವನ್ನ ಅಲ್ಲಿಯೇ ಪಕ್ಕದಲ್ಲಿ ಎಸೆದು ಮನೆಗೆ ಬಂದಿದ್ದಾಳೆ.

ಇದನ್ನೂ ಓದಿ: ಆತಂಕಕಾರಿ ಬೆಳವಣಿಗೆ: ಗಡಿ ಜಿಲ್ಲೆ ಕೋಲಾರದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ನೂರರತ್ತ! ಕಾರಣವೇನು

ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿ ಪಾಪ ತೊಳೆದುಕೊಂಡಳು

ಇನ್ನು ಮಗುವನ್ನು ಬಯಲಿಗೆಸೆದು ಮನೆಗೆ ಬಂದ ತಕ್ಷಣ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಾಳೆ. ಬೆಳಗ್ಗೆ ಗ್ರಾಮಸ್ಥರ ಕಣ್ಣಿಗೆ ನವಜಾತ ಹೆಣ್ಣುಮಗುವಿನ ಶವ ಕಾಣಿಸಿದೆ. ಗ್ರಾಮದೆಲ್ಲೆಡೆ ಚರ್ಚೆ ಶುರುವಾಗಿದೆ. ಕೂಡಲೇ ಗ್ರಾಮಸ್ಥರು ತುಮಕೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಗೂ ಮಾಹಿತಿ ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಯುವತಿಯನ್ನು ಪತ್ತೆ ಹಚ್ಚಿ ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ನವಜಾತ ಶಿಶುವಿನ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಮೂಲತಃ ತುಮಕೂರಿನ ಗ್ರಾಮವೊಂದರ ನಿವಾಸಿಯಾಗಿದ್ದ ಯುವತಿ ಪೋಷಕರು ಇಲ್ಲದ ಹಿನ್ನೆಲೆ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದರೆ ಯುವಕನ ಜಾಲಕ್ಕೆ ಸಿಲುಕಿ ಬಾಳಲನ್ನೇ ಹಾಳು ಮಾಡಿಕೊಂಡಿದ್ದಾರೆ. ಗ್ರಾಮದೆಲ್ಲೆಡೆ ವಿಷಯ ಹರಿದಾಡುತ್ತಿದೆ. ಸದ್ಯ ಘಟನೆ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:02 pm, Sat, 6 January 24